

9th May 2025
-1746777391721.jpg)
ಮಲ್ಲಮ್ಮ ನುಡಿ ವಾರ್ತೆ
ಕಲಬುರಗಿ,ಮೇ.08 ಜಿಲ್ಲಾ ಮಾದಿಗ ಸಮಾಜ ಕಲಬುರಗಿಯ ಮುಖಂಡರಾದ ಶ್ರೀ ರಾಜು ಆರ್. ವಾಡೇಕರ್ ರವರು ಇಂದು ಕರೆದ ಪತ್ರಿಕಾಗೊಷ್ಠಿಗೆ ಮಾತನಾಡಿದರು
ಪರಿಶಿಷ್ಟ ಜಾತಿ ಒಳಮಿಸಲಾತಿಗಾಗಿ ಸುಮಾರು 30 ವರ್ಷಗಳಿಂದ ನಮ್ಮ ಮಾದಿಗ ಸಮಾಜದ ಸಂಘಟನೆಗಳು ಮತ್ತು ಸಮುದಾಯ ನಿರಂತರವಾಗಿ ವಿವಿಧ ರೀತಿಯ ಹೋರಾಟಗಳಾದ ಅರೆ ಬೆತ್ತಲೆ, ಸತ್ಯಾಗೃಹ, ಪ್ರತಿಭಟನೆ. ತಮಟೆ ಚಳುವಳಿ. ಇವ್ಯ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರ ನುಡಿದಂತೆ ನಡೆದಿದ್ದು, ಅಲ್ಲದೇ ಆಗಷ್ಟ-01 2024 ರಂದು ಸುಪ್ರೀಮ್ ಕೋರ್ಟ 7 ನ್ಯಾಯ ಮೂರ್ತಿಗಳ ಸಂವಿಧಾನ ಪೀಠವು ಆಯಾ ರಾಜ್ಯಗಳು ಒಳಮೀಸಲಾತಿ ನೀಡಬಹುದೆಂದು ನಿರ್ದೇಶನ ನೀಡಿದ ನಂತರ ಗೌರವಾನ್ವಿತ ನಿವೃತ್ತಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಏಕ ಸದಸ್ಯ ಪಿಬ್ಬ ವಿಚಾರಣಾ ಆಯೋಗವು ರಾಜ್ಯ ಸರ್ಕಾರ ರಚಿಸಲಾಗಿದ್ದು, ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆ ನೀಡಲು ತಿರ್ಮಾನಿಸಿದ್ದು, ಸ್ವಾಗತಿಸುತ್ತೇವೆ. ಅಲ್ಲದೇ ಬಹುದಿನಗಳ ಕನಸು ನನಸಾಗುವ ನಿಟ್ಟಿನಲ್ಲಿ ರಾಜ್ಯದ ಜಿಲ್ಲಾ ಮಟ್ಟದ ನಗರ ಮತ್ತು ತಾಲೂಕಾ ಮಟ್ಟದ ಸಮನ್ವಯ ಸಮಿತಿಗಳನ್ನು ರಚಿಸಿ ಸರ್ಕಾರ ಆದೇಶ ನೀಡಿದ್ದು, ಈ ಸಮೀಕ್ಷೆಯ ಉದ್ದೇಶವು ಪರಿಶಿಷ್ಟ ಜಾತಿ ಪಟ್ಟಿಗೆ
ಸೇರಿರುವ ಜನರಿಗೆ ಸಾಮಾಜೀಕ, ಆರ್ಥಿಕ, ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಳ್ಳುವ ಉದ್ದೇಶವಾಗಿದ್ದು.
ಇದು ನಮ್ಮ ಮಾದಿಗರ ಮನೆ: ಸಮೀಕ್ಷೆದಾರರು ನಿಮ್ಮ ಮನೆಗೆ ಆಗಮಿಸಿದಾಗ ತಮ್ಮ ಕುಟುಂಬದ ಎಲ್ಲಾ ಸದಸ್ಯರು ಮಾದಿಗ ಸಮುದಾಯಕ್ಕೆ ಸೇರಿದವರು ಕ್ರಮ ಸಂಖ್ಯೆ: 61 ರಲ್ಲಿ ಮಾದಿಗ ಎಂದೇ ನೋಂದಾಯಿಸುವ ಮೂಲಕ ಬಹುದಿನಗಳ ಕನಸು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆಗಾಗಿ ಎಲ್ಲರೂ ಸಹಕರಿಸಬೇಕು. ದಿನಾಂಕ: 05/05/2025 ರಿಂದ 17/05/2025 ರವರೆಗೆ ಮನೆ ಮನೆಗೆ ಭೇಟಿ ವಿಶೇಷ ಶಿಬಿರಗಳ ಸಮೀಕ್ಷೆ ದಿನಾಂಕ: 19/05/2025 ರಿಂದ 21/05/2025 ರ ಒಳಗೆ ಹಾಗು ಸ್ವಯಂ ಘೋಷನೆ ಆನ್ಲೈನ್ ಮೂಲಕ ದಿನಾಂಕ: 19/05/2025 ರಿಂದ 23/05/2025 ರವರೆಗೆ ಕಡ್ಡಾಯವಾಗಿ ಜಾತಿಗಣತಿಗಾರರು ಸಮೀಕ್ಷೆದಾರರು ತಮ್ಮ ತಮ್ಮ ಬಡಾವಣೆಗೆ, ಗ್ರಾಮಗಳಿಗೆ ಆಗಮಿಸಲಿದ್ದು, ನಾನು ಈ ಮಾಧ್ಯಮ ಮೂಲಕವಾಗಿ ಎಲ್ಲಾ ನಮ್ಮ ಮಾದಿಗ ಸಮುದಾಯದ ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ತಮ್ಮ ತಮ್ಮ ಕುಟುಂಬದ ಎಲ್ಲಾ ಸದಸ್ಯರುಗಳು ಕ್ರಮ ಸಂಖ್ಯೆ: 61 ರಲ್ಲಿ ಮಾದಿಗ ಎಂದೇ ನೋಂದಾಯಿಸುವ ಮೂಲಕ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆಗಾಗಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
ರಾಜು ಆರ್. ವಾಡೇಕರ. ಅವರು ತಿಳಿಸಿದರು
ಮುಖಂಡರು ಮಾದಿಗ ಸಮಾಜ ಕಲಬುರಗಿ.
ಈ ಸಂದರ್ಭದಲ್ಲಿ : ರಮೇಶ್ ವಡೆಕರ್ ರಂಜಿತ್ ಮೂಲಿಮನಿ ಮಂಜುನಾಥ್ ಶ್ರೀನಿವಾಸ್ ದಶರಥ ಇತರರೂ ಉಪಸ್ಥಿತರಿದ್ದರು

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ