

17th June 2024

ದಾವಣಗೆರೆ: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವುದರೊಂದಿಗೆ ಶಿಸ್ತು, ಭಾತೃತ್ವ, ಸಂಯಮ, ಸಮಯಪ್ರಜ್ಞೆ ಹಾಗೂ ನಾಯಕತ್ವ ಬೆಳೆಸಿಕೊಳ್ಳಬೇಕೆದು ಶಾಸಕ ಕೆ. ಎಸ್.ಬಸವಂತಪ್ಪ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮರಬನಹಳ್ಳಿ ಗ್ರಾಮದಲ್ಲಿ ಭಾನುವಾರ ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಬದುಕಿನ ಸಾಮರಸ್ಯ ಬೆಳೆಯಲು ಎನ್ಎಸ್ಎಸ್ ಶಿಬಿರ ಯುವಕರಿಗೆ ಪೂರಕವಾಗಿದೆ.
10-00-8004 on 10-00- ಸಿಖರ ನಾಯಿಯ ಸ್ಥಳ : ಮರಬನಹಳ್ಳಿ, ಚೆನ್ನಗಿರಿ ತಾ, ದಾವಣಗರೇಟು,
ರಾಷ್ಟ್ರಪ್ರೇಮ, ದೇಶಭಕ್ತಿ ಬೆಳೆಯುತ್ತದೆ. ವೈಜ್ಞಾನಿಕ ಚಿಂತನೆಗಳ ಕುರಿತು ಚರ್ಚಿಸಬಹುದು. ಯುವ ಜನತೆ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳು ದೇಶದ ಆರ್ಥಿಕ ಭದ್ರತೆ ಕುರಿತು ವಿಶ್ಲೇಷಣೆ ಮಾಡುವ ಎಲ್ಲಾ ಅವಕಾಶಗಳನ್ನು ಈ ವಿಶೇಷ ಶಿಬಿರ ಕಲ್ಪಿಸುತ್ತದೆ. ಇದನ್ನು ಯುವ ಜನತೆ ಮೈಗೂಡಿಸಿಕೊಂಡರೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು
ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ, ಶಿಕ್ಷಣದೊಂದಿಗೆ ಬದು- ಕಿಗೆ ಪೂರಕವಾದ ಅಂಶಗಳು ಬಹುಮುಖ್ಯ ಎನ್ಎಸ್ಎಸ್ ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದು ಎಂದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.
ಆರ್.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ, ಗ್ರಾಮದ ಮುಖಂಡ ಶಂಕರಪಾಟೀಲ್, ಪ್ರಭಾಕರ್.ರಮೇಶ್, ಗ್ರಾಪಂ ಸದಸ್ಯರಾದ ರವಿಕುಮಾರ್. ಹನುಮಂತಪ್ಪ, ರೇವಣ್ಣ, ಎಸ್ಡಿಎಂಸಿ ಅಧ್ಯಕ್ಷ ದುರುಗೇಶ್.ಕೆಎಂಎಫ್ ಸದಸ್ಯ ಕಂಚುಗಾರನಹಳ್ಳಿ ಬಸಣ್ಣ, ಶಿಬಿರಾಧಿಕಾರಿ ಎಂ.ಡಿ.ಬಸವರಾಜ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ