


14th August 2025
ಬಳ್ಳಾರಿ ಆ 13. ಕನಿಷ್ಠ ವೇತನ 10,000 ರೂಪಾಯಿ,ಅಂಗನವಾಡಿ ಕಾರ್ಯಕರ್ತರಿಗೆ ನೀಡುತ್ತಿರುವ ಹೆಚ್ಚುವರಿ ಒಂದು ಸಾವಿರ ರೂಪಾಯಿಗಳನ್ನು ನಮಗೂ ನೀಡಬೇಕು ಎಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಡೆಸುತ್ತಿರುವ ಧರಣಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಅಹೋ ರಾತ್ರಿ ಧರಣಿಯಲ್ಲಿ ಧರಣಿ ಕುಳಿತ ಆಶಾ ಕಾರ್ಯಕರ್ತೆಯರು ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಕೂತು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡರು.
ಇಂದಿನ ಧರಣಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗೌರವ ಅಧ್ಯಕ್ಷರಾದ ಶಾಂತ, ಎಸ್ ಯು ಸಿಐನ ಸೋಮಶೇಖರ್, ನಾಗರಿಕ ಹೋರಾಟ ಸಮಿತಿಯ ಸೋಮಶೇಖರ್ ಗೌಡ, ಸತ್ಯ ಬಾಬು ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಈ ಧರಣಿಯಲ್ಲಿ ಪಾಲ್ಗೊಂಡಿದ್ದರು

14th August 2025
ಬಳ್ಳಾರಿ.ಆ.13 : ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರ ಶ್ರೀ ಮಂಜುನಾಥ ಸನ್ನಿಧಿಯ ಧರ್ಮಸ್ಥಳದ ವಿರುದ್ಧ ಯೂಟ್ಯೂಬರ್ ಮತ್ತು ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ಮತ್ತು ಸಮೀರ್ ಎಂ.ಡಿ ಇವರುಗಳು ನಿರಂತರವಾಗಿ ಯೂಟ್ಯೂಬ್ ಚಾನೆಲ್ಗಳ ಮೂಲಕ ಅಪಪ್ರಚಾರ ಮಾಡುತ್ತಾ ದೇವಸ್ಥಾನದ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಬಳ್ಳಾರಿ ನಗರದಲ್ಲಿ ಸಾವಿರಾರು ಭಕ್ತರುಗಳು ಭಾರಿ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಡಾ.ರಾಜ್ ಕುಮಾರ್ ರಸ್ತೆಯ ನಾರಾಯಣರಾವ್ ಪಾರ್ಕ್ ನಿಂದ ಪ್ರತಿಭಟನೆಯನ್ನು ನಡೆಸಿಕೊಂಡು ಬಂದು ಭಕ್ತ ಸಮೂಹ ರಾಯಲ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕ್ಷೇತ್ರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಧರ್ಮಸ್ಥಳವು ಹಿಂದು ದೇವಾಲಯಗಳಲ್ಲಿ ಒಂದು ಅತ್ಯಂತ ಪ್ರಮುಖವಾದ ದೇವಸ್ಥಾನವಾಗಿದೆ, ಮತ್ತು ರಾಜ್ಯ ಮತ್ತು ಹೊರರಾಜ್ಯದ ಸೇರಿ ದೇಶಾಧ್ಯಾಂತ ಕೋಟ್ಯಾಂತರ ಭಕ್ತರಿದ್ದಾರೆ. ಇಂತಹ ಪವಿತ್ರ ಕ್ಷೇತ್ರದ ಬಗ್ಗೆ ಯಾವುದೇ ದಾಖಲೆಗಳಿಲ್ಲದೆ ಸರಣಿ ಹತ್ಯೆಗಳನ್ನು ನಡೆಸಲಾಗಿದೆ ಎಂಬಂತ ಸುಳ್ಳು ಸುದ್ದಿಗಳನ್ನು ಹರಡಿಸಿ ಕ್ಷೇತ್ರದ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ, ಒಂದು ವೇಳೆ ಅಂತಹ ಘಟನೆಗಳು ನಡೆದಿದೆ ಎಂದಾದಲ್ಲಿ ಕಾನೂನಿ ಪ್ರಕಾರ ತನಿಖೆಯನ್ನು ನಡೆಸಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ ಅದು ಬಿಟ್ಟು ಸುಖಾ ಸುಮ್ಮನೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಾ ಧರ್ಮಸ್ಥಳದ ವಿರುದ್ಧ ಕಳೆದ 13 ವರ್ಷಗಳಿಂದ ನಿರಂತರವಾಗಿ ಷಡ್ಯಂತ್ರ ರೂಪಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತು ಸಮೀರ್ ಎಂ.ಡಿ ಇವರುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಗ್ರಹಿಸಿದರು.
ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮಾತನಾಡಿ, ಅನಾಮಿಕ ವ್ಯಕ್ತಿಯೋರ್ವನು ನೀಡಿದ ದೂರಿನ ಮೇರೆಗೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ನಡೆಸುತ್ತಿದೆ ಮತ್ತು ಅವನು ತೋರಿಸುತ್ತಿರುವ ಸಮಾದಿಗಳನ್ನು ಅಗೆಯಲಾಗುತ್ತಿದೆ, ಆ ವರದಿ ಬರುವ ಮುಂಚೆ ಇವರುಗಳು ಪ್ರಚೋಧನಾಕಾರಿ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದ ಧರ್ಮಕರ್ತರಾದ ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿದ್ದಾರೆ ಇವರ ಮೇಲೆ ಕೇಸ್ ದಾಖಲಿಸಿ ಇವರ ಆದಾಯದ ಮೂಲಗ ಬಗ್ಗೆ ತನಿಖೆಯನ್ನು ನಡೆಸಬೇಕು, ಮತ್ತು ಕ್ಷೇತ್ರದ ವಿರುದ್ಧ ಈ ರೀತಿಯ ಸುಳ್ಳು ಸುದ್ದಿಗಳನ್ನು ಸಮಾಜಿಕ ಜಾಲತಾಣದಲ್ಲಿ ಹರಡುತ್ತಿರುವವರ ವಿರುದ್ಧ ತಡೆನೀಡಿ ಸೂಕ್ತ ಕ್ರಮಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದುರು.
ಈ ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಮೋಕಾ , ಅಲ್ಲಂ ಪ್ರಶಾಂತ್, ವೀರಶೇಖರ್ ರೆಡ್ಡಿ, ಇಬ್ರಾಹೀಮ್ ಬಾಬು, ಗುಡಿಗಂಟಿ ಹನುಮಂತಪ್ಪ, ಮೊತ್ಕರ್ ಶ್ರೀನಿವಾಸ್, ರೂಪಶ್ರೀ, ಪುಷ್ಪಾ, ವಿರೂಪಾಕ್ಷ, ವಿ ಮಹೇಶ್, ರೈತ ಸಂಘದ ಸಿಂಧಿಗೇರಿ ಗೋವಿಂದಪ್ಪ, ಸಂಗನಕಲ್ಲು ಕೃಷ್ಣ, ವಿ.ಎಚ್.ಪಿ ಪದಾಧಿಕಾರಿಗಳು, ಶ್ರೀರಾಮಸೇನೆ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಶ್ರೀ ಕ್ಷೇತ್ರದ ಭಕ್ತರು

11th August 2025
ಬಳ್ಳಾರಿ ಆ 12. ಗಣಿನಾಡು ಬಳ್ಳಾರಿ ನಗರದ ಬಳ್ಳಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿಯ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಜೆ.ಎಂ ತಿಪ್ಪೇಸ್ವಾಮಿ ಅವರು ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದು ಕರ್ತವ್ಯಕ್ಕೆ ನೇಮಕರಾಗಿದ್ದಾರೆ. ಹಾಗಾಗಿ 2010 ರಿಂದ 2012ನೇ ಸಾಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಶುಭಕೋರಿ, ಸನ್ಮಾನಿಸಿದರು. ಈ ಸಮಯದಲ್ಲಿ ಹಳೆಯ ವಿದ್ಯಾರ್ಥಿಗಳಾದ ಗಿರೀಶ್ ಕುಮಾರ್ ಗೌಡ, ಹುಲಿರಾಜ್, ಮರಿಸ್ವಾಮಿ, ಹನುಮೇಶ್ ಹಾಜರಿದ್ದರು.

11th August 2025
ಬಳ್ಳಾರಿ, ಆ.11: ಹರ್ ಘರ್ ತಿರಂಗಾ ಅಭಿಯಾನವು ದೇಶದ ಜನತೆಯಲ್ಲಿ ರಾಷ್ಟ್ರ ಪ್ರೇಮ, ದೇಶಭಕ್ತಿಯನ್ನು ಉದ್ದೀಪಿಸುತ್ತದೆ ಎಂದು ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ಸೈನಿಕರಾದ ಬಿ. ಪ್ರಹ್ಲಾದ ರೆಡ್ಡಿ ಅವರು ತಿಳಿಸಿದರು.
ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ನಗರದ ಎಸ್.ಜಿ.ಟಿ ಸಮೂಹ ಸಂಸ್ಥೆ ಹಾಗೂ ಮನುಕುಲ ಆಶ್ರಮ ಟ್ರಸ್ಟ್ ಸಹಯೋಗದಲ್ಲಿ ಸ್ಥಳೀಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಹರ್ ಘರ್ ತಿರಂಗಾ ಪ್ರಚಾರ 2025ರ ಅಂಗವಾಗಿ ಸಾಂಸ್ಕೃತಿಕ ಹಾಗೂ ತೊಗಲು ಗೊಂಬೆಯಾಟ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ತ್ಯಾಗ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿವೆ ಎಂದು ಹೇಳಿದರು.
ಯಾವುದೇ ಜಾತಿ, ಧರ್ಮದವರಿದ್ದರೂ ನಾವೆಲ್ಲರೂ ಮೊದಲು ಭಾರತೀಯರು ಎಂಬ ಅಂಶವನ್ನು ಮರೆಯಬಾರದು ಎಂದರು.
ರಾಷ್ಟ್ರೀಯ ಹಬ್ಬಗಳು ಶಾಲಾ ಕಾಲೇಜು, ಸರಕಾರಿ ಸಂಸ್ಥೆಗಳಿಗೆ ಸೀಮಿತವಾಗ ಬಾರದು. ಪ್ರತಿಯೊಬ್ಬ ಸಾರ್ವಜನಿಕರು ಮನೆ ಹಬ್ಬಗಳಿಗೂ ಮಿಗಿಲಾಗಿ ಸಂಭ್ರಮ, ಸಡಗರಗಳಿಂದ ಆಚರಿಸ ಬೇಕು ಎಂದು ಮನವಿ ಮಾಡಿದರು.
ಮತ್ತೋರ್ವ ಮಾಜಿ ಸೈನಿಕ ಶೇಕ್ ಸಾಬ್ ಮಾತಾನಾಡಿ ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟವಾಗಿದೆ. ವಿಶ್ವದಲ್ಲಿ ಭಾರತ, ಭಾರತದಲ್ಲಿ ಕರ್ನಾಟಕ ಶ್ರೇಷ್ಠ ರಾಜ್ಯವೆಂದು 22 ವರ್ಷಗಳ ಕಾಲ ಬಾಂಗ್ಲಾ, ಪಾಕಿಸ್ತಾನದ ಗಡಿಗಳಲ್ಲಿ ಕಾರ್ಯನಿರ್ವಹಿಸಿರುವ ತಮಗೆ ಅನುಭವಕ್ಕೆ ಬಂದಿದೆ ಎಂದರು.
ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಗರ ಸಂಚಾಲಕಿ ಬಿ.ಕೆ.ನಿರ್ಮಲ ಅಕ್ಕ,
ತಂಜಾವೂರು ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಟಿ.ಸುಂದರ, ಕಲ್ಯಾಣ ಸ್ವಾಮಿ, ಭಾಸ್ಕರ
ಅಧ್ಯಕ್ಷತೆ ವಹಿಸಿದ್ದ ಎಸ್ ಜಿ ಟಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಜಿ. ನಾಗರಾಜ್ ಅವರು ಮಾತನಾಡಿದರು.
ವೇದಿಕೆಯಲ್ಲಿ ಎಸ್ ಜಿ ಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್ ಎನ್ ರುದ್ರಪ್ಪ ಉಪಸ್ಥಿತರಿದ್ದರು.
ಎಸ್ ಜಿ ಟಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ರೀನಾ ರೆಡ್ಡಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನುಕುಲ ಆಶ್ರಮ ಟ್ರಸ್ಟ್ ಸಂಸ್ಥಾಪಕ ಬಿವಿ ಮಲ್ಲಿಕಾರ್ಜುನ ವಂದಿಸಿದರು. ಪವಿತ್ರ, ಬಿಎಂ ಕಲ್ಯಾಣಿ ನಿರ್ವಹಿಸಿದರು.
ತೊಗಲು ಗೊಂಬೆಯಾಟ: ಮನುಕುಲ ಆಶ್ರಮ ಟ್ರಸ್ಟ್ ವತಿಯಿಂದ ಪ್ರದರ್ಶಿಸಿದ ಕನಕದಾಸ ತೊಗಲುಗೊಂಬೆಯಾಟ ಗಮನ ಸೆಳೆಯಿತು.
ರಾಷ್ಟ್ರ ನಾಯಕರ ಪೋಷಾಕು ಧರಿಸಿದ ಚಿಣ್ಣರು, ವಿದ್ಯಾರ್ಥಿಗಳು ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಭಿಕರು, ವಿದ್ಯಾರ್ಥಿಗಳಿಗೆ ತಿರಂಗಾಗಳನ್ನು ವಿತರಿಸಲಾಯಿತು.

11th August 2025
ಬಳ್ಳಾರಿ ಆ. 11 : ಕಳೆದ ಒಂದು ವರ್ಷದ ಹಿಂದೆ ಕೋಲ್ಕತ್ತ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮತ್ತು ಅವರ ಸಾವಿಗೆ ನ್ಯಾಯ ಸಿಗಬೇಕೆಂದು ಮೆಡಿಕಲ್ ಸರ್ವೀಸ್ ಸೆಂಟರ್(MSC) ನಿಂದ ಬಳ್ಳಾರಿಯ ಬಿ ಎಮ್ ಸಿ ಆರ್ ಸಿ ವೈದ್ಯಕೀಯ ಕಾಲೇಜಿನಲ್ಲಿ ಮೊಂಬತ್ತಿಯನ್ನು ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು ಎಂದು ಬಿ ಎಂ ಎಸ್ ಆರ್ ಸಿ ಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆ ನಡೆದು ಒಂದು ವರ್ಷ ಕಳೆದರೂ ಇನ್ನು ಕೂಡ ನ್ಯಾಯಯುತವಾಗಿ ಸರಿಯಾದ ತನಿಖೆಯು ನಡೆದಿರುವುದಿಲ್ಲ. ಆದ್ದರಿಂದ ನಿಷ್ಪಕ್ಷಪಾತವಾದ ತನಿಖೆಯನ್ನು ನಡೆಸಿ ಘಟನೆಯಲ್ಲಿ ಅತ್ಯಾಚಾರ ಮತ್ತು ಅತ್ತೆಗೆ ಗುರಿಯಾದ ಮತ್ತು ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಬೇಕು ಮತ್ತು ಹತ್ಯೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಸಿಗಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ಡಾಕ್ಟರ್ ಉಪೇಂದ್ರ ರೆಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ ವಿ ಎಮ್ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಆರ್ ಎಲ್ ಎನ್ ಮೂರ್ತಿ, ಮೆಡಿಕಲ್ ಸರ್ವೀಸ್ ಸೆಂಟರ್ ನ ಡಾ.ದಿವ್ಯ, ಡಾ.ಉಪೇಂದ್ರ, ಡಾ.ಸೈಯದ್, ಫಾರ್ಮಸಿ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಈ ಶ್ರದ್ಧಾಂಜಲಿ ಸಭೆಯಲ್ಲಿ ಇದ್ದರು.

10th August 2025
ಬಳ್ಳಾರಿ ಆ 10. ಗಣಿನಾಡು ಬಳ್ಳಾರಿ ಜಿಲ್ಲೆಯ ಮೋಕ ರಸ್ತೆಯಲ್ಲಿನ ಕೆ.ಆರ್.ಎಸ್ ಫಂಕ್ಷನಹಾಲ್ ನಿಂದ ಭಾನುವಾರ ಬೆಳಿಗ್ಗೆ ೪ನೇ ಆವೃತ್ತಿಯ, ಜೆ.ಎಸ್.ಡ್ಲ್ಯೂ ೨೦೨೫ನೇ ಸಾಲಿನ ೫, ೧೦ ಕಿಲೋಮೀಟರ್ ರನ್, ಬಿ.ಸಿ.ಆರ್.ಎಫ್ ತಂಡದ ಸದಸ್ಯರ ರನ್ನಿಂಗ್ ನಲ್ಲಿ ಭಾಗವಹಿಸಿದರು.
ವಿಶೇಷವಾಗಿ ತಂಡದ ಸದಸ್ಯ ವಿಕ್ರಂ 21 ಕಿಲೋಮೀಟರ್ ವಾಕ್ ಅಂಡ್ ರನ್ ಪೂರ್ಣಗೊಳಿಸಿ, 5 ಕಿಲೋಮೀಟರ್ ಸೈಕ್ಲಿಂಗ್ ಪೂರ್ಣಗೊಳಿಸಿದರು.
ಈ ಸಮಯದಲ್ಲಿ ಬಿ.ಸಿ.ಆರ್.ಎಫ್ ತಂಡದ ಸದಸ್ಯರಾದ ಡಾ.ಸೋಮನಾಥ್,ಪ್ರಶಾಂತ್, ಸಂದೀಪ್, ಸಾಗರ, ರಾಹುಲ್, ಚಂದ್ರಶೇಖರ, ಡಾ.ತಿಪ್ಪಾರೆಡ್ಡಿ, ವೆಂಕಿ, ಶಿವಾನಂದ,ಡಾ.ದಿನೇಶ್ ಗುಡಿ, ಗಿರೀಶ್ ಕುಮಾರ್ ಗೌಡ ಮತ್ತು ಇನ್ನಿತರರು ಭಾಗವಹಿಸಿದ್ದರು.

9th August 2025
ಬಳ್ಳಾರಿ, ಆ 09. ಭಾರತದ ಪ್ರಮುಖ ಎಲೆಕ್ಟ್ರಿಕ್ ಟೂ-ವೀಲರ್ ತಯಾರಕರಲ್ಲಿ ಒಬ್ಬರಾದ ಪ್ಯೂರ್ ತನ್ನ ಹೊಸ ಶೋರೂಮ್ ಉದ್ಘಾಟನೆ ಬಳ್ಳಾರಿಯಲ್ಲಿ ಘೋಷಿಸಲು ಹೆಮ್ಮೆಯಾಗುತ್ತದೆ. ದಕ್ಷಿಣ ಭಾರತದಲ್ಲಿ ತನ್ನ ಹಾಜರಾತಿಯನ್ನು ಬಲಪಡಿಸುವ ಮಿಷನತ್ತ ಈ ತಂತ್ರಾತ್ಮಕ ವಿಸ್ತರಣೆ ಮಹತ್ವದ ಹೆಜ್ಜೆಯಾಗಿದೆ.
ಈ ಸಮಾರಂಭದಲ್ಲಿ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಹಾಗೂ ಇತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಅಂಜನಾದ್ರಿ ಟೈರ್ಸ್ ಪಕ್ಕದಲ್ಲಿ, ಮದ್ದಿಕೇರಿ ಭೀಮಯ್ಯ ಹೈ ಸ್ಕೂಲ್ ಎದುರು, ಮೊಕಾ ರಸ್ತೆ, ಗಾಂಧಿನಗರ, ಬಳ್ಳಾರಿ, ಕರ್ನಾಟಕದಲ್ಲಿರುವ ಈ ಶೋರೂಮ್‌ನಲ್ಲಿ ಪ್ಯೂರ್ ಇವಿ ಯ ಸಂಪೂರ್ಣ ಶ್ರೇಣಿಯ ಎಲೆಕ್ಟ್ರಿಕ್ ಟೂ-ವೀಲರ್‌ಗಳು, ವಿಶೇಷವಾಗಿ ಜನಪ್ರಿಯ ಈ ಪ್ಲೂಟೋ 7ಜಿ ಮ್ಯಾಕ್ಸ್ ಹಾಗೂ ಈ ಟ್ರಸ್ಟೀ ಎಕ್ಸ್ ಪ್ರದರ್ಶನಗೊಳ್ಳಲಿವೆ. ಬಳ್ಳಾರಿಯ ಜನರಿಗೆ ಅತ್ಯುತ್ತಮ ಎಲೆಕ್ಟ್ರಿಕ್ ರೈಡಿಂಗ್ ಅನುಭವ ನೀಡಲು ಪ್ಯೂರ್ ಇವಿ ಸಿದ್ಧವಾಗಿದೆ.
ನಮ್ಮ ಅಗ್ರಗಣ್ಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳ ಜೊತೆಗೆ, ಹೊಸ ಶೋರೂಮ್ ಪ್ಯೂರ್ ಪವರ್ – ನಮ್ಮ ಎನರ್ಜಿ ಸ್ಟೋರೇಜ್ ಉತ್ಪನ್ನ ಸರಣಿಯನ್ನೂ – ಮನೆಗಳು ಮತ್ತು ವ್ಯವಹಾರಗಳಿಗೆ ಶುದ್ಧ ಇಂಧನದ ಭದ್ರತೆ ಒದಗಿಸಲು ಪ್ರದರ್ಶಿಸಲಿದೆ.
ಈ ಶೋರೂಮ್ ಉದ್ಘಾಟನೆ ಪ್ಯೂರ್ ಇವಿ ಯ ಆಕ್ರಮಣಕಾರಿ ವಿಸ್ತರಣೆ ತಂತ್ರಕ್ಕೆ ಸಾಕ್ಷಿಯಾಗಿದೆ. ಹೆಚ್ಚಿನ ಜನರಿಗೆ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದೆ. ಸ್ಥಳೀಯ ಆರ್ ಅಂಡ್ ಡಿ ಮತ್ತು ತಯಾರಿಕೆಯಲ್ಲಿ ಗಮನ ಕೆಂದ್ರೀಕರಿಸಿ, ಪ್ಯೂರ್ ಇವಿ ಗ್ರಾಹಕರಿಗೆ ಸ್ಥಿರತೆಯ ಆಯ್ಕೆ ಮಾಡಲು ಬದ್ಧವಾಗಿದೆ.
ಈ ವಿಸ್ತರಣೆ ಪ್ಯೂರ್ ಯ 30 ತಿಂಗಳೊಳಗೆ 250 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯುವ ವಿಶಾಲ ಯೋಜನೆಯ ಭಾಗವಾಗಿದೆ. ಇದರಿಂದ ದೇಶವ್ಯಾಪಿ ಜಾಲವು 320 ಕ್ಕೂ ಹೆಚ್ಚು ಶೋರೂಮ್‌ಗಳಿಗೆ ವಿಸ್ತರಿಸಲಾಗುವುದು.
ಬಳ್ಳಾರಿಯಲ್ಲಿ ಈ ಹೊಸ ಆರಂಭದೊಂದಿಗೆ, ಪ್ಯೂರ್ ಭಾರತವನ್ನು ಶುದ್ಧ ಮೊಬಿಲಿಟಿ ಮತ್ತು ಇಂಧನ ಸ್ವಾವಲಂಬನೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

9th August 2025
ದಳಾಲಿ ವರ್ತಕರ ನಡುವೆ, ಮತ್ತು ಖರೀದಿ ಮಾಡುವ ಅವರು ಮದ್ಯ ಭಿನ್ನ ಅಭಿಪ್ರಾಯ
ದಿಂದ ಖರೀದಿಯಲ್ಲಿ ಧರ ಹೆಚ್ಚು ಕಡಿಮೆ ಆಗಿತ್ತು, ರೈತರು ಗಲಾಟೆ ಮಾಡಿದ್ದರು,
ಬಳ್ಳಾರಿ ಮಾರುಕಟ್ಟೆಯಲ್ಲಿ ಖರೀದಿ ನಿಂತುಹೋಗಿತ್ತು, ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರ ಮತ್ತು ಇತರ ರಾಜ್ಯಗಳಿಂದ ದೊಡ್ಡಮಟ್ಟದಲ್ಲಿ ಶೇಂಗ ಬರುತ್ತಿದೆ.
ಈ ಹಿಂದೆ ರೈತರು ಹಸಿ ಇರುವ ಶೇಂಗವನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು,
ಆಸಂದರ್ಭದಲ್ಲಿ ಖರೀದಿದಾರರು ಹಸಿ ಶೇಂಗವನ್ನು ಖರೀದಿ ಮಾಡಲು ಆಗುವುದಿಲ್ಲ ಮತ್ತು ಅದನ್ನು ಒಣಗಿಸಿ ಮಾರುಕಟ್ಟೆಗೆ ಕಳಿಸಲು ತುಂಬಾ ಕಷ್ಟವಾಗುತ್ತದೆ ಇದರಿಂದ ಗುಣಮಟ್ಟದ ಶೇಂಗಾ ಕೂಡ ನಷ್ಟಕ್ಕೆ ಗುರಿಯಾಗುತ್ತದೆ ಎಂದು ಅದನ್ನು ಖರೀದಿ ಮಾಡಲು ಆಗುವುದಿಲ್ಲವೆಂದು ನಿಲ್ಲಿಸಲಾಗಿತ್ತು.
ಇದರಿಂದ ಕಂಗಾಲಾದ ರೈತರು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನ್ಯಾಯ ಆಗಿದೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿ ವಿಡಿಯೋಗಳ ಮೂಲಕ ಪ್ರಚಾರ ಆಗಿತ್ತು.
ಅದರಿಂದ ಮಾರುಕಟ್ಟೆ ಗೊಂದಲಕ್ಕೀಡಾಗಿತ್ತು.
ತದನಂತರ ನೂತನವಾಗಿ ಬಂದಿರುವಂತಹ ಮಾರ್ಕೆಟ್ ಸೆಕ್ರೆಟರಿ ವಿ. ಆರ್. ಜಯ ಕುಮಾರ್ ಅವರು ರೈತರಿಂದ ಯಾವುದೇ ಕಮಿಷನ್ ತೆಗೆದುಕೊಳ್ಳಬಾರದೆಂದು ದಳಾಲಿ ಅಂಗಡಿಯ ಮಾಲೀಕರ ಮೇಲೆ ನಿರ್ಬಂಧವನ್ನು ಏರಿದ್ದರು, ದಳಾಲಿ ಅಂಗಡಿ ಮಾಲೀಕರು ಏನಿದ್ದರೂ ಶೇಂಗ ಖರೀದಿ ಮಾಡಲು ಬರುವ ಟೆಂಡರ್ ದಾರರ ಬಳಿ ತಮ್ಮ ಕಮಿಷನ್ ಪಡಿಬೇಕಂದು ಆದೇಶ ಮಾಡಿದ್ದರು.
ಇದರಿಂದ ಕಂಗಾಲದ ಅಂಗಡಿ ಮಾಲೀಕರು ಕಮಿಷನ್ ಇಲ್ಲವೆಂದರೆ ನಾವು ಏನು ಮಾಡುವುದೆಂದು ಹಳೆ ಪದ್ದತಿಯಲ್ಲಿ ಖರೀದಿ ಮಾಡಲು ಕಷ್ಟವಾಗುತ್ತದೆ ಎಂದು ವಾದ ಮಾಡುತ್ತಾ ಮಾರ್ಕೆಟನ್ನು ನಿಲ್ಲಿಸಲಾಗಿತ್ತು.
ಕೊನೆಗೆ ಶುಕ್ರವಾರ ಮಾರ್ಕೆಟ್ ಸಮಿತಿ ಅಧ್ಯಕ್ಷರಾಗಿರುವಂತಹ ಕಟ್ಟೆಮನೆ ನಾಗೆಂದ್ರ, ಉಪಾಧ್ಯಕ್ಷ ಕಪ್ಪಗಲ್ ರಾಮಣ್ಣ ಸೆಕ್ರೆಟರಿ ಜಯ ಕುಮಾರ್ ಅವರು ದಳಾಲಿ ಮತ್ತು ಟೆಂಡರ್ ದಾರರನ್ನು ಅಂಗಡಿಯ ಮಾಲೀಕರನ್ನು ಸೇರಿಸಿ ಸಮಾವೇಶ ನಡೆಸಿ ರೈತರಿಂದ ನಯಾ ಪೈಸ ಕಮಿಷನ್ ತೆಗೆದುಕೊಳ್ಳಬಾರದೆಂದು ತಾವು ಏನಿದ್ದರೂ ಶೇಂಗ ಖರೀದಿ ಮಾಡಲು ಬಂದಿರುವ ಅವರಿಂದಲೇ ಪಡೆಬೇಕೆಂದು ತೀರ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಖರೀದಿ ದಾರರು ಯಾರು ಬರುತ್ತಿಲ್ಲವೆಂದು , ಹೀಗಾದರೆ ಮಾರುಕಟ್ಟೆ ಬೀಗ ಹಾಕಬೇಕಾಗುತ್ತದೆ ಎಂದು ಕೆಲವರು ಹೇಳುಲಾಗಿತ್ತು, ಇದಕ್ಕೆ ಆಕ್ರೋಶ ಗೊಂಡ,ಅಧ್ಯಕ್ಷ ನಾಗೇಂದ್ರ ಅವರು ಮಾರುಕಟ್ಟೆಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಲು ನೀವು ಯಾರು ಸರ್ಕಾರ ಇದೆ. ಖರೀದಿದಾರನ್ನು ಬೇರೆ ಕಡೆಯಿಂದ ಖರೀದಿ
ಸಿ ವ್ಯಾಪಾರ ವಹಿವಾಟು ಮಾಡಬೇಕಾಗುತ್ತದೆ, ಮಾಡುತ್ತೇವೆ ಎಂದು ಹೆದರಿಕೆ ಗಳನ್ನು ಮಾಡಬೇಡಿ ಎಂದು ತಿಳಿಸಿದರು.
ಶುಕ್ರವಾರ ಬಳ್ಳಾರಿ ಮಾರುಕಟ್ಟೆಯಲ್ಲಿ ಶೇಂಗಾ ಖರೀದಿಯಾಗಿದ್ದು ಸಂತೋಷದ ಸುದ್ದಿ ಆಗಿದೆ.
ಇನ್ನು ಮುಂದೆ ರೈತರಿಗೆ ಯಾವುದೇ ತೊಂದರೆ ಆಗದಂತೆ ಯಾವುದೇ ದಳಾಲಿ ಕಮಿಷನ್ ಇಲ್ಲದಂತೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು , ಸೆಕ್ರೆಟರಿ ಅವರು ಅಧ್ಯಕ್ಷರು ನಾಗೇಂದ್ರ ತಿಳಿಸಿದ್ದಾರೆ. ಒಂದು ವಾರ ದಿಂದ ಮಾರುಕಟ್ಟೆ ಬಂದ್ ಆಗಿತ್ತು, ಹಮಾಲಿರ ಗೆ ಕೂಡ ತೊಂದ್ರೆ ಆಗಿದೆ ಅವರು ಗೆ ಕೂಡ ಅನುಕೂಲ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರೂರು ಮಾಧವರೆಡ್ಡಿ ರೈತ ಸಂಘ. ಎಪಿಎಂಸಿ ಮುಖಂಡರು, ಬುಡಾ ಮಾಜಿ ಅಧ್ಯಕ್ಷರು ಪಾಲಣ್ಣ,ಎಪಿಎಂಸಿ ಉಪಾಧ್ಯಕ್ಷರು ಕಪ್ಪಗಲ್ ರಾಮಣ್ಣ, ಪೊಲ ಬಸವರಾಜ್,ಡಿಡಿ ಓಂಕಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

8th August 2025
ಬಳ್ಳಾರಿ,ಆ.07: ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಾಗನೂರು ಗ್ರಾಮದಲ್ಲಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚಾಗನೂರು ಗ್ರಾಮದ ನಿವಾಸಿ ಸಿ.ಜಯಲಕ್ಷ್ಮಿ ಹಾಗೂ ರಾಘವ ರೆಡ್ಡಿ ದಂಪತಿಗಳು ಮತ್ತು ಅವರ ಮಕ್ಕಳಾದ ಮಲ್ಲಿಕಾರ್ಜುನ ರೆಡ್ಡಿ, ಶ್ರೀನಿವಾಸ್ ರೆಡ್ಡಿಯವರು ಸೇರಿ ಮಕ್ಕಳ ಶಿಕ್ಷಣಕ್ಕಾಗಿ ಶಾಲಾ ಕಟ್ಟಡಕ್ಕೆ ಒಂದುವರೆ ಎಕ್ಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಇದರ ಹಿನ್ನೆಲೆಯಲ್ಲಿ ಚಾಗನೂರು ಗ್ರಾಮದ ಹಿರಿಯ ಮುಖಂಡರಾದ ಕರಡಿ ತಿಪ್ಪಯ್ಯ ಮತ್ತು ಅವರ ಮಕ್ಕಳು ಸೇರಿ ಸಿ.ಜಯಲಕ್ಷ್ಮಿ, ರಾಘವ ರೆಡ್ಡಿ ದಂಪತಿಗಳವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅಭಿನಂದಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಚಿತವಾಗಿ ಏನೇಕೊಡಬೇಕಾದರೆ ಇನ್ನೊಬ್ಬರಿಂದ ಲಾಭ ಬಯಸುವುದನ್ನು ಆಲೋಚಿಸಿ ಕೊಡುತ್ತಾರೆ. ಅಂತಾದರಲ್ಲಿ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು, ಮಕ್ಕಳು ಒಳ್ಳೆ ವಿದ್ಯಾವಂತರಾಗಿ ಊರಿಗೆ, ದೇಶಕ್ಕೆ ಒಳ್ಳೆ ಹೆಸರು ತರಬೇಕೆಂಬ ಕಲ್ಪನೆಯೊಂದಿಗೆ ಗ್ರಾಮಕ್ಕೆ ಉಚಿತವಾಗಿ ಅದೂ ದಾನವಾಗಿ ಚಾಗನೂರು ಗ್ರಾಮದ ರಾಘವ ರೆಡ್ಡಿ ಕುಟುಂಬದವರು ಶಾಲಾ ಕಟ್ಟಡಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಆದ್ದರಿಂದ ಗ್ರಾಮದಲ್ಲಿ ಇಡೀ ಗ್ರಾಮಸ್ಥರು ಸೇರಿ ನೂತನ ಕಟ್ಟಡವನ್ನು ಉದ್ಘಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊನೆಯಲ್ಲಿ ಕರಡಿ ತಿಪ್ಪಯ್ಯ ಮತ್ತು ಅವರ ಮಕ್ಕಳು ಸೇರಿ ಸಿ.ಜಯಲಕ್ಷ್ಮಿ ರಾಘವ ರೆಡ್ಡಿ ಕುಟುಂಬದವರಿಗೆ ಸಮಾಜ ಸೇವೆ ಶಕ್ತಿಯನ್ನು ಇನ್ನು ಎತ್ತರಕ್ಕೆ ಬೆಳೆದು ನೂರಾರು ಜಾರಿಗೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.

8th August 2025
ಬಳ್ಳಾರಿ.ಆ.07: ನಗರದ ಸಾಹಿತಿ ಸಿದ್ಧರಾಮ ಕಲ್ಮಠ ಇವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಾಕ್ಷರಾದ ಡಾ. ಸಿ ಸೊಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಸ್ಕೃತಿಗಳ ಅಭಿಮಾನಿಗಳಾದ ನೀವು ದಯವಿಟ್ಟು ಈ ಹುದ್ದೆಯನ್ನು ಒಪ್ಪಿಕೊಂಡು ಬಳ್ಳಾರಿ ಜಿಲ್ಲಾ ಚಟುವಟಿಕೆಗಳಿಗೆ ಹೊಸ ಚಾಲನೆ ನೀಡಬೇಕೆಂದು ನೂತನವಾಗಿ ನೇಮಕಗೊಂಡ ಸಿದ್ಧರಾಮ ಕಲ್ಮಠ ಅವರಿಗೆ ಸೂಚಿಸಿದರು.
ಸಿದ್ಧರಾಮ ಕಲ್ಮಠ ಅವರ ಪರಿಚಯ :-ಸಿದ್ಧರಾಮ ಕಲ್ಮಠ ಅವರು ತಾಯಿಯ ತವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ರೌಡಕುಂದದಲ್ಲಿ ಜನಿಸಿದರು. ತಂದೆ ದಿ. ಕೆ.ಎಂ. ಮುಪ್ಪಿನಯ್ಯ ತಾಯಿ ಕೆ.ಎಂ.ಶಶಿಕಲಾ. ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸಾಹಿತ್ಯ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದು, ಮೈಸೂರು ವಿ.ವಿ.ಯಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಂಘಟನೆಯ ನಂಟನ್ನು ಹೊಂದಿರುವ ಇವರು ಪ್ರಜ್ಞೆ ಪ್ರತಿಷ್ಠಾನದ ಅಧ್ಯಕ್ಷರಾಗಿ, ಬೆಂಗಳೂರಿನ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ, ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬಳ್ಳಾರಿಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗಾಗಲೇ ಸಮ್ಮಿಲನ, ಸತ್ತ ಪ್ರೀತಿಯ ಅರಸುತ್ತ, ಬಿದಿರ ಗಾನ ಎಂಬ ಕವನ ಸಂಕಲನಗಳನ್ನು ರಂಗಾಂತರಂಗ (ವ್ಯಕ್ತಿಚಿತ್ರಣ), ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ (ಕರ್ನಾಟಕ ಏಕೀಕರಣದ ಏಕೈಕ ಬಲಿದಾನ), ಗಡಿನಾಡ ದೀಪಗಳು (ಸಂಪಾದನೆ), ಚರಿತ್ರೆಯ ಜಾಡಿನಲ್ಲಿ (ಗೌರವ ಸಂಪಾದನೆ). ಇವರ ಉರಿಯ ಬೆಳಕು ಕತೆಯು 'ಮೊಹರಂ ಕಡೆಯ ದಿನ' ಹೆಸರಿನಲ್ಲಿ ನಾಟಕವಾಗಿ ರೂಪಾಂತರಗೊಂಡಿದೆ.
ಅನೇಕ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೆ, ನಾಡು ನುಡಿ ಚಿಂತನೆಯ ನೂರಾರು ಉಪನ್ಯಾಸಗಳನ್ನು ನೀಡಿರುವರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಡಾ.ಎಸ್.ಕೆ. ಕರೀಂ ಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿ, ಕಲಾಸಂಗಮ ಸಾಂಸ್ಕೃತಿಕ ಸಂಸ್ಥೆಯು ಕನ್ನಡಾಚಾರ್ ಗೌರವ ಪುರಸ್ಕಾರ, ಮಯೂರ ಕಲಾ ಸಂಘದ ಮಕಸಂ ಗೌರವ ಪುರಸ್ಕಾರ, ೨೦೧೭ ಹಂಪಿ ಉತ್ಸವದ ಯುವ ಕವಿಗೋಷ್ಠಿಯ ಅಧ್ಯಕ್ಷತೆ ಹೀಗೆ ನಾಡಿನ ಅನೇಕ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸನ್ಮಾನಿಸಿವೆ.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ ಎಮ್ ವೀರೇಶ್ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಸೋಮಶೇಖರ್, ಗಾಂಜಿ ಸೇರಿದಂತೆ ಇತರರು ಇದ್ದರು.