
13th August 2025
ಬಳ್ಳಾರಿ,ಆ.13.ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಸಿಜಿಎಂ, ಪಿಜಿಎಂ, ಡಿಜಿಎಂ ಮತ್ತು ಮಾರ್ಕೆಟಿಂಗ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್-2025 ತಿಂಗಳಿಗೆ ಸೀಮಿತ ಅವಧಿಗೆ ಮಾತ್ರ “ಫ್ರೀಡಂ ಪ್ಲಾನ್” ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್, ಉಚಿತ ಸಿಮ್ ಪಡೆಯಬಹುದು(30 ದಿನಗಳಿಗೆ ಮಾತ್ರ). ಈ ಸೌಲಭ್ಯವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11th August 2025
ಹಾವೇರಿ ಆ 12. ಭಾರತದ ಪ್ರಮುಖ ವೈವಿಧ್ಯಮಯ ಕೃಷಿ ಉದ್ಯಮಗಳಲ್ಲಿ ಒಂದಾಗಿರುವ ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ (ಗೋದ್ರೇಜ್ ಅಗ್ರೋವೆಟ್), ವಿಶೇಷವಾಗಿ ಮೆಕ್ಕೆಜೋಳ ಬೆಳೆಗೆ ಹೊಸ ಕಳೆನಾಶಕವನ್ನು ಪರಿಚಯಿಸಿದೆ.
ಐಎಸ್‍ಕೆ ಜಪಾನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕಳೆನಾಶಕ 'ಅಶಿತಕ' ಭಾರತದಲ್ಲಿ ಮೆಕ್ಕೆಜೋಳ ರೈತರು ಎದುರಿಸುತ್ತಿರುವ ಪ್ರಮುಖ ಸವಾಲಾಗಿರುವ ಹುಲ್ಲು ಮತ್ತು ಅಗಲವಾದ ಎಲೆ ಹೊಂದಿರುವ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹೊಸ ಪರಿಹಾರವಾಗಿದೆ. ಮೆಕ್ಕೆಜೋಳ ಬೆಳೆಗೆ ಕಳೆ ಬಾಧೆ ಪ್ರಮುಖ ಸಮಸ್ಯೆಯಾಗಿದ್ದು, ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ, ಅಶಿತಕವನ್ನು 2 ರಿಂದ 4 ಎಲೆಗಳ ಹಂತದಲ್ಲಿ ಅನ್ವಯಿಸಿದರೆ, ಕಳೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಎಂದು ಗೋದ್ರೇಜ್ ಅಗ್ರೋವೆಟ್ ಬೆಳೆ ಸಂರಕ್ಷಣಾ ವಹಿವಾಟಿನ ಸಿಇಒ ರಾಜವೇಲು ಎನ್.ಕೆ. ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೆಕ್ಕೆಜೋಳದಲ್ಲಿ ಅಶಿತಕದ ಪರಿಣಾಮಕಾರಿ ಕಳೆ ನಿಯಂತ್ರಣವು ಬೆಳೆ-ಕಳೆ ಸ್ಪರ್ಧೆಯನ್ನು ನಿಯಂತ್ರಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಮಣ್ಣಿನ ತೇವಾಂಶ ಮತ್ತು ಪೋಷಕಾಂಶಗಳು ಉತ್ತಮ ಬಳಕೆಗೆ ಚಾಲನೆ ನೀಡುತ್ತದೆ.
ಹೂಬಿಡುವ ಮತ್ತು ಧಾನ್ಯ ಭರ್ತಿಯಾಗುವ ಮಹತ್ವದ ಹಂತಗಳಲ್ಲಿ ಸಸ್ಯದ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ವಿವರಿಸಿದ್ದಾರೆ.
2 ರಿಂದ 4 ಎಲೆಗಳ ಹಂತದಲ್ಲಿ ಎಕರೆಗೆ 400 ಮಿಲಿ ದ್ರಾವಕದೊಂದಿಗೆ ಬಳಸಿ ಕಳೆಗಳನ್ನು ಮೊದಲೇ ನಿಯಂತ್ರಿಸಬಹುದಾಗಿದೆ. ಇದು ಹೆಚ್ಚು ಸ್ಥಿರವಾದ ಉತ್ಪಾದನೆ, ಉತ್ತಮ ಧಾನ್ಯದ ಗುಣಮಟ್ಟ ಮತ್ತು ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಏರಿಳಿತದಿಂದ ಕೂಡಿರುವ ಕೃಷಿ ಆದಾಯದ ವಿರುದ್ಧ ಬಲಿಷ್ಠ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದಾರೆ.