

4th February 2025

ಯಾದಗಿರಿ...
ಯಾದಗಿರಿ ಜಿಲ್ಲೆಗೆ ನಾಳೆ ಪ್ರಪ್ರಥಮಬಾರಿಗೆ ಕೊಪ್ಪಳದ ಗವಿ ಮಠದ ಪರಮ ಪೂಜ್ಯ ಶ್ರೀ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿಗಳು ಆಗಮಿಸುತ್ತಿದ್ದಾರೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮಕ್ಕೆ ಗವಿಸಿದ್ದೇಶ್ವರ ಶ್ರೀಗಳು ದಯಮಾಡಿಸಲಿದ್ದಾರೆ. ಕಂದಕೂರ ಗ್ರಾಮದ ಮಾಜಿ ಶಾಸಕರಾದ ಲಿಂಗೈಕ್ಯ ಶ್ರೀ ನಾಗನಗೌಡ ಕಂದಕೂರ ಅವರ ಸ್ಮಾರಕಕ್ಕೆ ನಾಳೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಧರ್ಮ ಸಭೆಯ ಪಾವನ ಸಾನಿಧ್ಯ ವಹಿಸಿ ಹಿತೋಪದೇಶ ನೀಡಲಿದ್ದಾರೆ.ಗವಿಸಿದ್ದೇಶ್ವರ ಶ್ರೀಗಳು ನಾಳೆ ಕಂದಕೂರ ಗ್ರಾಮಕ್ಕೆ ಆಗಮಿಸುವ ಹಿನ್ನಲೆ ಭರದ ಸಿದ್ದತೆ ಕೈಗೊಳ್ಳಲಾಗುತ್ತಿದೆ.ವೇದಿಕೆ ಸಿದ್ದತೆ ಕಾರ್ಯಗಳು ಭರದಿಂದ ಸಾಗಿವೆ.ಅದೆ ರೀತಿ ಯಾದಗಿರಿ ನಗರ ಹಾಗೂ ಕಂದಕೂರ ಗ್ರಾಮದ ಪ್ರಮುಖ ರಸ್ತೆ ಮಾರ್ಗದಲ್ಲಿ ಶ್ರೀಗಳಿಗೆ ಸ್ವಾಗತಿಸುವ ಬ್ಯಾನರ್ ಗಳು ರಾರಾಜಿಸುತ್ತಿವೆ.ಈ ಬಗ್ಗೆ ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ಮಾತನಾಡಿ, ಶ್ರೀಗಳು ಆಗಮಿಸುವ ಬಗ್ಗೆ ಮಾಹಿತಿ ನೀಡಿದರು.ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ