

7th January 2025

ಜಿಲ್ಲಾ ಮಟ್ಟದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ * ಎಸ್ ಪಿ ಪೃಥ್ವಿಕ್ ಶಂಕರ್ ಸಲಹೆ
ಆಟೋಟಗಳಿಗೆ ಸಮಯ ಮೀಸಲಿಡಿ
ಯಾದಗಿರಿ: ಇಂದಿನ ಒತ್ತಡ ಜೀವನದಲ್ಲಿ ಮನುಷ್ಯ ಮಾನಸಿಕ ಖಿನ್ನತೆಗೆ ಹೆಚ್ಚು ಒಳಗಾಗುತ್ತಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಆರ್ಟಿ.ಓ ಬ್ಯಾಡ್ಮಿಂಟನ್ ಗ್ರೂಪ್ ಮತ್ತು ಎನ್ ಸಿಪಿ ಸ್ಪೋರ್ಟ್ಸ್ ಅಕಾಡೆಮಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ದಿನದ ಒಂದೆರಡು ಗಂಟೆಗಳಷ್ಟು ನಾವು ಕ್ರೀಡೆಗಳಿಗೆ ಸಮಯ ಮೀಸಲಿಡುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದರು.
ವಿ.ಬಿಆರ್ ಮುದ್ನಾಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊಡಮಾಡುವ 11100 ರೂ.ಮೊತ್ತದ ಮೊದಲ ಬಹುಮಾನ ಹಾಗೂ ಟ್ರೋಫಿಯನ್ನು ಕ್ರೀಡಾಳುಗಳಾದ ಸಾಯಬಣ್ಣ ಮತ್ತು ಮಿಥಿಲ್ ಕುಮಾರಗೆ ವಿತರಸಲಾಯಿತು.
ಕ್ರಮವಾಗಿ ಬಸವರಾಜ ಗುಂದನೂರ ನೀಡಿದ 5100 ರೂ. ಎರಡನೇ ಬಹುಮಾನವನ್ನು ಸಂತೋಷ ಮತ್ತು ವೆಂಕಟೇಶ
ಮತ್ತು ಮಲ್ಲಿಕಾರ್ಜುನ ಕಟಿಕಟಿ ಹೆಡಗಿಮದ್ರಾ ಅವರ ಮೂರನೇ ಬಹುಮಾನವನ್ನು ಸತೀಶ ಶಹಾಪೂರಕರ ಮತ್ತು ಗೌತಮಗೆ ನೀಡಲಾಯಿತು.
ಅಲ್ಲದೆ ತಂಡದ ಎಲ್ಲ ಸದಸ್ಯರಿಗೆ ಅಕಾಡೆಮಿಯಿಂದ ಟ್ರೋಫಿ ಮತ್ತು ಮೇಡಲ್ಗಳನ್ನು ನೀಡಿ ಗೌರವಿಸಲಾಯಿತು.
ಪ್ರಸಾದ ಯಾರಲಗಡ್ಡ, ಶಿವರಾಜ ಸಾಹುಕಾರ, ಅರುಣಕುಮಾರ ದಾಸನಕೇರಿ, ನಾಗು ಲದ್ದಿ
ಸಾಯಬಣ್ಣ, ಮಿಥಿಲ್, ಪವನಕುಮಾರ, ಉಮೇಶ, ವಿಶ್ವನಾಥ ಶೆಟ್ಟಿ ಸಾಹುಕಾರ, ಅಮೃತ, ಪ್ರಕಾಶ ಮಹ್ಮದ ಗಪೂರ ಇದ್ದರು.
-------

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ