

12th February 2025

ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಿ ಮುದ್ನಾಳ್ ಸಲಹೆ.
ಯಾದಗಿರಿ. ದೇಶದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸದಾ ಕ್ರಿಯಾಶೀಲತೆಯಿಂದ ಹಾಗೂ ಜನಪರ ಏಳ್ಗೆಗೆ ಮುಂಚೂಣಿಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ.
ಅಂತಹ ಮಹಾನ್ ವ್ಯಕ್ತಿ ಹಾಗೂ ಬಿಜೆಪಿ ಪಕ್ಷದಲ್ಲಿ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಗೌಡ ಮುದ್ನಾಳ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿ. ಜೆ. ಪಿ. ಯ ಹಿರಿಯ ಮುಖಂಡ ಶ್ರೀ ಭೀಮರಾಯ ಕೊಂಡಿ ಆರ್. ಹೊಸಳ್ಳಿ, ಮಾರಪ್ಪ ವರ್ಕನಳ್ಳಿ, ಹಣಮಂತ ಹಾಕಿನೂರು,ಗ್ರಾಪo ಸದಸ್ಯ ಸಿದ್ರಾಮಪ್ಪ,ನಗರಸಭೆ ಸದಸ್ಯ ಸ್ವಾಮಿದೇವ್ ದಾಸನಕೇರಿ, ಮಾಜಿ ನಗರಾಭಿವೃದ್ಧಿ ಸದಸ್ಯ ಸುಭಾಸ್ ಮಾಳಿಕೇರಿ, ರಾಜು ಪೂಜಾರಿ,ದುರ್ಗಪ್ಪ ಹೆಚ್. ಪೂಜಾರಿ ಇತರರು ಇದ್ದರು.
ನಗರದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಇತ್ತೀಚಿಗೆ ಹಳಿಗೇರ ಗ್ರಾಮಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಆಯ್ಕೆಯಲ್ಲಿ ಶ್ರೀಮತಿ ನಿಂಗಮ್ಮ ಗಂಡ ಮಲ್ಲಿಕಾರ್ಜುನ್ ಕoಚವೀರ ಅವರನ್ನು ಅವಿರೋಧ
ಆಯ್ಕೆ ಹಿನ್ನಲೆ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದ ಅವರು
ಜನಗಳ ಸೇವೆ ಮಾಡುವುದು ಪುಣ್ಯದ ಕೆಲಸ ಅದು ಬಿಜೆಪಿಯಂತ ದೇಶದ ಬಹುದೊಡ್ಡ ಪಕ್ಷದಲ್ಲಿ ಇದ್ದು, ಜನರ ಸೇವೆ ಮಾಡುವುದು ಮಹತ್ವದ ಕಾರ್ಯವಾಗಿದೆ ಎಂದರು.
ಜನರು ನೀಡಿರುವ ಇಂತಹ ಅಧಿಕಾರ ಸದ್ಭಳಕೆ ಮಾಡಿ ಸಮಾಜಕ್ಕೆ ಉತ್ತಮ ಸೇವೆ ನೀಡಿ,
ನೀವು ಮಾಡುವ ಕಾರ್ಯ ದೇಶಕ್ಕೆ ಮಾದರಿಯಾಗಬೇಕು ಜನರ ವಿಶ್ವಾಸಗಳಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ