

12th February 2025

ಯಾದಗಿರಿ..
ಹೆತ್ತವರು,ಜನ್ಮದಾತರನ್ನು ಗೌರವಿಸುವವರು ಉನ್ನತ ಸ್ಥಾನಕ್ಕೆ ಹೊಗುತ್ತಾರೆ. ರಾಮಲಿಂಗಪ್ಪ
ಯಾದಗಿರಿ : ಜನ್ಮನೀಡಿದ ಹೆತ್ತವರನ್ನು ಮತ್ತು ವಿದ್ಯೆ ಕಲಿಸಿದ ಗುರುವನ್ನು ಮರೆಯದೇ ಅವರನ್ನು ಗೌರವಿಸುವವರು ಸಮಾಜದಲ್ಲಿ ಉನ್ನತ ಸ್ಥಾನ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿವೃತ್ತ ವಿಷಯ ನಿರ್ವಾಹಕ ಟಿ. ರಾಮಲಿಂಗಪ್ಪ ಎಂದು ಹೇಳಿದರು.
ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ 1999-2002 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿಶ್ಚಿತ ಗುರಿಯೊಂದಿಗೆ ಗುರುವಿನ ಸಹಕಾರ ಇರಬೇಕು. ಗುರುವನ್ನು ಮರೆತವರು, ಗೌರವಿಸದವರು ಜೀವನದಲ್ಲಿ ಮೇಲೆ ಬರಲು ಸಾಧ್ಯವೇ ಇಲ್ಲ ಎಂದು ರಾಮಲಿಂಗಪ್ಪ ಪ್ರತಿಪಾದಿಸಿದರು.
ಆದರೇ ನಾಯ್ಕಲ್ ಗ್ರಾಮದ ಪ್ರೌಢ ಶಾಲೆ ನಮ್ಮ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಕರೆಯಿಸಿ ಗೌರವಿಸಿದ ಈ ಕ್ಷಣ ಮರೆಯಲು ಆಗುವುದಿಲ್ಲ. ಇಂತಹ ವಿದ್ಯಾರ್ಥಿಗಳು ಇನ್ನೂ ಹೆಚ್ಚಿಗೆ ಆಗಬೇಕೆಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸಿದ್ರರಾಮಪ್ಪ ಅನವಾರ್ ಮಾತನಾಡಿ, ನಕ್ಷತ್ರಗಳನ್ನು ರಾತ್ರಿ ಹುಡುಕುತ್ತಾರೆ. ಆದರೆ ನಾನು ಹಗಲು ಹೊತ್ತು ನಕ್ಷತ್ರ ಹುಡುಕಿದ್ದೇನೆ. ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಅವರಿಗೆ ಹಗಲು ನಕ್ಷತ್ರಗಳನ್ನಾಗಿ ಮಾಡಿದ್ದೇನೆ. ಇಂದು ನನ್ನ ಕೈಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಮ್ಮನ್ನು ಗುರುತಿಸಿ ಕೃತಜ್ಞತೆ ಸಲ್ಲಿಸುತ್ತಿರುವುದು. ಒಳ್ಳೆಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ಬಸವರಾಜ ಬಾನರ್ ವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಆದ್ಯಕ್ಷೆ ಮೆಹರುನ್ನಿಸಾ ಬೇಗಂ, ಎಸ್ ಡಿ ಎಮ್ ಸಿ ಅಧ್ಯಕ್ಷ ಮರಳು ಸಿದ್ದಪ್ಪ ಬೈರಳ್ಳಿ, ಡಯಟ್ ಉಪನ್ಯಾಸಕ ಶಿವಶೇಖರೆಪ್ಪ ಬಲ್ಕಲ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಚಂದ್ರಶೇಖರ ವೈದ್ಯ, ನಿವೃತ್ತ ಉಪನ್ಯಾಸಕರಾದ ನಾರಾಯಣ ಕುಂಬಾರ್, ಕುರಕುಂದಾ ಸರ್ಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳಾದ ರಂಗೋಜಿ, ಯಾದಗಿರಿ ಸ್ಟೇಷನ್ ಬಜಾರ್ ಶಾಲೆಯ ಮುಖ್ಯ ಗುರುಗಳಾದ ಜಯಾ, ನಿವೃತ್ತ ಶಿಕ್ಷಕರಾದ ಬಸವೇಶ್ವರ ಚಿಕ್ಕಮಠ, ಅಂಬಾಬಾಯಿ, ಭಾಗ್ಯ ಲಕ್ಷ್ಮಿ, ಅಮಲಪ್ಪ, ಹಳೆ ವಿದ್ಯಾರ್ಥಿಗಳಾದ ಮಹೇಶ ಹತ್ತಿಕುಣಿ, ಉಮೇಶ ಬಿ.ಕೆ ಗುರುಸುಣಗಿ, ಶಿವಪ್ಪ ಖಾನಾಪುರ, ಸುಮಲತಾ ಹೊಸಮನಿ, ಸವಿತಾ ದೊಡ್ಮನಿ, ಈಶಮ್ಮ ಬಲಕಲ್, ಮಹೆಬೂಬ ತಡಿಬಿಡಿ, ಶರಣಪ್ಪ ಉಳ್ಳೆಸುಗೂರ್, ಅಣವೀರ ತಡಿಬಿಡಿ, ಬಂಡೇಶ ಬೋಳಾರಿ, ಮಲ್ಲಿಕಾರ್ಜುನ ಬೊಳಾರಿ, ಮಹೇಬೂಬ್ ಗುಲಸರಮ್, ಶರಣಪ್ಪ, ಹುಸೇನಪ್ಪ, ಬಸವೇಶ್ವರ ಆನಂದ, ಶರಬಣ್ಣ ನಾಯ್ಕಲ್, ಗೌರಮ್ಮ ನಾಯ್ಕಲ್, ವಿಜಯ ಲಕ್ಣ್ಮೀ ಗುರುಸುಣಗಿ, ಅನೀಲ ಕುಮಾರ, ಖಾನಾಪೂರ್, ಯಂಕಪ್ಪ ಖಾನಾಪೂರ್, ಚಂದ್ರಶೇಖರ ಖಾನಾಪೂರ್, ಮಹೋಮದ್ ಶಫಿ ನಾಯ್ಕಲ್, ಅಬಾಸಲಿ ನಾಯ್ಕಲ್, ರವಿಚಂದ್ರ ಹುಂಡೇಕಲ್, ಅನುರಾದ ನಾಯ್ಕಲ್, ಗುರುಲಿಂಗಮ್ಮ ನಾಯ್ಕಲ್ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
------

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ