

11th May 2025
-1746963886890.jpg)
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಪಟ್ಟಣದ ಭಾಲ್ಕೇಶ್ವರ ಮಂದಿರದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಸಂಬAಧ ದೇಶದ ಸೈನಿಕರನ್ನು ಅಭಿನಂದಿಸಿ, ಯಶಸ್ಸನ್ನು ಕೋರಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ನೆರವೇರಿತು. ಸಂಸದ ಸಾಗರ ಖಂಡ್ರೆ ಅವರು ವಿಶೇಷ ಪೂಜೆ ಸಲ್ಲಿಸಿ, ಸೈನಿಕರಿಂದ ದೇಶದ ರಕ್ಷಣಾಕಾರ್ಯ ಯಶಸ್ವಿಯಾಗಲಿ, ಭಯ ಮತ್ತು ಆತಂಕ ನಿವಾರಣೆಯಾಗಿ ಎಲ್ಲೆಡೆ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಗೊಳ್ಳಲಿ ಎಂದು ಪ್ರಾರ್ಥಿಸಿದರು.
ಕ್ಷೇತ್ರದ ಜನರು ದೇಶದ ಸೇನೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಯೋಧರಿಗೆ ಸಹಕಾರ ನೀಡಬೇಕು. ಎಲ್ಲರೂ ತಮ್ಮ ಗ್ರಾಮದ ದೇವಸ್ಥಾನ, ಮಸೀದಿ, ಚರ್ಚ್, ಬುದ್ಧ ವಿಹಾರಗಳಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ನೆರವೇರಿಸಿ ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷರಾದ ಬಸವರಾಜ ವಂಕೆ, ವಿಶಾಲ ಪೂರಿ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಸದಸ್ಯರಾದ ಜಯರಾಜ ಖಂಡ್ರೆ, ರಾಹುಲ ಪೂಜಾರಿ, ಮಾಜಿ ಸದಸ್ಯ ಮಹಾದೇವ ಸ್ವಾಮಿ, ಪ್ರಮುಖರಾದ ಅನಿಲ ಲೋಖಂಡೆ, ಕಾಶಿನಾಥ ಲದ್ದೆ, ಟಿಂಕು ರಾಜಭವನ ಸೇರಿದಂತೆ ಹಲವರು ಇದ್ದರು.

ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ-2026: ನಾಲ್ಕನೇ ಪೂರ್ವಭಾವಿ ಸಭೆ ಯಶಸ್ವಿ

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ