ಸ್ಪಾಟ್ ಲೈಟ್ ಪರಿಣಾಮ ಒಂದು ಮನೋವೈಜ್ಞಾನಿಕ ವಿದ್ಯಮಾನವಾಗಿದೆ , ಇದರಲ್ಲಿ ಜನರು ತಾವು ನಿಜವಾಗಿಯೂ ಇರುವುದಕ್ಕಿಂತ ಹೆಚ್ಚಾಗಿ ಗಮನಿಸಲ್ಪಡುತಿದ್ದಾರೆ ಎಂದು ನಂಬುವ ಮಾನಸಿಕ ಸ್ಥಿತಿಯಾಗಿದೆ. ಸ್ಪಾಟ್ ಲೈಟ್ ಪರಿಣಾಮಕ್ಕೆ ಕಾರಣವೇನೆಂದರೆ ಜ್ಞಾನಾತ್ಮಕ ಪಕ್ಷಪಾತ ಅಂದರೆ ಒಬ್ಬ ವ್ಯಕ್ತಿಯು ಎಲ್ಲರ ಜೀವನದಲ್ಲೂ ಸದಾ ಮಹತ್ವದ ಕೇಂದ್ರವಾಗಿರಲು ಸಾಧ್ಯವಿಲ್ಲ ಎಂಬುವುದನ್ನು ಕಡೆಗಣಿಸಿ ಎಲ್ಲರ ಕಣ್ಣು ತಮ್ಮ ಮೇಲಿದೆ ಎಂದು ಭಾವಿಸಲು ಪ್ರಾರಂಭಿಸುತ್ತಾನೆ. ಅದರಲ್ಲಿಯೂ ಯಾವುದಾದರೂ ವ್ಯಕ್ತಿ ಯಾವುದೇ ಅಸಮಾನ್ಯ ಅಥವಾ ವಿಚಿತ್ರವಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಈ ಪರಿಣಾಮವನ್ನು ಅತಿ ಹೆಚ್ಚಾಗಿ ಅನುಭವಿಸುತ್ತಾರೆ ಉದಾಹರಣೆಗೆ ಸಮಾಜದಲ್ಲಿ ಮುಜುಗರ ಪಡುವಂತಹ ಯಾವುದಾದರೂ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು (ಸಭೆಯಲ್ಲಿ ತಪ್ಪಾಗಿ ಮಾತನಾಡುವುದು, ಗುಂಪಲ್ಲಿ ವ್ಯಕ್ತಿಯ ಹೆಸರನ್ನು ಮರೆತು ಹೋಗುವುದು, ಇತ್ಯಾದಿ...)
ಅನೇಕ ಮನೋವಿಜ್ಞಾನಿಗಳು ಜನರನ್ನು ಈ ಪರಿಣಾಮದ ಬಗ್ಗೆ ಮಾಹಿತಿ ನೀಡಲು ಹಾಗೂ ಜಾಗೃತಿಗೊಳಿಸಲು ಪ್ರಯತ್ನಿಸುತ್ತಾರೆ ಹಾಗೂ ಒಬ್ಬ ವ್ಯಕ್ತಿ ಸಾಮಾಜಿಕ ಸ್ಪಾಟ್ ಲೈಟ್ ನಲ್ಲಿ ಇದ್ದಾರೆ ಎಂದು ಭಾವಿಸುವ ಭಾವನೆಯನ್ನು ಮಿತಗೊಳಿಸಲು ಸಲಹೆ ನೀಡುತ್ತಾರೆ ಏಕೆಂದರೆ ಇದರಿಂದ ಹಲವಾರು ಅವಕಾಶಗಳನ್ನು ನಾವೆಲ್ಲರೂ ಬಹಳ ಬಾರಿ ಕಳೆದುಕೊಂಡಿದ್ದು ಇದೆ.
ಈ ವಿಷಯದ ಬಗ್ಗೆ ಮೊದಲನೆಯ ಬಾರಿಗೆ ಸಂಶೋಧನೆ ಮಾಡಿದ್ದು ಥಾಮಸ್ ಗಿಲೋವಿಚ್, ಕೆನ್ನೆತ್ ಸವಿಟ್ಸ್ಕಿ, ವಿಕ್ಟೋರಿಯಾ ಮೆಡ್ವೆಕ್ ಮತ್ತು ಥಾಮಸ್ ಕ್ರುಗರ್ ಎಂಬ ನಾಲ್ವರು ವಿದ್ಯಾಮಾನ ತಜ್ಞರು. ಇವರ ಸಂಶೋಧನೆಯ ಪ್ರಮುಖ ಕೇಂದ್ರಎಂದರೆವು ಎಂದರೆ ಸಾಮಾಜಿಕ ತೀರ್ಪುಗಳು, ಪರಸ್ಪರ ಸಂವಹನಗಳು ಮತ್ತು ಇತರರು ತಮ್ಮನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ವ್ಯಕ್ತಿಗಳ ನಂಬಿಕೆಗಳು.
ಹೆಚ್ಚಿನ ಸಂಖ್ಯೆಯ ಜನರು ಪರಸ್ಪರ ಸಂವಾದಿಸುವ ಗುಂಪುಗಳಲ್ಲಿ (ತರಗತಿಯಲ್ಲಿ ನಡೆಯುವ ಉಪನ್ಯಾಸ ಅಥವಾ ಕ್ರೀಡಾ ಸ್ಪರ್ಧೆಯ ಸಂದರ್ಭದಲ್ಲಿ) ಎಲ್ಲರ ಗಮನವು ಒಬ್ಬ ಮನುಷ್ಯನ ಮೇಲೆ ಕೇಂದ್ರೀಕೃತವಾಗಿರವ ಕಾರಣವೇನೆಂದರೆ ಎಲ್ಲರ ಗಮನವು ವಿಭಜಿತವಾಗಿರುತ್ತದೆ. ಈ ಅಂಶವನ್ನು ಗುರುತಿಸದೇ ಇರುವ ಸಾಮರ್ಥ್ಯ ಒಬ್ಬ ವ್ಯಕ್ತಿಯನ್ನು ಎಲ್ಲರ ಗಮನ ತನ್ನ ಸುತ್ತಲೂ ಸುತ್ತುತ್ತಿದೆ ಎಂದು ಅತಿಯಾಗಿ ಅಂದಾಜಿಸುವ ಹಾಗೆ ಮಾಡುತ್ತದೆ







