


21st October 2025
ನಾಳಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಕೋರುವವರು ಯಾದಗಿರಿ ವಿಧಾನ ಸಭಾ ಕ್ಷೇತ್ರ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು

17th October 2025
ಚಿತ್ತಾಪೂರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ. ಕೂಲಿ ಸಮಾಜಕ್ಕೊಂದು ನ್ಯಾಯ ತಮಗೊಂದು ನ್ಯಾಯವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.

12th October 2025
ಮೂರ್ತಿಗೆ ಅವಮಾನ ಮಾಡಿದವರಿಗೆ ಗಡಿಪಾರು ಮಾಡಿ ಮಲ್ಲು ಪೂಜಾರಿ
ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತಗಾ ಗ್ರಾಮದಲ್ಲಿ ಶರಣಸಾಹಿತ್ಯದ ಶ್ರೇಷ್ಠ ಶರಣ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಗೆ ಭಗ್ನ ಮಾಡಿರುವುದು ಖಂಡನೀಯ.
ಈ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡುತ್ತಾ – “ಅಂಬಿಗರ ಚೌಡಯ್ಯನವರು ನಮ್ಮ ಸಮಾಜದ ಆದರ್ಶಪುರುಷರು. ಅವರ ಮೂರ್ತಿಯನ್ನು ಹಾಳುಮಾಡಿದ ಕೃತ್ಯವು ಕೇವಲ ಮೂರ್ತಿಗೆ ಮಾತ್ರವಲ್ಲ, ಸಂಪೂರ್ಣ ಸಮಾಜದ ಗೌರವಕ್ಕೆ ಅವಮಾನವಾಗಿದೆ,” ಎಂದು ಹೇಳಿದ್ದಾರೆ

25th September 2025
ಯಾದಗಿರಿ..
ವರದಿ. ಸುಧೀರ್ ಕೋಟಿ ಎಸ್. ಕೆ.
ವ್ಯಕ್ತಿಯೋರ್ವ ತನ್ನ ಮಕ್ಕಳನ್ನೇ ಕೊಂದು ಹಾಕಿದ
ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ದುಗನೂರ್ ಹಟ್ಟಿಯಲ್ಲಿ ಗುರುವಾರ (ಸೆ.25) ಬೆಳಿಗ್ಗೆ ನಡೆದಿದೆ.
ಹತ್ತಿಕುಣಿ ಗ್ರಾಮದ ಶರಣಪ್ಪ ದುಗನೂರು ತನ್ನ ಮಕ್ಕಳಾದ ಸಾನ್ವಿ (4.5 ವರ್ಷ) ಭಾರ್ಗವ (2 ವರ್ಷ) ಇಬ್ಬರನ್ನು ಮಂಚದ ಮೇಲೆ ಮಲಗಿದಾಗ ಕೊಡಲಿಯಿಂದ ಕೊಚ್ಚಿದ ರೀತಿಯಲ್ಲಿ ಕೊಲೆಗೈದಿರುವ ಅತ್ಯಂತ ಅಮಾನುಷ ಘಟನೆ ಇದಾಗಿದೆ ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಪ್ಪ ದುಗನೂರು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗ ಹೇಮಂತ (8) ತಪ್ಪಿಸಿಕೊಂಡು ಗಾಬರಿಯಿಂದ ಹೊರ ಬಂದಿದ್ದಾನೆ. ಗಾಯಾಳು ಹೇಮಂತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತನ್ನ ಮಕ್ಕಳ ಮೇಲೆ ಅನುಮಾನಪಟ್ಟು ತಂದೆಯೇ ಕೊಲೆಮಾಡಿರುವ ಸಂಶಯದ ಬಗ್ಗೆ ಇದೀಗ ಹತ್ತಿಕುಣಿ ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ. ಶರಣಪ್ಪ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.

19th August 2025
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಹುಟ್ಟು ಹಬ್ಬದ ಪ್ರಯುಕ್ತ ಪೆನ್ನು ನೋಟ್ ಬುಕ್ಸ್ ಮತ್ತು ಕಂಪಸ್ ಬಾಕ್ಸ್ ವಿತರಣೆ.
ಯಾದಗಿರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಜನ್ಮದಿನಾಚರಣೆಯ ಅಂಗವಾಗಿ ಅಭಿಮಾನಿ ಯಾದಗಿರಿ ನಗರದ ಲಿಂಗರಾಜ್ ಸ್ಮಾರಕ ಪ್ರೌಢ ಶಾಲೇಯಾ ಮಕ್ಕಳಿಗೆ ಕಾಫಿ ಪೆನ್ನು ಕಾಂಪಸ
ಪ್ಯಾಡ್ ವಿತರಣೆ.
ಬಡವರ ಬಂಧು, ರೈತರಪರ ನಾಯಕರು, ಯುವಕರ ಕಣ್ಮಣಿ, ಸ್ನೇಹ ಜೀವಿ, ಅಭಿವೃದ್ಧಿಯ ಹರಿಕಾರ, ನೆಚ್ಚಿನ ನಾಯಕರು"ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಅಭಿಮಾನಿ ಬಳಗದಿಂದ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಕರಣ್ ಸುಮ್ರಾ, ಮಲ್ಲು ಮುಂಡರಕೇರಿ ,ಮನೋಜ್ ಕುಮಾರ್, ವಿಶ್ವ ಮ್ಯಾಗೇರಿ, ಸತ್ಯಮಿತ್ರ, ಖುಶಾಲ್ ಸುಮ್ರಾ ಇದ್ದರು.

7th August 2025
ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ
ಗುರುಮಠಕಲ್ ಮತಕ್ಷೇತ್ರದ ಮಾಧ್ವಾರದಂತಹ ಗ್ರಾಮೀಣ ಭಾಗದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಶಾಖೆಯನ್ನು ಆರಂಭಿಸಿದ್ದು, ಸ್ವಾಗತಾರ್ಹ ಈ ಭಾಗದ ಜನರು ಬ್ಯಾಂಕ್ ನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.
ಸಮೀಪದ ಮಾಧ್ವಾರ ಗ್ರಾಮದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನವಾಗಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಗುರುಮಠಕಲ್ ತಾಲೂಕು ಕೇಂದ್ರದಲ್ಲೇ ಹೆಚ್ ಡಿಎಫ್ ಸಿ ಬ್ಯಾಂಕ್ ಬ್ಯಾಂಕ್ ಶಾಖೆ ಇಲ್ಲ ಅದರಲ್ಲಿ ಮಾಧವಾರ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದು ಸಂತಸದ ಸುದ್ದಿ. ಬ್ಯಾಂಕ್ ನ ಸ್ಥಾಪನೆಗೆ ಕಾರಣೀಭೂತರಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
. ಎಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕಾರಿಗಳು ಪ್ರತಿ ತಾಲೂಕು ಕೇಂದ್ರಗಳಲ್ಲಿ ತಮ್ಮ ಬ್ಯಾಂಕ್ ಶಾಖೆ ಪ್ರಾರಂಭಿಸುವಂತೆ ಕ್ಲಸ್ಟರ್ ಮುಖ್ಯಸ್ಥರಾದ ರವಿ ಸುರಪುರ ಅವರಿಗೆ ಹೇಳಿದರು.
ಇದಕ್ಕೂ ಮುನ್ನ ಯಾದಗಿರಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ಮಾತನಾಡಿ ಮಾಧವಾರ ಗ್ರಾಮದಲ್ಲಿ ಶಾಖೆ ಸ್ಥಾಪನೆ ಮಾಡುವ ಬಗ್ಗೆ ಆರ್ಥಿಕ ವಿಭಾಗದಿಂದಲೇ ಸೂಚನೆ ಬಂದಿತ್ತು. ಹೀಗಾಗಿ ಹೆಚ್ ಡಿಎಫ್ ಸಿ ಅವರು ಕೇವಲ ಒಂದು ತಿಂಗಳ ಕಾಲಾವಧಿಯಲ್ಲೇ ಶಾಖೆ ಸ್ಥಾಪನೆ ಮಾಡಿದ್ದಾರೆ. ಈ ಭಾಗದ ಪ್ರತಿಯೊಬ್ಬರೂ ಖಾತೆ ತೆಗೆದು ಬ್ಯಾಂಕ್ ನ ಲಾಭ ಪಡೆಕೊಳ್ಳುವಂತೆ ಸಲಹೆ ನೀಡಿದರು.
ಹೆಚ್ ಡಿಎಫ್ ಸಿ ಬ್ಯಾಂಕ್ ನ ಕ್ಲಸ್ಟರ್ ಹೆಡ್ ರವಿ ಸುರಪುರ ಅವರು ಮಾತನಾಡಿ ನಮ್ಮ ಬ್ಯಾಂಕ್ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಅಂತರ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಇತರ ಸೇವೆಗಳಿಗಿಂತ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ರಾಷ್ಟ್ರ, ರಾಜಧಾನಿ, ಜಿಲ್ಲಾ, ತಾಲೂಕು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಶಾಖೆಯನ್ನು ಪ್ರಾರಂಭಿಸಿ ಜನರಿಗೆ ಸೇವೆ ನೀಡುತ್ತಿದ್ದೇವೆ. ಇಲ್ಲಿ ಮನೆ, ಆಸ್ತಿ, ಬೆಳೆ, ವ್ಯಾಪಾರ, ಸೇರಿದಂತೆ ಇತ್ಯಾದಿ ಸೇವೆಗಳನ್ನು ಗ್ರಾಹಕರು ಪಡೆಕೊಳ್ಳಬಹುದು. ಯಾದಗಿರಿ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ್ ಕಟಕಟಿ, ಗ್ರಾಪಂ ಅಧ್ಯಕ್ಷ ಶಂಕ್ರಪ್ಪ, ಪಿಡಿಓ ಗಿರಿಮಲ್ಲಣ್ಣ, ವಲಯ ಮುಖ್ಯಸ್ಥರಾದ ರಾಮನಾರಾಯಣ, ಪ್ರಾದೇಶಿಕ ಮುಖ್ಯಸ್ಥರದ ಜಾರ್ಜ ಡಾ.ಕೋಸ್ಟಾ, ಶಾಖಾ ಮುಖ್ಯಸ್ಥರಾದ ಸಂತೋಷ ಕುಮಾರ ಸೇರಿದಂತೆ ಮುಂತಾದವರಿದ್ದರು.
ಸಕ ಕಂದಕೂರ ಜನಪರ ಕಾಳಜಿ ಶ್ಲಾಘನೀಯಾ
ಸರಕಾರದ ವಿವಿಧ ಯೋಜನಗಳ ಅಡಿಯಲ್ಲಿ ಜನರಿಗೆ ಮಂಜೂರಾದ ಸಾಲ, ಮತ್ತಿತರ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾದರೆ ಕೂಡಲೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಕರೆ ಬರುತ್ತೆ, ಕೆಲಸ ಆಗುವವರೆಗೂ ಅವರು ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ, ಇಡೀ ಜಿಲ್ಲೆಯ ಎಲ್ಲಾ ಶಾಸಕರಿಗಿಂತಲೂ ಗುರುಮಠಕಲ್ ಶಾಸಕರ ಕರೆಗಳು ಹೆಚ್ಚಿರುತ್ತವೆ. ಇಲ್ಲಿನ ಜನರ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ತಿಳಿಸಿದರು.

17th July 2025
ಹೆಸರು ಬೆಳೆಗಳಿಗೆ ಅಲ್ಲಲ್ಲಿ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ರೈತರು ಇದರ ತಡೆಗೆ ಕೃಷಿ ಇಲಾಖೆ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ. ಹೇಳಿದ್ದಾರೆ.

5th July 2025
ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಬಲವಾಗಿ ವಿರೋಧಿಸಲು ಈ ಶಾಂತಿಯುತ ಪ್ರದರ್ಶನವನ್ನು ನಡೆಸಲಾಯಿತು. ಸಂಸತ್ತಿನಲ್ಲಿ ತಡರಾತ್ರಿ 3:30 ರ ಸುಮಾರಿಗೆ ವಿವಾದಾತ್ಮಕವಾಗಿ ಅಂಗೀಕರಿಸಲ್ಪಟ್ಟ ಮಸೂದೆಯು ಮಸೀದಿಗಳು, ಮದರಸಾಗಳು ಮತ್ತು ಸ್ಮಶಾನಗಳು ಸೇರಿದಂತೆ ವಕ್ಫ್ ಆಸ್ತಿಗಳನ್ನು ಕಾನೂನುಬದ್ಧವಾಗಿ ಅತಿಕ್ರಮಿಸಲು ಪ್ರಯತ್ನಿಸುತ್ತಿದೆ
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೊಹಮ್ಮದ್ ಫೈಜ್ ದರ್ಜಿ,
"ವಕ್ಫ್ ಆಸ್ತಿ ಸರ್ಕಾರಿ ಆಸ್ತಿಯಲ್ಲ ಅದು ಅಲ್ಲಾಹನ ಆಸ್ತಿ. ಅದನ್ನು ವಶಪಡಿಸಿಕೊಳ್ಳುವ ಅಥವಾ ಖಾಸಗೀಕರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಈ ಮಸೂದೆಯು ಮೋದಿ ಸರ್ಕಾರವು ಮುಸ್ಲಿಂ ಭೂಮಿಯನ್ನು ವಶಪಡಿಸಿಕೊಂಡು ತಮ್ಮ ಕಾರ್ಪೊರೇಟ್ ಮಿತ್ರರಿಗೆ ಹಸ್ತಾಂತರಿಸುವ ಸ್ಪಷ್ಟ ಪ್ರಯತ್ನವಾಗಿದೆ. ಈ ಅನ್ಯಾಯ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಈ ಮಸೂದೆಯನ್ನು ಹಿಂತೆಗೆದುಕೊಳ್ಳುವವರೆಗೆ ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು
ಡಾ. ಮೊಹಮ್ಮದ್ ಫೈಜ್ ದರ್ಜಿ, ಅವರು ಹೇಳಿಕೆ ನೀಡಿದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಮೌಲಾನಾ ನಿಜಾಮುದ್ದೀನ್ ಸಾಹಬ್ ಮಸೂದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳಿಗೆ ಬೆದರಿಕೆ ಹಾಕುವುದಲ್ಲದೆ, ಧಾರ್ಮಿಕ ದತ್ತಿಗಳ ಮೇಲೆ ಸರ್ಕಾರ ಅತಿಕ್ರಮಣ ಮಾಡುವ ಅಪಾಯಕಾರಿ ಪೂರ್ವನಿದರ್ಶನವನ್ನು ಸಹ ಸ್ಥಾಪಿಸುತ್ತದೆ ಎಂದು ಅವರು ಮನವಿ ಮಾಡಿದ್ದಾರೆ
ವಕ್ಫ್ ಮಸೂದೆಯನ್ನು ರದ್ದುಗೊಳಿಸುವವರೆಗೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸುವ ಸಾಮೂಹಿಕ ಪ್ರತಿಜ್ಞೆಯೊಂದಿಗೆ ಪ್ರತಿಭಟನೆ ಕೊನೆಗೊಂಡಿತು.

27th June 2025
ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ, ಅಕ್ರಮವಾಗಿ ಆಶ್ರಯ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಾಗುವುದು, ಇದರಲ್ಲಿ ಯಾವುದೇ ಮುಲಾಜಿ ಇಲ್ಲವೆಂದು ಸ್ಥಳದಲ್ಲಿದ್ದವರಿಗೆ ಹೇಳಿದರು.
ಸ್ಥಳ ಪರಿಶೀಲನೆ ವೇಳೆ ಸುಮಾರು ೩೦ಕ್ಕೂ ಹೆಚ್ಚು ಖಾಲಿ ನಿವೇಶನಗಳು ಕಂಡು ಬಂದರೆ, ಇದೇ ವೇಳೆ ಜೆಸ್ಕಾಂ ಮೇನ್ ಲೈನ್ ವಿದ್ಯುತ್ ಸರಬರಾಜಿಗಾಗಿ ಹಾಕಲಾಗಿರುವು ಹೈಟೆನ್ಸ್ನ್ ವೈರ್ ಕೆಳಗೆ ಕೆಲವು ಜನರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಕುಪಿತರಾದ ಅಧ್ಯಕ್ಷರು, ಇಂತಹ ಅಪಾಯ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡಿದ್ದೀರಿ, ಇದರಿಂದ ಅನಾಹುತವಾದರೆ ಯಾರು ಹೊಣೆ ಕೂಡಲೇ ಜೆಸ್ಕಾಂ ಇಲಾಖೆಗೆ ಪತ್ರ ಬರೆದು ಕ್ರಮಕೈಗೊಳ್ಳವಂತೆ ಸ್ಥಳದಲ್ಲಿದ್ದ ಪೌರಾಯುಕ್ತ ಉಮೇಶ ಚವ್ಹಾಣ ಅವರಿಗೆ ಸೂಚಿಸಿದರು.
ಆಶ್ರಯ ಲೇಔಟ್ನಲ್ಲಿ ಯಾರೂ ಅತಿಕ್ರಮಿಸಬಾರದು, ಒಂದು ವೇಳೆ ಯಾರಾದರೂ ಅಕ್ರಮವಾಗಿ ಲೇಔಟ್ನಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು, ಹೈಟೆನ್ಸ್ನ್ ವೈರ್ ಕೆಳಗಡೆ ಮನೆ ನಿರ್ಮಿಸಿಕೊಂಡವರು ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ರುಖಿಯಾ ಬೇಗಂ, ಸದಸ್ಯರಾದ ವಿಜಯಲಕ್ಷಿö್ಮÃ, ಮಂಜುನಾಥ ದಾಸನಕೇರಿ, ಅಂಬಯ್ಯ ಶಾಬಾದಿ, ಚನ್ನಕೇಶಗೌಡ ಬಾಣತಿಹಾಳ, ಮಶೆಪ್ಪ ನಾಯಕ, ಹಣಮಂತ ನಾಯಕ, ಹಣಮಂತ ಇಟಗಿ, ವಾಹಬ್, ಇಸ್ಮಾಯಿಲ್ಖಾನ್, ವೆಂಕಟರಡ್ಡಿ ಹೊನಕೇರಿ, ಮನ್ಸೂರ್ ಅಹ್ಮದ್, ಗಣೇಶ ದುಪ್ಪಲ್ಲಿ, ಖಲೀಂ, ಚಂದ್ರಕಾAತ ಮಡ್ಡಿ, ನಗರಸಭೆ ಎಇಇ ರಜನಿಕಾಂತ ಶೃಂಗೇರಿ, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಅಂಬಿಕೇಶ್ವರ, ಮಲ್ಲಿಕಾರ್ಜುನ ಕುರಕುಂಬಳ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಇದ್ದರು.

18th June 2025
ರಾಜ್ಯ ಕಾರ್ಯಾಲಯದಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅಭಿನಂದನೆ.
ಯಾದಗಿರಿ:ಯಾದಗಿರಿ ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರಿಗೆ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು
ನೇಮಕಾತಿ ಆದೇಶಪತ್ರವನ್ನು ನೀಡಿ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು ಹಾಗೂ ಪಕ್ಷದ ಸಂಘಟನೆಗಾಗಿ ಮತ್ತು ಬಲವರ್ಧನೆಗೆ ನಿರಂತರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯ ಸ್ವಾಮಿ
ಮಾಜಿ ಸಚಿವ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ಪಕ್ಷದ ಚುನಾವಣಾ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.