ಜೀವನದಲ್ಲಿ ನಾವು ಮಾಡುವ ಕಾರ್ಯಗಳು ನಾವು ಪಡೆಯುವ ಫಲಿತಾಂಶವನ್ನು ರೂಪಿಸುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಉದಾಹರಣೆಗೆ ನಾವು ಪ್ರತಿದಿನ ವ್ಯಾಯಾಮ ಮಾಡಿದ್ದಲ್ಲಿ ನಾವು ಆರೋಗ್ಯವಾಗಿ ಇರುತ್ತೇವೆ ಅಷ್ಟೇ ಏಕೆ ನಾವು ನಮ್ಮ ಹಣಕಾಸನ್ನು ಸೂಕ್ತ ರೂಪದಲ್ಲಿ ನಿರ್ವಹಿಸಿದರೆ ನಮ್ಮ ಬಳಿ ಹೆಚ್ಚು ಹಣ ಇರುತ್ತದೆ ಹಾಗೂ ನಾವು ನಮ್ಮ ಸಂಗಾತಿಯ ಜೊತೆ ಸೂಕ್ತವಾಗಿ ವ್ಯವಹರಿಸಿದರೆ ನಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮೇಲೆ ಕೊಟ್ಟಿರುವ ಉದಾಹರಣೆಗಳಂತೆಯೇ ಇನ್ನೂ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.
ಆದರೆ ನಾವು ಏನು ಮಾಡುತ್ತೇವೆ ಎನ್ನುವುದು ನಾವು ಏನು ನಂಬುತ್ತೇವೆ ಹಾಗೂ ನಮ್ಮ ಆಲೋಚನೆಗಳ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳುವುದರಲ್ಲಿ ವಿಫಲವಾಗುತ್ತೇವೆ ಏಕೆಂದರೆ ಹಲವು ನಂಬಿಕೆಗಳು ಹಾಗೂ ಆಲೋಚನೆಗಳು ಸಮಾಜದಲ್ಲಿ ಸತ್ಯಾಂಶಗಳ ರೂಪ ಪಡೆದುಕೊಂಡು ಕ್ರಮೇಣವಾಗಿ ಬಲವಂತವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ನೆಲಗೊಳಿಸಲ್ಪಡುತ್ತದೆ
ನಾವು ನಮ್ಮ ನಂಬಿಕೆಗಳನ್ನು ತಿಳಿದುಕೊಳ್ಳುವುದು ಹಾಗೂ ಗುರುತಿಸಿಕೊಳ್ಳುವುದು ಸುಲಭವಲ್ಲ ಏಕೆಂದರೆ ಅವು ಸತ್ಯದ ವೇಷ ಧರಿಸಿಕೊಂಡಿರುತ್ತವೆ ಆದ್ದರಿಂದ ಒಬ್ಬ ಮನುಷ್ಯನಿಗೆ ಎಲ್ಲರ ನಂಬಿಕೆಗಳು ಹಾಗೂ ಆಲೋಚನೆಗಳು ವಿಭಿನ್ನವಾಗಿರುತ್ತದೆ ಎನ್ನುವ ಬಗ್ಗೆ ತಿಳಿ ಇದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹಾಗೂ ಮನೋಭಾವನೆ ಎರಡು ಇರುವುದಿಲ್ಲ ಹಾಗೆಯೇ ಈ ವಿಷಯವನ್ನು ಹಾಗೂ ನಮ್ಮ ಆಲೋಚನೆಗಳು ಹಾಗೂ ನಂಬಿಕೆಗಳನ್ನು ಷ ಅರಿಯಬೇಕಾದಲ್ಲಿ ಮೊದಲು ನಾವು ನಮ್ಮನ್ನು ಬಹಳ ಆಳವಾದ ಮಟ್ಟದಲ್ಲಿ ನಮ್ಮನ್ನು ಅರಿಯಬೇಕು
ಮನಸ್ಸಿನಲ್ಲಿ "ಚಿಂತಕ" ಏನನ್ನು ಚಿಂತಿಸುತ್ತಾನೋ "ಪ್ರತಿಪಾದಕ" ಅದನ್ನು ಸಾಬೀತುಪಡಿಸಿಯೇ ತೀರುತ್ತಾನೆ. ಉದಾಹರಣೆಗೆ ಒಬ್ಬ ಮನುಷ್ಯ ತನ್ನ ಎಲ್ಲಾ ಸಂಬಂಧಗಳು ವೈಫಲ್ಯವಾಗುತ್ತವೆ ಎಂದು ನಂಬಿದರೆ ಉಪಪ್ರಜ್ಞೆಯಿಂದ ಆ ಮನುಷ್ಯ ಒಂದು ಸಂಬಂಧವು ವೈಫಲ್ಯವಾಗುವುದಕ್ಕೆ ಮಾಡಬೇಕಾದ ಎಲ್ಲಾ ಸಣ್ಣಪುಟ್ಟ ಕಾರ್ಯಗಳನ್ನು ಮಾಡುತ್ತಾರೆ ಹಾಗೂ ಅವರ ನಂಬಿಕೆಯನ್ನು ಇನ್ನಷ್ಟು ದೃಢಪಡಿಸುತ್ತಾರೆ
ನಾವು ನಮ್ಮ ನಂಬಿಕೆಗಳನ್ನು ನಮ್ಮ ಮಾತುಗಳಿಂದ ಹಾಗೂ ಮುಖ್ಯವಾಗಿ ನಾವು ವಸ್ತುವಿಗೆ ಅಥವಾ ಇತರರಿಗೆ ನೀಡುವ ಹಣೆಪಟ್ಟಿಗಳಿಂದ ಗ್ರಹಿಸುತ್ತೇವೆ . ಹಾಗೂ ನಾವು ಹಣೆಪಟ್ಟಿಗಳನ್ನು ಬಳಿಸುವ ಮುಖ್ಯ ಉದ್ದೇಶವೇನೆಂದರೆ, ಇದರಿಂದ ನಾವು ಜನರನ್ನು ಸಣ್ಣ ಸಣ್ಣ ಗುಂಪುಗಳಾಗಿ ವಿಭಜಿಸಲು ಹಾಗೂ ಅವರನ್ನು ಅರ್ಥ ಮಾಡಿಕೊಳ್ಳಲು ಉಪಯೋಗವಾಗುತ್ತದೆ ಎಂಬ ಒಂದು ನಂಬಿಕೆ ಅದು ಸರಿಯೋ ಅಥವಾ ತಪ್ಪು ಎಂಬುದು ನಮಗೆ ಬಿಟ್ಟಿದ್ದು.... ಅದರಲ್ಲಿಯೂ ನಮ್ಮಲ್ಲಿ ಎಷ್ಟೋ ಜನ ನಮಗೆ ಸಮಾಜ ನೀಡಿರುವ ಹಣೆಪಟ್ಟಿಗಾಗಿ ಹಾಗೂ ಆ ಪಟ್ಟಿಯ ಅಸ್ತಿತ್ವವನ್ನು ಉಳಿಸಿವುದಕ್ಕಾಗಿ ಬದುಕುವುದೇ ಜಾಸ್ತಿ. ಅಲ್ಲವೇ?







