

31st December 2024

ಯುಗಾದಿ ನಮ್ಮ ಹೊಸವರ್ಷ ಇದು ಪಾಶ್ಚಾತ್ಯರ ವರ್ಷ
ರೈತಬೆಳೆದ ಫಲಹಾರ ಸೇವಿಸಿ ವಿಶೆಷ್ಟ ರೀತಯಲ್ಲಿ ಸ್ವಾಗತಿಸಿದ ಉಮೇಶ ಕೆ ಮುದ್ನಾಳ
ವರದಿ: ಸುಧೀರ್ ಕೋಟಿ ಎಸ್. ಕೆ.
ಹಣ್ಣು ಹಂಪಲು, ತರಕಾರಿ ಸೇವಿಸಿ ವಿನೂತನ ಹೊಸವರ್ಷ ಆಚರಿಸಿದ, ಉಮೇಶ ಕೆ. ಮುದ್ನಾಳ
ಜಿಲ್ಲಾ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ರೈತ ಬೆಳೆದ ಹಣ್ಣು ಹಂಪಲು, ತರಕಾರಿ ಮತ್ತು ಕಬ್ಬಿನ ಹಾಲು ಸೇವಿಸುವ
ಮೂಲಕ ವಿನೂತನವಾಗಿ ೨೦೨೫ ಹೊಸ ವರ್ಷವನ್ನು ಆಚರಿಸಲಾಯಿತು.
ನಗರದ ಸ್ಟೇಷನ್ ಪ್ರದೇಶದಲ್ಲಿರುವ ಕಚೇರಿಯಲ್ಲಿ ಸಮಾಜದ ಬಾಂಧವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ೨೦೨೫ರ ಹೊಸ ವರ್ಷಆಚರಣೆ ಸಂಭ್ರಮವನ್ನು ಬರಮಾಡಿಕೊಂಡರು
ಇದೇ ವೇಳೆ ಮಾತನಾಡಿದ ಕರ್ನಾಟಕ ಪ್ರದೇಶಿಕ ಕೋಲಿ ಸಮಾಜ ರಾಜ್ಯಾ ಸಂಘಟನಾ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ದಾಳ ಅವರು, ಹೊಸ ವರ್ಷವನ್ನು ರೈತ ಬೆಳೆದ ಫಲಾಹಾರ ಸೇವಿಸುವ ಮೂಲಕ ಸ್ವಾಗತಿಸಿದ್ದರು. ಇದರಿಂದ ಆರೋಗ್ಯದಲ್ಲಿ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ. ಒಳ್ಳೆಯ ಬೆಳವಣಿಗೆಗೆ ನಾಂದಿಯಾಡಿದAತೆ ಆಗುತ್ತದೆ ಎಂದರು.
ಈಗಾಗಲೇ ಹೊಸ ವರ್ಷ ಬಂದರೆ ಯುವಕರು ಮದ್ಯ-ಮಾಂಸಗಳ ಸೇವನೆ ಮಾಡಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ತಮ್ಮ ತನವನ್ನೆ ಮರೆತು ಮನಬಂದAತೆ ನರ್ತಿಸಿ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸಿ
ಶಿಷ್ಟಾಚಾರವೇ ಇಲ್ಲದಂತೆ ಆಚರಿಸುವದು ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳ ಆಚರಣೆಗಳಿಗೆ ಮನಸೋತು ನಮ್ಮ ಸಂಸ್ಕೃತಿಯನ್ನೇ ಮರೆತು, ನಾವು ಮನಬಂದAತೆ ವರ್ತಿಸುವುದು ದೇಶಕ್ಕೆ ಶೋಭೆ ತರುವಂತದ್ದಲ್ಲ. ಇಂದಿನ ಕೆಲವು ಯುವ ಜನತೆ ಹಿರಿಯರು, ಕಿರಿಯರು ಹೊಸ
ವರ್ಷ ಸಂಭ್ರಮಾಚರಣೆಯಲ್ಲಿ ವಿಪರೀತ ಕುಡಿದು ಮುಖ್ಯ ರಸ್ತೆಗಳಲ್ಲಿ ಕುಣಿಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದರು.
ನಮ್ಮ ಭಾರತದ ಪರಂಪರೆ ಬಿಂಬಿಸುವAತೆ ಬಡ ರೈತರು ಬೆಳೆದಿರುವ ಕಲ್ಲಂಗಡಿ, ನೆಲಕಟ್ಟು, ತರಕಾರಿ, ಹಣ್ಣು ಹಂಪಲುಗಳು ಸೇವಿಸಿ ಕುಟುಂಬ ಸಮೇತ ಸುಖ ಶಾಂತಿ ನೆಮ್ಮದಿಯಿಂದ ಹರ್ಷಪಟ್ಟು ಹೊಸ ವರ್ಷವನ್ನು
ವಿನೂತನವಾಗಿ ಸ್ವಾಗತಿಸುವುದು ಬಹಳ ಒಳ್ಳೆಯದು. ಇವುಗಳಿಂದ ರೋಗಿ ಕೂಡ ನಿರೋಗಿಯಾಗುತ್ತಾನೆ. ಇದರಿಂದ ಮಕ್ಕಳಿಗೂ, ವೃದ್ಧರಿಗೂ, ಸ್ತ್ರೀಯರಿಗೂ ಹಾಗೂ ಎಲ್ಲಾರಿಗೂ ಒಳ್ಳೆಯದೆ ಆಗುವುದೆಂದು ಹೇಳಿದರು.
ತೀವ್ರ ಅತಿವೃಷ್ಠಿ ಇಂದಿನ ದಿನಗಳಲ್ಲಿ ರೈತನು ಬೆಳೆದ ನೆಲಕಬ್ಬು ಕಲ್ಲಂಗಡಿ, ತರಕಾರಿಗಳು ಬಳಸಿ ಹಬ್ಬ ಆಚರಣೆ ಮಾಡುವುದರಿಂದ ರೈತರಿಗೆ ನೆರವಾದಂತೆ ಆಗುತ್ತದೆ ಈ ರೀತಿಯಾಗಿ ಹೊಸ ವರ್ಷ ಆಚರಣೆ ಮಾಡಬೇಕೆಂದು ಹೇಳಿದರು.
ಇದೇ ಸಂಧರ್ಬದಲ್ಲಿ ಲಕ್ಷö್ಮಣ, ಹಣಮಂತ, ನರಸಿಂಲೂ, ವಿಶ್ವಾನಾಥ, ಆಂಜನೇಯ, ರಫಿಕ್ ಪಟೇಲ್, ನಾರಾಯಣ, ಬಾಬಖಾನ್, ಮಹೇಶ, ರಾಜು, ಪ್ರಭು, ಹಣಮಯ್ಯ, ಸಾಬಯ್ಯ, ಮಲ್ಲಯ್ಯ, ಮಹೇಶ, ಹುಸೇನ್, ಈಶಪ್ಪ, ಆಶಪ್ಪ ಚಂಧ್ರು, ರವಿ, ರಾಮು, ತಾಯಪ್ಪ, ಆನಂದ, ಶಿವಶರಣಪ್ಪಮ, ಸಾಬಯ್ಯ, ನೈಯಮ್ಶೇಟ್, ಗುಲಾಮನಬಿ, ಗಣೇಶ, ಮಲ್ಲಣ್ಣಗೌಡ, ಬಸವರಾಜ, ಬನಶಂಕರ, ಮಹೇಶ, ಹುಸೇನ್ ಪಟೇಲ್, ಬಾಬಾಅಜೀಜ್, ಮುತ್ತುರಾಜ ನರಸಿಂಲೂ,
ಇನ್ನಿತರರಿದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ