ರಾಜ್ಯದಲ್ಲಿ ನಡೆಯುವ ಪ್ರಮುಖ ಜಿಲ್ಲಾಮಟ್ಟದ ಬಹುಶಿಸ್ತಿನ ಕ್ರೀಡಾಕೂಟಗಳಲ್ಲಿ ದಸರಾ ಸಿಎಂ ಕಪ್
ಬಹುಮುಖ್ಯವಾದದ್ದು ಇದನ್ನು ಇನ್ನಷ್ಟು ವಿಶೇಷವಾಗಿಸುವ ಅಂಶವೆಂದರೆ, ಇದು ಮೈಸೂರು ದಸರಾ ಮಹೋತ್ಸವದೊಂದಿಗೆ ಸಂಯೋಜಿಸಲ್ಪಟ್ಟಿರುವುದು.
ಪಂದ್ಯಾವಳಿಯ ಉದ್ದೇಶ :
ಈ ಕ್ರೀಡಾಕೂಟವು ರಾಜ್ಯದ ಮೂಲೆಯಲ್ಲಿ ಅಡಗಿರುವ ಕ್ರೀಡೆಯಲ್ಲಿ ಉತ್ಸಾಹ ಇರುವ ಎಲೆಮರೆ ಕಾಯಿ ಪ್ರತಿಭೆಗಳನ್ನು ಹೊರ ತರಲು ಮಾಡಿರುವ ಒಂದು ಪ್ರಯತ್ನ ಹಾಗೂ ರಾಜ್ಯದ ಕ್ರೀಡಾ ಪರಂಪರೆಯನ್ನು ಸುಧಾರಿಸಲು ಒಂದು ಸುವರ್ಣ ಅವಕಾಶ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಪಟುಗಳು ಹಾಗೂ ಪದಕಗಳ ಕೊಡುಗೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
ಪಂದ್ಯಾವಳಿಯ ಆಯೋಜಕರು :
ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕೊಡುಗೆ ಹೇರಳವಾಗಿದೆ ಅಷ್ಟೇ ಅಲ್ಲದೆ ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಇತರ ಕ್ರೀಡಾ ಉಪಸಮಿತಿಗಳ ಸಹಕಾರವು ಬಹಳಷ್ಟು ಮುಖ್ಯವಾಗಿದೆ.
ವಿಕಸನ
ವರ್ಷಗಳು ಕಳೆದಂತೆ ಈ ಕ್ರೀಡಾಕೂಟವು ಒಲಂಪಿಕ್ಸ್ ಶೈಲಿಯ ಆಟಗಳು(ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ವಾಲಿಬಾಲ್) ಹಾಗೂ ಸ್ಥಳೀಯ ಸಾಂಪ್ರದಾಯಿಕ ಆಟಗಳನ್ನು (ದೃಷ್ಟಿ ಹೀನರ ಚದುರಂಗ, ಸೈಕಲ್ ಪೋಲೋ ,ಬಾಡಿ ಬಿಲ್ಡಿಂಗ್ ಚಾಮುಂಡಿ ಹಿಲ್ಸ್ ಕ್ಲೈಂಬಿಂಗ್)ಒಳಗೊಂಡಿಸಿಕೊಂಡು ವಿಸ್ತಾರವಾಗಿದೆ
ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಲವು ಕಡೆಗಳಿಂದ ಸುಮಾರು ೩,೩೦೦ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ನಡೆಯುವ ಹಲವು ಕ್ರೀಡೆಗಳು ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾ ಮೈದಾನದಲ್ಲಿ ಹಮ್ಮಿಕೊಂಡಿರಲಾಗುತ್ತದೆ.
ಇತಿಹಾಸ:
ಈ ರೀತಿ ಭವ್ಯವಾದ ಉತ್ಸವಗಳನ್ನು ಹಾಗೂ ಸ್ಪರ್ಧೆಗಳನ್ನು ನಾವು ವಿಜಯನಗರ ಸಾಮ್ರಾಜ್ಯದಲ್ಲಿ ಆರಂಭವಾಗಿರುವುದನ್ನು ಕಾಣಬಹುದು ಇದರ ಪ್ರಮುಖ ಉದಾಹರಣೆಯೇ ದಸರಾ ಕುಸ್ತಿ. ಸರಿಸುಮಾರು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ವಿನಾಶದ ನಂತರ ಈ ಸಂಪ್ರದಾಯ ಹಾಗೂ ಪರಂಪರೆಯನ್ನು ಹೊತ್ತವರು ಮೈಸೂರಿನ ಒಡೆಯರು ಅದರಲ್ಲೂ ರಾಜ ಒಡೆಯರ್ ೧ ಈ ಸಂಪ್ರದಾಯಕ್ಕೆ ಮರು ಜೀವ ನೀಡಿದರು. ಇದರ ನಂತರ ಮಹಾರಾಜ ಚಾಮರಾಜೇಂದ್ರ ಒಡೆಯರ್ ೧೦ ಇದನ್ನು ದಸರಾ ಸಂಭ್ರಮಕ್ಕೆ ವ್ಯವಸ್ಥಿತವಾಗಿ ಸಂಯೋಜಿಸಿದರು
ಈಗ ದಸರಾ ಸಿಎಂ ಕಪ್ ಕೇವಲ ಒಂದು ಕ್ರೀಡಾಕೂಟವಾಗಿ ಉಳಿದಿಲ್ಲ ಅದು ನಮ್ಮ ರಾಜ್ಯದ ಹೆಮ್ಮೆ ಹಾಗೂ ದಸರಾ ಸಂಭ್ರಮದ ಕಲೆಯನ್ನು ಹೆಚ್ಚಿಸಿದೆ ಅದಲ್ಲದೆ ಭಾರತಕ್ಕೆ ಹಲವು ಕ್ರೀಡಾಪಟುಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲಲು ಭಾರತಕ್ಕೆ ಒಂದು ಭರವಸೆ ನೀಡಿದೆ.







