

3rd May 2025

ಮಲ್ಲಮ್ಮ ನುಡಿ ವಾರ್ತೆ
ಅಫಜಲಪುರ: ಕೇಂದ್ರ ಸರ್ಕಾರ 2025,,26ನೇ ಸಾಲಿಗೆ ಕಬ್ಬಿನ ಬೆಲೆ ಕೇವಲ ಒಂದು ಕ್ವಿಂಟಲ್ ಗೆ 15 ರೂಪಾಯಿ ನಿಗದಿ ಮಾಡಿ 10, ಪೈಂಟ್ 25 ಸಕ್ಕರೆ ಇಳುವರಿ ಬರುವ ಮಾನದಂಡಕ್ಕೆ ಪ್ರತಿ ಟನ್ ಕಬ್ಬಿಗೆ ಕಟೌವು ಮತ್ತು ಸಾಗಾಣಿಕೆ ಒಳಗೊಂಡಂತೆ 3550 ರೂಪಾಯಿ ನಿಗದಿಪಡಿಸಿದೆ ಇದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ರೈತ ಕಬ್ಬು ಬೆಳೆಯಲು ಆಗುವ ಖರ್ಚು ವೆಚ್ಚವನ್ನು ಲೆಕ್ಕಿಸದೆ ಅ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಿರುವುದನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಕಲಬುರ್ಗಿ ವತಿಯಿಂದ ಖಂಡಿಸುತ್ತೇವೆ ಕಾರಣ ಕೂಡಲೇ ಎಫ್,ಆರ್,ಪಿ ಬೆಲೆಯನ್ನು ಮರುಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಸಮ್ಮತ ಬೆಲೆ ಕನಿಷ್ಠ ಎಫ್ ಆರ್ ಪಿ 5000 ನಿಗದಿಪಡಿಸಬೇಕೆಂದು ಒತ್ತಾಯಿಸುತ್ತೇನೆ ಕೇಂದ್ರ ಸರ್ಕಾರದ ಎಫ್ಆರ್ಪಿ ಬೆಲೆ ಆಧಾರವಾಗಿಟ್ಟುಕೊಂಡು ಸಕ್ಕರೆ ಕಾರ್ಖಾನೆಗಳು ಇಳುವರಿಯಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ತೋರಿಸಿ ರೈತರಿಗೆ ಕಡಿಮೆ ಬೆಲೆ ನೀಡುವ ಹುನ್ನಾರ ಮಾಡುತ್ತಾರೆ ಆ ಕಾರಣಕ್ಕಾಗಿ ರಾಜ್ಯ ಸರ್ಕಾರ ಕೂಡ ಸಕ್ಕರೆ ಕಾರ್ಖಾನೆಗಳ ಮೇಲೆ ಸೂಕ್ತ ನಿಗವಹಿಸಿ ತೂಕದಲ್ಲಿ ಇಳುವರಿಯಲ್ಲಿ ಮೋಸ ಆಗುವುದನ್ನು ತಡೆಯಬೇಕು ಮತ್ತು ಕೇಂದ್ರ ಸರ್ಕಾರದ ಎಫ್ ಆರ್ ಪಿ ಹಣ ಬಿಟ್ಟು ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ಬೆಲೆ ನಿಗದಿಪಡಿಸಲು ಮುಂದಾಗಬೇಕು
ರಾಜ್ಯದಲ್ಲಿ ತೊಗರಿ ಬೆಳೆ ನೆಟಿರೋಗ ಆವರಿಸಿ ತೊಗರಿ ಇಳುವರಿಯಲ್ಲಿ ಕುಂಠಿತವಾದರೂ ಕೂಡ ರೈತನಿಗೆ ಸರ್ಕಾರ ಪರಿಹಾರ ಕೊಡುತ್ತಿಲ್ಲ ಮತ್ತು ವಿಮೆ ಕಟ್ಟಿದ ರೈತರಿಗೆ ಬೆಳೆ ವಿಮೆ ಕೂಡಾ ಸಂದಾಯವಾಗುತ್ತಿಲ್ಲ
ರೈತನ ಸಂಕಷ್ಟವನ್ನು ಅರಿತುಕೊಂಡು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರ ಏಳಿಗೆಯನ್ನು ಬಯಸಬೇಕು ಎಂದುರು.

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ