ಚಿತ್ತಾಪೂರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ. ಕೂಲಿ ಸಮಾಜಕ್ಕೊಂದು ನ್ಯಾಯ ತಮಗೊಂದು ನ್ಯಾಯವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.
ಸಾರಾಂಶಖರ್ಗೆಯವರೇ ಕೂಲಿ ಸಮಾಜಕ್ಕೊಂದು ನ್ಯಾಯ, ತಮಗೊಂದು ನ್ಯಾಯನಾ : ಕಟಕಟಿ
ಯಾದಗಿರಿ : ಇತ್ತೀಚೆಗೆ ಚಿತ್ತಾಪೂರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವAತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಪ್ರಶ್ನೆ ಮಾಡಿದವರನ್ನು ಕೆಲವೇ ದಿನಗಳಲ್ಲಿ ಬಂಧನ ಮಾಡಿಸಿದ್ದೀರಿಲ್ಲ ಕೂಲಿ ಸಮಾಜಕ್ಕೊಂದು ನ್ಯಾಯ ತಮಗೊಂದು ನ್ಯಾಯವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡಿ ರಾಜಕೀಯ ಪ್ರಚಾರ ಮಾಡಿಕೊಂಡು ತಾವುಗಳು ಆರ್ಎಸ್ಎಸ್ ಬೆಂಬಲಿಗರು ಅಂದುಕೊಂಡವರನ್ನೂ ಬಂಧಿಸುವ ಪ್ರಯತ್ನ ಮಾಡಿದ್ದೀರಿ, ಆದರೆ ತಮ್ಮ ಸ್ವಕ್ಷೇತ್ರದಲ್ಲಿ ಗಂಗಾಮತ ಕೂಲಿ ಸಮಾಜದ ಶರಣರ ಅಪಮಾನ ಮಾಡಿದವರನ್ನು ಬಂಧಿಸುವಲ್ಲಿ ಯಾವ ಕ್ರಮಕೈಗೊಳ್ಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕೋಲಿ ಸಮಾಜ ತಮ್ಮ ತಂದೆಯವರಿಗೆ ರಾಜಕೀಯ ಜೀವನ ಕಲ್ಪಿಸಿದೆ, ಆದುದರಿಂದಲೇ ಇಂದು ಅವರು ಅಷ್ಟು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದನ್ನು ಮರೆಯಬೇಡಿ, ಅದೇ ರೀತಿ ತಮಗೆ ಕೂಡ ರಾಜಕೀಯ ಪ್ರಾತಿನಿಧ್ಯ ದೊರಕಲು ನಮ್ಮ ಸಮಾಜ ನಿಮಗೆ ಸಾಕಷ್ಟು ಸಹಕಾರ ನೀಡಿದೆ ಆದರೆ ನಮ್ಮ ಶರಣರ ಅವಹೇಳನ ಮಾಡಿದವರನ್ನು ಬಂಧಿಸುವಲ್ಲಿ ಯಾಕೆ ಇಂಟರೆಸ್ಟ್ ತೋರಿಸುತ್ತಿಲ್ಲ, ಕೇವಲ ಪ್ರಚಾರಕ್ಕೆ ಮಾತ್ರ ತಾವುಗಳು ಸೀಮಿತರಾಗಿದ್ದೀರಿ ಎಂದು ಕಿಚಾಯಿಸಿದ್ದಾರೆ.
ನೆರೆಯ ಆಂದ್ರಕ್ಕೆ ಗೂಗಲ್ನ ಎಐ ಸಂಸ್ಥೆ ಆಂದ್ರ ಪಾಲಾಗಿದೆ, ಅಲ್ಲಿನ ಸಚಿವರು ಕೆಲಸದಲ್ಲಿ ಸೈ ಎನಿಸಿಕೊಂಡರೆ ತಾವುಗಳು ಪ್ರಚಾರದಲ್ಲಿ ಸೈ ಎನಿಸಿಕೊಂಡಿದ್ದೀರಿ.
ಈ ಸಂಧರ್ಭದಲ್ಲಿ ಬಸಣ್ಣ ದೇವರಹಳ್ಳಿ, ಪ್ರಕಾಶ್ ನಿರಟ್ಟಿ, ಹಣಮಂತ ಅಕ್ಕಿ, ಭೀಮಶಪ್ಪ ಕಂದಕೂರ್, ಸಣ್ಣೆಪ್ಪ ಕೋಟಗೇರಾ, ಬಾಬು ಕೊಂಕಲ್, ವೆಂಕಟೇಶ್ ಗಡದ್, ಸಿದ್ದಪ್ಪ ಹೊರುಂಚಾ, ಶಿವಪ್ಪ ಹಿರಿಕೆರಿ,ಮಾರ್ಥಂಡ ಮಾನೆಗಾರ್, ಶಂಕರಲಿಂಗ ಕಡೆಚೂರ್, ಯಲಪ್ಪ ಬೂತಾ ರವರು ಇದ್ದರು.