


3rd December 2025
ಮಂಡ್ಯ:- ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವತಿಯಿಂದ ಡಿಸೆಂಬರ್ 5 ರಿಂದ 7 ರವರೆಗೂ ನಡೆಯಲಿರುವ ಕೃಷಿ ಮೇಳ 2025 ಅನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದ್ದಾರೆ.
ಕೃಷಿ ಮೇಳ 2025 ರ ಅಂಗವಾಗಿ ಜಿಲ್ಲಾ ಪಂಚಾಯತಿನಿಂದ ವಿಸಿ ಫಾರ್ಮ್ ವರೆಗೂ ಆಯೋಜಿಸ ಲಾಗಿದ್ದ ಸೈಕಲ್ ಮತ್ತು ಬೈಕ್ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ನಾವಿನ್ಯತೆ, ತಂತ್ರಜ್ಞಾನ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡುವ ಅರ್ಥಪೂರ್ಣವಾದ ಕಾರ್ಯಕ್ರಮ ಇದಾಗಿದ್ದು ಕೃಷಿ ದೇಶದ ಬೆನ್ನೆಲುಬು. ಕೃಷಿಯಲ್ಲಿ ಪ್ರಗತಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಕಾಣುತ್ತದೆ. ಸದರಿ ಕೃಷಿ ಮೇಳದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಕೆ ಮತ್ತು ಹೊಸ ತಳಿಗಳ ಪ್ರದರ್ಶನ ಮಾಡಲಾಗುತ್ತದೆ ಎಲ್ಲಾ ರೈತರು ಕೃಷಿ ಮೇಳದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಡಿಸೆಂಬರ್ 5 ರಿಂದ 7 ರವರೆಗೂ ನಡೆಯಲಿರುವ ಕೃಷಿ ಮೇಳ 2025ರ ಕುರಿತಾಗಿ ರೈತರಿಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೈಕ್ ಮತ್ತು ಸೈಕಲ್ ಜಾಥಾ ವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ನಿಂದ ವಿ.ಸಿ ಫಾರ್ಮ್ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವರೆಗೂ ಜಾಥಾ ಸಾಗಲಿದೆ. ಇದರ ಉದ್ದೇಶ ಕೃಷಿ ಸಂಜೀವಿನಿಯ ಬಲವರ್ಧನೆಯನ್ನು ಹೇಗೆ ಸಾಧಿಸಬೇಕು ಇದರಿಂದ ಜನರಿಗೆ ಹೇಗೆ ಉಪಯೋಗ ಆಗುತ್ತದೆ ಎಂಬುದರ ಕುರಿತ ತಿಳಿಸುವುದು. ಹೊಸ ತಂತ್ರಜ್ಞಾನ ಬಳಸಿ ಸಮಗ್ರ ಕೃಷಿಯಿಂದ ಸುಸ್ಥಿರ ಪಡೆಯಬಹುದು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರು ಸಾಮಾನ್ಯ ಜನರು ಸಹ ಕೃಷಿ ಮೇಳದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬಹುದು. ಐದು ಜಿಲ್ಲೆಗಳಿಂದ ಬಂದ
ಎನ್ಆರ್ ಎಲ್ಎಂ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರು 50 ಹೆಚ್ಚು ಮಳಿಗೆಗಳನ್ನು ಕೃಷಿ ಮೇಳದಲ್ಲಿ ಸ್ಥಾಪನೆ ಮಾಡಲಿದ್ದಾರೆ. ವಿಭಿನ್ನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಆದ ನಂತರ ಪ್ರಥಮ ಬಾರಿಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಸದರಿ ಕೃಷಿ ಮೇಳದಲ್ಲಿ ಅನೇಕ ಕೃಷಿ ವಿಜ್ಞಾನಿಗಳು ತಳಿಗಳ ಬಗ್ಗೆ ಪರಿಚಯ ಮಾಡಲಾಗುವುದು. ಯುವ ಸಮೂಹ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿ ಕುಮಾರ್ ಅವರು ಮಾತನಾಡಿ ಐದು ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ 5 ಜಿಲ್ಲೆಗಳ ರೈತ ಬಾಂಧವರು ಕೃಷಿ ಮೇಳದಲ್ಲಿ ಭಾಗವಹಿಸಲಿದ್ದಾರೆ. ಸಮಗ್ರ ಕೃಷಿಯಿಂದ ಸುಸ್ಥಿರತೆ ಕಾಣಬಹುದು, ರೈತರು ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ಸೂಕ್ತ ವಿಧಾನದ ಮೂಲಕ ವ್ಯವಸಾಯ ಮಾಡಿ ಆದಾಯ ಗಳಿಸುವುದು ಹೇಗೆ ಎಂಬುದರ ಬಗ್ಗೆ ಕೃಷಿ ಮೇಳದಲ್ಲಿ ತಿಳಿಸಲಾಗುವುದು. ರೈತರು ಕೃಷಿ ವಿಜ್ಞಾನಗಳ ಜೊತೆಗೆ ಸಂವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಹೆಚ್ಚಿನ ರೈತರು ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿ ಮೇಳದಲ್ಲಿ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಾಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

3rd December 2025
ಮಂಡ್ಯ :- ವಿಕಲಚೇತನರನ್ನಲ್ಲಿ ವಿಶೇಷವಾದ ಚೈತನ್ಯ ಮತ್ತು ಚೇತನ ಇರುವುದರಿಂದ ಅವರನ್ನು ವಿಶೇಷಚೇನರು ಎಂದು ಕರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗ್ರಾಮೀಣ ಪುನರ್ವಸತಿ ಯೋಜನೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಂಜಯ ಟಾಕೀಸ್ ವೃತ್ತದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಜಾಥಾ ಕಾರ್ಯಕ್ರಮವನ್ನು ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಹದ ಯಾವುದೋ ಒಂದು ಅಂಗವೈಕಲ್ಯ ಇರುವ ಕಾರಣದಿಂದ ಬದುಕೆ ಇಲ್ಲ ಎಂಬಂತೆ ತಿಳಿದುಕೊಳ್ಳುವುದು ತಪ್ಪು. ವಿಕಲಚೇತನರಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ.ಅವರ ಪ್ರತಿಭೆಗೆ ಅನುಗುಣವಾಗಿ ಅವಕಾಶಗಳು ದೊರೆಯಬೇಕು. ಅವರೆಲ್ಲರೂ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಇದೆ ನಮ್ಮ ಆಶಯ ಎಂದು ಹೇಳಿದರು.
ವಿಕಲಚೇತನರ ಪ್ರತಿಭೆ ಗುರುತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕು ಅನುಕಂಪ ತೋರಿಸುವ ಅಗತ್ಯ. ವಿಶೇಷಚೇತನರು ಸಹ ನಮ್ಮಂತೆ ಎಂದು ಭಾವಿಸಬೇಕು. ಅವರು ಏಳಿಗೆಗಾಗಿ ನಾವು ಶ್ರಮಿಸಬೇಕು. ಮಂಡ್ಯ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ವಿಕಲಚೇತನರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಕಳೆದ ಆರು ತಿಂಗಳ ಹಿಂದೆ ವಿಕಲಚೇತನರ ಕುಂದು ಕೊರತೆಗಳ ಸಭೆ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗಿತ್ತು. ವಿಶೇಷ ಚೇತನರಿಗೆ ಕೆಲವು ಉಪಕರಣಗಳನ್ನು ನೀಡಲಾಯಿತು. ಜಿಲ್ಲಾಡಳಿತ ವಿಕಲಚೇತನರ ಪರವಾಗಿ ಇರುತ್ತದೆ. ಅವರನ್ನು ಸ್ವಾವಲಂಬಿಗಳಾಗಿ ಮಾಡಲು ಶ್ರಮ ವಹಿಸುತ್ತದೆ ಎಂದು ಹೇಳಿದರು.
ಸಭೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಪ್ರೇರಣಾ ಅಂದರ ಹಾಗೂ ಅಂಗವಿಕಲರ ವಸತಿ ನಿಲಯದ ಮುಖ್ಯಸ್ಥ ರವಿ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.