

27th January 2025

ಯಾದಗಿರಿ..
*ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ತಾಲೂಕಿನ ಅರಕೇರಾ ಬಿ ಗ್ರಾಮದ ಕುಮಾರಿ ಮೈತ್ರಿ ಆಯ್ಕೆ.*
24-25ನೇಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆ ಅಡಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ಪ್ರತಿಭೆವುಳ್ಳ ಮಕ್ಕಳನ್ನು ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ತಾಲೂಕಿನ ಅರಕೇರಾ ಬಿ ಗ್ರಾಮದ ಕುಮಾರಿ ಮೈತ್ರಿ ತಂದೆ ಮಲ್ಲಪ್ಪ ಬಡಿಗೇರ ಇವರನ್ನು ಆಯ್ಕೆ ಮಾಡಲಾಗಿದೆ ಆದ್ದರಿಂದ 76ನೇ ಗಣರಾಜ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಶ್ರೀ ಚನ್ನರೆಡ್ಡಿ ಪಾಟೀಲ ತುನ್ನೂರ ಶಾಸಕರು ಯಾದಗಿರಿ ಮತಕ್ಷೇತ್ರ ಹಾಗೂ ಮಾನ್ಯಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಪ್ರಶಸ್ತಿ ಮತ್ತು ಹತ್ತು ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಯಿತು ಅರಕೇರಾ ಬಿ ಗ್ರಾಮಸ್ತರಾದ ಕಬ್ಬಲಿಗ ಸಮಾಜದ ಗ್ರಾಮ ಘಟಕದ ಅಧ್ಯಕ್ಷರಾದ ಮೌನೇಶ ಹಳಿಮನಿ, ಶಿವರೆಡ್ಡಿ ಚಾಮನಳ್ಳಿ ನ್ಯಾಯವಾದಿ,ಅಶೋಕರೆಡ್ಡಿ ಮಾಲಿ ಪಾಟೀಲ್, ಶರಣಯ್ಯ ಸ್ವಾಮೀ, ಹಣಮಂತ ಮೂಲಿಮನಿ, ಶಿವರಾಜ್ ಬಂದಳ್ಳಿ, ಶರಣಪ್ಪ ಕಿಣಿಕೆರಿ, ಶರಣಪ್ಪಪ್ಯಾಟಿ,ಚಂದ್ರು,ಭಾಗಣ್ಣ ಇತರ ಗ್ರಾಮಸ್ತರು ಗ್ರಾಮಕ್ಕೆ ಕೀರ್ತಿ ತಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ