

31st December 2024

*ವಿಕಲಚೇತನರ ಬಸ್ ಪಾಸ್ ಅವಧಿ ಫೆ.28ರ ವರೆಗೆ ವಿಸ್ತರಣೆ*
2024ನೇ ಸಾಲಿನಲ್ಲಿ ಪಡೆಯಲಾದ ವಿಕಲಚೇತನರ ರಿಯಾಯಿತಿ ಪಾಸ್ ಗಳ ಅವಧಿ 2025ರ ಫೆಬ್ರವರಿ 28ರ ವರೆಗೆ ವಿಸ್ತರಿಸಿದ್ದು, ಹಳೇ ಪಾಸ್ ತೋರಿಸಿ ವಿಶೇಷಚೇತನರು ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ ಎಂದು ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಯಾದಗಿರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ 2024ನೇ ಸಾಲಿನಲ್ಲಿ ನೀಡಲಾದ ವಿಕಲಚೇತನರ ಬಸ್ ಪಾಸ್ ಗಳ ಅವಧಿ ಡಿಸೆಂಬರ್ 30ಕ್ಕೆ ಮುಕ್ತಾಯಗೊಂಡಿರುವುದರಿಂದ ಫೆಬ್ರವರಿ 28 ರೊಳಗೆ ಆಯಾ ತಾಲೂಕಿನ ಬಸ್ ನಿಲ್ದಾಣಗಳಲ್ಲಿ 660 ರೂ. ಪಾವತಿಸಿ ನವೀಕರಿಸಬಹುದಾಗಿರುತ್ತದೆ. ಫೆಬ್ರವರಿ 28ರ ನಂತರ ಯಾವುದೇ ಕಾರಣಕ್ಕೂ ಬಸ್ ಪಾಸ್ ಅವಧಿ ವಿಸ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಹೊಸ ಬಸ್ ಪಾಸ್ ಗಳನ್ನು ಪಡೆದುಕೊಳ್ಳಲು ಬಯಸುವ ವಿಕಲಚೇತನ ಪಲಾನುಭವಿಗಳು ಅಗತ್ಯ ದಾಖಲೆಗಳನ್ನು ಸೇವಾ ಸಿಂಧುವಿನ ಪೋರ್ಟಲ್ ನಲ್ಲಿ ದಾಖಲಿಸಿ ವಿಭಾಗೀಯ ಕಛೇರಿಯಲ್ಲಿ ಭೌತಿಕ ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ