

9th February 2025

ಯಾದಗಿರಿ ..
ನಗರ ಠಾಣೆ ಪಿಎಸ್ ಐ ಮಂಜೇಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಾದಗಿರಿ ಎಸ್ಪಿ ಕಚೇರಿ ಮುಂದೆ ಮಂಗಳಮುಖಿಯರು ಪ್ರತಿಭಟನೆ .
-------
ಮಂಜೇಗೌಡ ವಿರುದ್ಧ ಮಂಗಳಮುಖಿಯರ ಆರೋಪ * ಕ್ರಮಕ್ಕೆ ಆಗ್ರಹಿಸಿ ಎಸ್ ಪಿಗೆ ಮೊರೆ
ದೂರು ನೀಡಲು ಹೋದ ಮಹಿಳೆ ಮೇಲೆ ಪಿಎಸ್ ಐ ಹಲ್ಲೆ
ಯಾದಗಿರಿ: ಮಂಗಳಮುಖಿಯರ ಎರಡು ಗುಂಪಿನ ಮಧ್ಯೆ ನಡೆದ ಗಲಾಟೆಯ ಬಗ್ಗೆ ದೂರು ನೀಡಲು ಹೋದ ವಿಧವೆಯ ಮೇಲೆ ಇಲ್ಲಿನ ನಗರ ಠಾಣೆ ಪಿಎಸ್ ಐ ಮಂಜೇಗೌಡ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಮೈಕ್ರೋ ಫೈನಾನ್ಸ್ ನಲ್ಲಿ ಪಡೆದ ಸಾಲದ ಕಂತು ತೀರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳ ಮುಖಿಯರ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಒಂದು ಗುಂಪಿನವರು ಶನಿವಾರ ನಗರ ಠಾಣೆ ಆಗಮಿಸ ವೇಳೆ ಮುತ್ತಮ್ಮ ಮಡಿವಾಳ ಆಗೂ ಆಕೆಯ ಮಗ ವೀರೇಶ ಎಂಬಾತನ ಮೇಲೆ ಮಂಜೇಗೌಡ ಹಲ್ಲೆ ಮಾಡಿದ್ದಲ್ಲದೆ, ಅವರ ಬಳಿ ಇದ್ದ 20 ಸಾವಿರ ರೂ.ಹಣ ಕಸಿದುಕೊಂಡಿದ್ದಾರೆ ಎಂದು ಹಲ್ಲೆಗೊಳಗಾದ ಮುತ್ತಮ್ಮ ಆರೋಪಿಸಿದ್ದಾರೆ.
ಇಲ್ಲಿನ ಎಸ್ ಪಿ ಕಚೇರಿಗೆ ದೂರು ಸಲ್ಲಿಸಲು ಬಂದ ಮಂಗಳಮುಖಿ ಜೋಯಾ ಮಾತನಾಡಿ, ಪಿಎಸ್ ಐ ಮಹಿಳೆ ಎಂಬುದನ್ನೂ ನೋಡದೆ ನನ್ನ ಅತ್ತೆಯ ಎದೆಗೆ, ತಲೆಗೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ಬಗ್ಗೆ ಠಾಣೆಯಲ್ಲಿದ್ದ ಸಿಸಿ ಕ್ಯಾಮರಾಗಳಿಂದ ಎಸ್ ಪಿ ಅವರು ಪರಿಶೀಲನೆ ನಡೆಸಿ ಮಂಜೇಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೇಣುಕಾ ಪವಾರ, ವೀರೇಶ ಇತರರು ಇದ್ದರು.
------

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ