Skip to main content
ನಮ್‌ನ್ಯೂಸ್

ಮರೆವಿನ ಮಡಿಲಲ್ಲಿ ಸೈಕಲ್ ಪೋಲೋ

ಮರೆವಿನ ಮಡಿಲಲ್ಲಿ ಸೈಕಲ್ ಪೋಲೋ image

ಸುಲಭ, ಸರಳ ಮತ್ತು ಖರ್ಚು ಕಡಿಮೆ ಇರುವಂಥ ಆಟ ಸೈಕಲ್ ಪೋಲೋ. ಇದು ಎಲ್ಲರಿಗೂ ಸಾಧ್ಯವಾಗುವಂಥ ಆಟ. ಸೈಕಲ್ ಒಂದಿದ್ದರೆ ಸಾಕು. ಹಾಕಿಯಂತೆ ಒಂದು ಟೆನಿಸ್ ಬಾಲ್ ಹಾಗೂ ‘T’ ಆಕಾರದ ಬೆತ್ತದ ಸ್ಟಿಕ್‌ನಿಂದ ಗೋಲು ಮಾಡುವ ಮೂಲಕ ಗೆಲ್ಲುವ ಆಟ. ಶಾಲಾ ಮಕ್ಕಳಿಗೆ ಇದೊಂದು ಹೊಸ ಹಾಗೂ ಸಂತೋಷ ನೀಡುವ ಆಟ, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಇದೊಂದು ಒಳ್ಳೇ ಆಟ.



ಹಿಂದೆ ನಮ್ಮ ರಾಜ ಮಹಾರಾಜರ ಕಾಲದಲ್ಲಿ ಈ ಆಟವನ್ನು ಕುದುರೆಗಳ ಮೇಲೆ (ಹಾರ್ಸ್ ಪೋಲೋ) ಆಡುತ್ತಿದ್ದರು. 2ನೇ ಮಹಾಯುದ್ಧದ ನಂತರ ಕುದುರೆಗಳ ಮೇಲೆ ಆಡುವುದುಕಡಿಮೆಯಾಗಿ ಸೈಕಲ್‌ಗಳ ಮೇಲೆ ಆಟ ಪ್ರಾರಂಭವಾಯಿತು. ಹಿಂದೆಯಿದ್ದ ನಿಯಮಾವಳಿಯೊಂದಿಗೆ, ಈ ಆಟ ಈಗಲೂ ಮುಂದುವರೆದಿದೆ.



ಈ ಆಟದಲ್ಲಿ ಬಳಸುವ ಸೈಕಲ್‌ಗೆ ಮಡ್ ಗಾರ್ಡ್, ಕ್ಯಾರಿಯರ್, ಬೆಲ್, ಮುಂದಿನ ಚಕ್ರದ ಬ್ರೇಕ್, ಚೈನ್ ಕವರ್, ಲೈಟ್ ಇರುವುದಿಲ್ಲ. ಹಾಗೂ ಆಡುವ ಸ್ಟಿಕ್ ಕೂಡ ಅವರವರ ಎತ್ತರದ ಅನುಗುಣವಾಗಿರುತ್ತದೆ. ಬೆತ್ತದಿಂದ ಮಾಡಲ್ಪಟ್ಟಿರುತ್ತದೆ. ಆಟದಲ್ಲಿ ನಿರ್ಣಾಯಕರು ಇರುತ್ತಾರೆ. ಆಟವನ್ನು ಫುಟ್‌ಬಾಲ್, ಹಾಕಿ, ಕ್ರಿಕೆಟ್ ಮೈದಾನಗಳಲ್ಲಿ ಆಡಬಹುದು. ಮೈದಾನವು ಏರುಪೇರು ಹಾಗೂ ಜಾರುವ ತರಹದ್ದಾಗಿರಬಾರದು



ಈ ಆಟದ ತಂಡವು ಆರು ಜನರದಾಗಿದ್ದು 4 ಜನ ಮಾತ್ರ ಸೈಕಲ್ ಮೇಲಿಂದ ಕೆಳಗೆ ಇಳಿಯದ ಹಾಗೆ ಸ್ಟಿಕ್‌ನಿಂದ ಚೆಂಡನ್ನು ಹೊಡೆದು ಗೋಲ್ ಮಾಡಬೇಕು. ಅದೇ ರೀತಿ ಎದುರಾಳಿ ತಂಡ ಗೋಲ್ ಮಾಡದ ಹಾಗೆ ಸೈಕಲ್ ಮೇಲಿಂದಲೇ ಬಾಲನ್ನು ಸ್ಟಿಕ್ ಮುಖಾಂತರ ತಡೆಯಬೇಕು.

ಈ ಆಟ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಮಾನ್ಯತೆ ಪಡೆದಿರುತ್ತದೆ. ಈಗಾಗಲೇ ನಮ್ಮ ರಾಜ್ಯದ ಬಾಲಕ ಹಾಗೂ ಬಾಲಕಿಯ ತಂಡ ಅನೇಕ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. 2006ರಿಂದ ರಾಷ್ಟ್ರೀಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಈ ಆಟವನ್ನು ಸೇರಿಸಲಾಗಿದೆ. ಈ ಆಟ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್ ಮತ್ತು ವೆಸ್ಟ್ ಬೆಂಗಾಲ್‌ಗಳಲ್ಲಿ ಪ್ರಸಿದ್ಧ ಆಟವಾಗಿದೆ.

Comments