

28th December 2024

ಯಾದಗಿರಿ:ಸರಕಾರಿ ಪ್ರೌಢಶಾಲೆ ಅರಕೇರಾ (ಕೆ) ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಚಾಂದಸಾಬ ಎಂ ಚೌಕಿಯವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ವತಿಯಿಂದ ನೀಡುತ್ತಿರುವ 2025ನೇ ಸಾಲಿನ ರಾಷ್ಟ್ರಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯ ಕೃಷಿ ಮಾಡುವ ಪ್ರಯತ್ನ ನಿರಂತರವಾಗಿ ಮಾಡುತ್ತಿರುವುದು ಕವನಗಳು ಹಾಗೂ ಕಥೆಗಳು ಬರವಣಿಗೆ ಮಾಡುವ ಮೂಲಕ ಸಾಹಿತ್ಯ ಕೃಷಿಗೆ ತೊಡಗಿರುವುದು ಹಾಗೂ ಶಾಲಾ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಗತಿಗೆ ನಿರಂತರ ಶ್ರಮಿಸುತ್ತಿರುವ ಇವರು ಯಾದಗಿರಿ ಜಿಲ್ಲೆಯ ಶೆಟ್ಟಿಗೇರಾ ಗ್ರಾಮದಲ್ಲಿ ಜನಿಸಿದರು. ಬಡತನದಿಂದ ಬಂದ ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಲಿಂಗೇರಿ ಸ್ಟೇಷನ್ ನಲ್ಲಿ ಪಡೆದು ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಸರಕಾರಿ ಕಾಲೇಜು ಯಾದಗಿರಿಯಲ್ಲಿ ಪೂರೈಸಿದರು.
Sudhir koty

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ