


24th September 2025
20 ಮಂದಿ ಸದಸ್ಯ ಬಲವುಳ್ಳ ಸೂನಗಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಹಿಂದಿನ ಅಧ್ಯಕ್ಷ ರವಿಕುಮಾರ್ ಅವರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.ಚುನಾವಣೆಯಲ್ಲಿ ಪ್ರಶಾಂತ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಅವರು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಪ್ರಶಾಂತ್ ಮಾತನಾಡಿ ಸೂನಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲ ಸವಲತ್ತುಗಳಾದ ನೀರು,ರಸ್ತೆ, ಚರಂಡಿ,ವಿದ್ಯುತ್ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ.ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಪದ್ಮ, ಶಿವು ರವಿಕುಮಾರ್, ಶಶಿಕಲಾ, ರಾಮಚಂದ್ರು, ಲಕ್ಷ್ಮಮ್ಮ, ಪೂರ್ಣಿಮಾ ಸವಿತಾ, ಯತೀಶ್, ಶೀಲಾ, ನಿಶ್ಚಿತ, ಮುಖಂಡರಾದ ಕಾಳೇಗೌಡ, ಎಸ್. ಕೆ.ಪ್ರಕಾಶ್, ಗೋಪಾಲ,ಸೋಮಣ್ಣ,ಕೃಷ್ಣೇಗೌಡ, ರಾಕೇಶ್, ನಾಗರಾಜು,ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.