13th October 2024

ಭಟ್ಕಳ | ಅರಬ್ಬಿ ಸಮುದ್ರದಲ್ಲಿ ಮೂರು ದಿನ ವಿಮಾನದಲ್ಲಿ ಫೈರಿಂಗ್ : ಮೀನುಗಾರರಿಗೆ ನಿರ್ಬಂಧ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಭಟ್ಕಳ ಅರಬ್ಬಿ ಸಮುದ್ರದಲ್ಲಿ ಯುದ್ದ ವಿಮಾನದಿಂದ ಫೈರಿಂಗ್ – ಮೂರು ದಿನ ಮೀನುಗಾರರಿಗೆ ನಿರ್ಬಂಧ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪದಲ್ಲಿ ಭಾರತೀಯ ನೌಕಾ ಪಡೆಯು ಸಮರಭ್ಯಾಸ ನಡೆಯಲಿದ್ದು ನೇತ್ರಾಣಿ ನಡುಗಡ್ಡೆಯಿಂದ ಹತ್ತು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರರಿಗೆ ಮೂರು ದಿನ ನಿಷೇಧ ಹೇರಲಾಗಿದೆ.ಅಕ್ಟೋಬರ್ 14 ರಿಂದ 16 ರವರೆಗೆ ಬೆಳಿಗ್ಗೆ 07- 00 ಗಂಟೆಯಿಂದ 18-00 ಗಂಟೆಯವರೆಗೆ ನೇತ್ರಾಣಿ ನಡುಗಡ್ಡೆಯಲ್ಲಿ ಫೈಟರ್ ಜಟ್ ಗಳು ಪೈರಿಂಗ್ ನಡೆಸುತ್ತಿರುವ ಹಿನ್ನಲೆಯಲ್ಲಿ ನೌಕಾದಳವು ಮೀನುಗಾರಿಕಾ ಇಲಾಖೆ ಮೂಲಕ ಮೀನುಗಾರರರಿಗೆ ಎಚ್ಚರಿಕೆ ನೀಡಿದೆ.ಮೂರು ದಿನ ಭಾರತೀಯ ನೌಕಾ (Indian navy) ಪಡೆ ಯುದ್ದ ವಿಮಾನದಿಂದ ಪೈರಿಂಗ್ ಹಮ್ಮಿಕೊಂಡಿದ್ದು, ಆ ಸಮಯದಲ್ಲಿ ನೇತ್ರಾಣಿ ನಡುಗಡ್ಡೆಯ 10 ನಾಟಿಕಲ್ ಮೈಲು ವ್ಯಾಪ್ತಿಯ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಭಟ್ಕಳ ತಾಲೂಕಿನ ಪಾತಿ
ದೋಣಿಯವರಿಗೆ, ಗಿಲ್ ನೆಟ್ ದೋಣಿಯವರಿಗೆ
ಫಿಶಿಂಗ್ ಬೋಟ್, ಪರ್ಶಿಯನ್ ಬೋಟ್
ಸೇರಿದಂತೆ ಆಳ ಸಮುದ್ರ ಮೀನುಗಾರಿಕಾ
ಬೋಟ್ ಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೇ ನೇತ್ರಾಣಿ ದ್ವೀಪದ ಬಳಿ ಪ್ರವಾಸಿಗರು ಹಾಗೂ ಸ್ಕೂಬಾ ಡೈವಿಂಗ್ ಮಾಡುವವರಿಗೂ ನಿರ್ಬಂಧಿಸಲಾಗಿದೆ.

ಅಂದ್ರಾಳ್ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ: ಕೊಲೆ, ಆತ್ಮಹತ್ಯೆ ಅಥವಾ ಅಪಘಾತವೇ? ಹಲವು ಅನುಮಾನಗಳಿಗೆ ಕಾರಣವಾದ ಘಟನೆ

ಗಂಗಾವತಿ: ಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಪಾಪಿ ತಮ್ಮ!- ಆನ್ ಲೈನ್ ಗೇಮ್ ಬೆಡವೆಂದು ಬುದ್ದಿವಾದಕ್ಕೆ ಸಿಟ್ಟು

ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸರ್ಕಾರದ ಸುಪರ್ದಿಗೆ ಮೆಸೋನಿಕ್ ಹಾಲ್ ಜಮೀನು ಜಿಲ್ಲಾಡಳಿತ ವಶಕ್ಕೆ