

6th April 2025
-1743926975589.jpg)
ಬೆಂಗಳೂರು, ಏಪ್ರಿಲ್ 05-
ಬೆಂಗಳೂರಿನ ಪ್ರವಾಸಕ್ಕಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಚಿಲಿ ಗಣರಾಜ್ಯದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಹಾಗೂ ಅವರ ನಿಯೋಗವು ಇಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು. ಗೌರವಾನ್ವಿತ ರಾಜ್ಯಪಾಲರು ಚಿಲಿ ಗಣರಾಜ್ಯದ ಅಧ್ಯಕ್ಷರನ್ನು ಗುಲಾಬಿ ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಾಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹಾದೇವನ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಜಿ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಫಾಹಿಂ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿಲಿಯ ದೇಶದ ನಿಯೋಗದಲ್ಲಿ Mr. Alberto van Klaveren, Chilean Minister of Foreign Affairs, Mr. Juan Angulo, Chilean Ambassador to India. Mrs. Antonia Orellana, Minister of Women and Gender Equity, Mr. José Miguel Benavente President of the Production Development Corporation (CORFO), Mr. Pablo Zamora Director of Fundación Imagen Chile and Mr. Carlos Figueroa Advisor to the President ಸದಸ್ಯರು ಪ್ರತಿನಿಧಿಸಿದ್ದರು.
ಇವರೊಂದಿಗೆ ಶ್ರೀಮತಿ ಅಭಿಲಾಷಾ ಜೋಶಿ, ಚಿಲಿ ದೇಶದ ಭಾರತದ ರಾಯಭಾರಿ ಹಾಗೂ ಡಾ. ಪ್ರಫುಲ್, ಜಂಟಿ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಲ್ಯಾಟಿನ್ ಅಮೆರಿಕಾ ವಿಭಾಗ ಅವರು ಸಹ ಉಪಸ್ಥಿತರಿದ್ದರು.
ಚಿಲಿ ದೇಶದ ಅಧ್ಯಕ್ಷರಾದ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಅವರು 1986ರಲ್ಲಿ ಪಂಟಾ ಅರೆನಾಸ್, ಮ್ಯಾಗೆಲ್ಸನೆಸ್ ಮತ್ತು ಚಿಲಿಯನ್ ಆಂಟಾರ್ಟಿಕಾ ಪುದೇಶದಲ್ಲಿ ಜನಿಸಿದರು. ಚಿಲಿ ದೇಶದ ಇತಿಹಾಸದಲ್ಲಿ ಅತಿ ಕಿರಿಯ ಅಧ್ಯಕ್ಷರಾಗಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಬಗ್ಗೆ ಮಾಹಿತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ :
ಭಾರತ ದೇಶದ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಆಗಮಿಸಿದ ಚಿಲಿಯ ಅಧ್ಯಕ್ಷರನ್ನು ಕರ್ನಾಟಕದ ಮಾನ್ಯ ರಾಜ್ಯಪಾಲರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಕರ್ನಾಟಕವು ಜಾಗತಿಕ ಮಾಹಿತಿ ತಂತ್ರಜ್ಞಾನ ಹಾಗೂ ನಾವೀನ್ಯತೆ ಕೇಂದ್ರವಾಗಿರುವ ಬಗ್ಗೆ ನಿಯೋಗಕ್ಕೆ ವಿವರಿಸಿದರು.
ಭಾರತ ಮತ್ತು ಚಿಲಿ ದೇಶವು ಸೌಹಾರ್ದಯುತ ಸಂಬಂಧಗಳನ್ನು ಹೊಂದಿರುವ ಬಗ್ಗೆ ಚಿಲಿಯ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ, ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಬಲಗೊಂಡಿವೆ ಮತ್ತು ಐಟಿ ಮತ್ತು ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ಸಾಂಸ್ಕøತಿಕ ಸಂಬಂಧವನ್ನು ಹೆಚ್ಚಿನ ಸಹಯೋಗದಿಂದ ರೂಪಿಸಲು ಎರಡೂ ದೇಶಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರು, ಚಿಲಿ ದೇಶಕ್ಕೆ ಭೇಟಿ ನೀಡಲು ಗೌರವಾನ್ವಿತ ರಾಜ್ಯಪಾಲರನ್ನು ಆಹ್ವಾನಿಸಿದರು.
ವೈಜ್ಞಾನಿಕ ಸಂಶೋಧನೆಯಲ್ಲಿ ಕರ್ನಾಟಕದ ಬಲವಾದ ಅಡಿಪಾಯ ಮತ್ತು ಅದರ ವ್ಯವಹಾರ ಹಾಗೂ ನಾವೀನ್ಯತೆಯ ವಾತಾವರಣವು, ಬೆಂಗಳೂರನ್ನು ಸ್ಟಾರ್ಟ್ ಅಪ್ಗಳ ಮತ್ತು ಯುನಿಕಾರ್ನ್ಗಳ ಕೇಂದ್ರವಾಗಿ ಬೆಳೆಯಲು ಕಾರಣವಾಗಿದೆ.
ಕರ್ನಾಟಕ ಮತ್ತು ಚಿಲಿಯ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಸಂಶೋಧನೆ ಹಾಗೂ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮಗಳನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಿತು.
ಚಿಲಿಯಿಂದ ಖನಿಜಗಳು ಮತ್ತು ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ ಸಂಬಂಧಿತ ವ್ಯಾಪಾರ ಸಹಕಾರವನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಯಿತು. ಕರ್ನಾಟಕ ತನ್ನ ಪ್ರಸಿದ್ಧ ಕಾಫಿ, ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಕ್ಷೇತ್ರಗಳಲ್ಲಿ ಸಹಕಾರ ನೀಡುವುದಾಗಿ ತಿಳಿಸಲಾಯಿತು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ