

11th January 2025

ಯಾದಗಿರಿ...
ವರದಿ. ಸುಧೀರ್ ಕೋಟಿ ಎಸ್. ಕೆ
ಜ.20 ರಂದು ನಗರಸಭೆ ಕಟ್ಟಡ ಉದ್ಘಾಟನೆ: ಅಧ್ಯಕ್ಷೆ ಅನಪುರ ಮಾಹಿತಿ.
ಯಾದಗಿರಿ :
ಇದರ ನಗರಸಭೆ ಸರ್ವ ಸದಸ್ಯರ ಸಭೆ ಹಾಗೂ ಅಧಿಕಾರಿಗಳ ಪೂರ್ವಭಾವಿಯಾಗಿ ಗುರುವಾರ ಸಂಜೆ ನೂತನ ಕಟ್ಟಡದ ವಿಕ್ಷಣೆ ಮಾಡಿರುವ ಅಧ್ಯಕ್ಷರು ಅಲ್ಲಿನ ಮುಗಿದಿರುವ ಮತ್ತು ಉಳಿದ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೌರಾಡಳಿತ ಸಚಿವ ರಹಿಂಖಾನ್ ಕಟ್ಟಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸೇರಿದಂತೆಯೇ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅನಪುರ ತಿಳಿದ್ದಾರೆ.
ಕಾರ್ಯಕ್ರಮ ಅಚ್ಚುಕಟ್ಟಾಗಿ ಆಗಲು ನಗರಸಭೆ ಅಧಿಕಾರಿಗಳ ಸಭೆ ನಡೆಸಿರುವ ಅವರು, ಜಿಲ್ಲೆಯಲ್ಲಿ ಮಾದರಿ ಕಟ್ಟಡ ಇದಾಗಿದ್ದು, ಯಾವುದೇ ಲೋಪ ಆಗದಂತೆಯೆ ಯಶಸ್ಸಿಗೊಳಿಸಬೇಕೆಂದು ಅವರು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ನಗರಸಭೆ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಉಪಾದಕ್ಷರಾದ ರುಕಿಯಾ ಬೇಗಂ ಮತ್ತು ನಗರಸಭೆ ಸದಸ್ಯರು ಇದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ