

25th September 2025

ಯಾದಗಿರಿ..
ವರದಿ. ಸುಧೀರ್ ಕೋಟಿ ಎಸ್. ಕೆ.
ವ್ಯಕ್ತಿಯೋರ್ವ ತನ್ನ ಮಕ್ಕಳನ್ನೇ ಕೊಂದು ಹಾಕಿದ
ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ದುಗನೂರ್ ಹಟ್ಟಿಯಲ್ಲಿ ಗುರುವಾರ (ಸೆ.25) ಬೆಳಿಗ್ಗೆ ನಡೆದಿದೆ.
ಹತ್ತಿಕುಣಿ ಗ್ರಾಮದ ಶರಣಪ್ಪ ದುಗನೂರು ತನ್ನ ಮಕ್ಕಳಾದ ಸಾನ್ವಿ (4.5 ವರ್ಷ) ಭಾರ್ಗವ (2 ವರ್ಷ) ಇಬ್ಬರನ್ನು ಮಂಚದ ಮೇಲೆ ಮಲಗಿದಾಗ ಕೊಡಲಿಯಿಂದ ಕೊಚ್ಚಿದ ರೀತಿಯಲ್ಲಿ ಕೊಲೆಗೈದಿರುವ ಅತ್ಯಂತ ಅಮಾನುಷ ಘಟನೆ ಇದಾಗಿದೆ ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಪ್ಪ ದುಗನೂರು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗ ಹೇಮಂತ (8) ತಪ್ಪಿಸಿಕೊಂಡು ಗಾಬರಿಯಿಂದ ಹೊರ ಬಂದಿದ್ದಾನೆ. ಗಾಯಾಳು ಹೇಮಂತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತನ್ನ ಮಕ್ಕಳ ಮೇಲೆ ಅನುಮಾನಪಟ್ಟು ತಂದೆಯೇ ಕೊಲೆಮಾಡಿರುವ ಸಂಶಯದ ಬಗ್ಗೆ ಇದೀಗ ಹತ್ತಿಕುಣಿ ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ. ಶರಣಪ್ಪ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.
ಮಾನಸಿಕ ಅಸ್ವಸ್ಥನಾಗಿದ್ದ ಶರಣಪ್ಪ ತನಗೆ ಈ ಮಕ್ಕಳು ಹುಟ್ಟಿಲ್ಲ, ಹೆಂಡತಿ ಮೇಲೆ, ಮಕ್ಕಳ ಮೇಲೆ ಸಂಶಯಪಟ್ಟು ಮಕ್ಕಳ ಜೀವ ತೆಗೆಯಲು ನಿರ್ಧರಿಸಿ ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಹಿಡಿ ಶಾಪಹಾಕುತ್ತಿದ್ದಾರೆ. ಇಡೀ ಹತ್ತಿಕುಣಿ ಗ್ರಾಮವೇ ಮೌನಕ್ಕೆ ಜಾರಿದೆ. ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್ಐ ಹನುಮಂತ ಭಂಕಲಗಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ