13th October 2024

*ಬೆಳಗಾವಿಯ ಸಮಸ್ತ ಮಾಜಿ ಸೈನಿಕ ಬಂಧುಗಳಿಗೆ ವೀರ ನಾರಿಯರಿಗೆ ಸೈನಿಕ ಪರಿವಾರದ ಸಮಸ್ತರಿಗೂ ನಮಸ್ಕಾರ*
*ಇವತ್ತು ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಸಂಘ(ಮಹಾಒಕ್ಕೂಟ) ಕಾರ್ಯಾಲಯದ ಉದ್ಘಾಟನೆ ಹಾಗೂ ಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಸುಮಾರು ಎರಡು ವರ್ಷಗಳ ಸತತ ಪ್ರಯತ್ನಗಳ ಫಲವಾಗಿ ಜಿಲ್ಲೆಯ ಹತ್ತಾರು ಸಂಘಟನೆಗಳ ಹಿರಿಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ, ಸಂಘಟನಾತ್ಮಕವಾಗಿ ಪ್ರೋತ್ಸಾಹ ನೀಡಿದ ಸಾಕಷ್ಟು ಮಾಜಿ ಸೈನಿಕರ ಬೆಂಬಲದಿಂದಾಗಿ, ಹಿರಿಯರ ಆಶೀರ್ವಾದದಿಂದ ಇವತ್ತು ಬೆಳಗಾವಿಯ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪಕ್ಕದಲ್ಲಿ ಮಹಾಒಕ್ಕೂಟದ ಕಾರ್ಯಾಲಯ ಪ್ರಾರಂಭವಾಗಿದೆ. ಈ ಕಾರ್ಯಾಲಯದಲ್ಲಿ ಸೈನಿಕ ಸಮುದಾಯಕ್ಕೆ ಅವಶ್ಯಕತೆ ಇರುವ ಎಲ್ಲ ಕಾಗದ ಪತ್ರಗಳನ್ನು ಮಾಡಲಾಗುವುದು.ಸೈನಿಕರ ಸಮುದಾಯಕ್ಕೆ ಯಾವುದೇ ರೀತಿಯಾದಂತಹ ಹೊರೆಯಾಗದಂತಹ ಅತ್ಯುತ್ತಮ ಸೇವೆಯನ್ನ ನಮ್ಮ ಕಾರ್ಯಾಲಯದಿಂದ ನೀಡಲಾಗುವುದು ಜಿಲ್ಲೆಯ ಸಮಸ್ತ ಮಾಜಿ ಸೈನಿಕರು ಈ ಕಾರ್ಯಾಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.*
*ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಬೆಳಗಾವಿ ಜಿಲ್ಲೆಯ ಮಾಜಿಸೈನಿಕರ ಸಂಘಟನೆಗಳ ಮಹಾಒಕ್ಕೂಟ ಬೆಳಗಾವಿ*

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ