
9th July 2025
ಬಳ್ಳಾರಿ ಜುಲೈ 07 : ಇಂದಿನ ಮಾಧ್ಯಮಗಳು ಊಹಾಪೋಹದ ಕಪೋಲ ಕಲ್ಪಿತವಾದ ಸುದ್ದಿಗಳನ್ನು ಬಿತ್ತರಿಸುತ್ತಿವೆ ಇದು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾದುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಬೇಸರವನ್ನು ವ್ಯಕ್ತಪಡಿಸಿದರು.
ಅವರು ಇಂದು ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿಸಿ ಕಚೇರಿಯ ಆವರಣದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ , ತಮ್ಮ ಮಾಧ್ಯಮಗಳಲ್ಲಿ ನಿಖರವಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ಅನುಕೂಲವಾಗಬೇಕೆ ವಿನಹ ಸಮಾಜದಲ್ಲಿ ಕಲಹಗಳನ್ನು ಸೃಷ್ಟಿಸುವಂತೆ ಇರಬಾರದು ನಿಖರವಾದ ಮತ್ತು ಸತ್ಯದಿಂದ ಕೂಡಿದ ವರದಿಗಳು ನಿಮಗೆ ಮತ್ತು ನಿಮ್ಮ ಪತ್ರಿಕೆಗೆ ಹೆಸರು ತಂದು ಕೊಡಲಿವೆ ಕಾರಣ ವರದಿಗಾರರು ತಾವು ಮಾಡಲಿರುವ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಬಿತ್ತರಿಸಬೇಕು ಎಂದು ವರದಿಗಾರರಿಗೆ ಕಿವಿಮಾತು ಹೇಳಿದರು.
ಮುಖ್ಯಮಂತ್ರಿಗಳು ಈಗಾಗಲೇ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ ಜೊತೆಗೆ ಮುಂದಿನ ದಿನಗಳಲ್ಲಿ ನಿವೇಶನವನ್ನು ಸಹ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾನಿಪ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಬಳ್ಳಾರಿ ಜಿಲ್ಲಾ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ , ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಶೋಭಾರಾಣಿ ವಿ ಜೆ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ಇತರರು ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಕನಸೋಗಿ ವರದಿಗಾರಿಕೆಯ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು. ಮತ್ತು ಪತ್ರಿಕಾ ದಿನಾಚರಣೆ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜಯಿಯಾದ ಕುರುಗೋಡು ಬುಲ್ಸ್ ತಂಡಕ್ಕೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ ವೀರಭದ್ರಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಡಾಕ್ ಸಮಿತಿ ಸದಸ್ಯರುಗಳು ಸಂಘದ ಹಾಲಿ ಮಾಜಿ ಪದಾಧಿಕಾರಿಗಳು ಮತ್ತು ಸದಸ್ಯರಿದ್ದರು.
9th July 2025
ಬಳ್ಳಾರಿ ಜುಲೈ 07. ಹಾಕಿ ಬಳ್ಳಾರಿ ಅಸೋಸಿಯೇಷನ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಪುರುಷರ ಯು 16 ಟೂರ್ನಮೆಂಟ್ 02.07.2025 ರಂದು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭ ಮಾಡಲಾಯಿತು. ದಿನಾಂಕ: 06.07.2025 ಭಾನುವಾರ ಸಂಜೆ 4:00ಗೆ ಹಾಕಿ ಬೆಂಗಳೂರು ಹಾಗೂ ಹಾಕಿ ಬಳ್ಳಾರಿ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಾಕಿ ಬೆಂಗಳೂರು 2-1 ಗೋಲುಗಲು ಸಾಧಿಸಿ ಫೈನಲ್ ಕಪ್ಅನ್ನು ಗೆದ್ದಿದೆ.
ಹಾಕಿ ಬೆಂಗಳೂರು ತಂಡದಿಂದ ಲೆನ್ನನ್ 1 ಗೋಲು ಹಾಗೂ ಮೋಹನ್ ಬಿ.ಪಿ. 1 ಗೋಲು ಸಾಧಿಸಿದ್ದಾರೆ. ಹಾಕಿ ಬಳ್ಳಾರಿ ತಂಡದಿಂದ ಬಾಲ ಗಣೇಶ್ 1 ಗೋಲ್ ಮಾಡಿದ್ದಾರೆ. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ, ಹಾಕಿ ಧಾರವಾಡ ತಂಡ 5-3 ಗೋಲುಗಳ ಅಂತರದಿಂದ ಹಾಕಿ ಕೊಡಗು ತಂಡವನ್ನು ಸೋಲಿಸಿದೆ.
ಈ ಟೂರ್ನಮೆಂಟ್ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ಎಲ್ಲಾ ತಂಡದ ಕ್ರೀಡಾಪಟುಗಳು ಹಾಕಿ ಬಳ್ಳಾರಿ ಅಸೋಸಿಯೇಷನ್ ನೀಡಿರುವ ಕ್ರೀಡಾಂಗಣ ವ್ಯವಸ್ಥೆ, ಊಟದ ವ್ಯವಸ್ಥೆ, ಹಾಗೂ ವಸತಿ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಹಾಕಿ ಬಳ್ಳಾರಿ ಅಸೋಸಿಯೇಷನ್ ಅಧ್ಯಕ್ಷರಾದ ಸಯ್ಯದ್ ಸೈಫುಲ್ಲಾ ಅವರು ಹಾಗೂ ಪಂದ್ಯದ ಕೋಚ್ ಶ್ರೀಧರ್ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಟೂರ್ನಮೆಂಟ್ ಗಳನ್ನು ನಡೆಸಿ ಹಾಕಿ ಬಳ್ಳಾರಿ ತಂಡದಿಂದ ಉತ್ತಮ ಆಟಗಾರರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳಾಗಿ ಮಾಡುವುದಾಗಿ ಭರವಸೆ ನೀಡಿದರು.
5th July 2025
ಬಳ್ಳಾರಿ. ಜುಲೈ 04 ; ನಗರದ ತಾಳೂರು ರಸ್ತೆಯ ಆಟದ ಮೈದಾನದಲ್ಲಿ ಜುಲೈ 1 2 3 ದಿನಾಂಕದಂದು ನಡೆದ ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಹಾಗೂ ಸ್ಟುಡಿಯೋ ಮಾಲೀಕರ ಸಂಘದವತಿಯಿಂದ ನಡೆದ 11ನೇ ವರ್ಷದ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು ಈ ಪಂದ್ಯದಲ್ಲಿ ವಿಜಯಶಾಲಿಯಾದ 23 ಲೆವೆನ್ ಗೆ ಬಹುಮಾನವನ್ನು ನೀಡಿ ಭಾರತೀಯ ಜನತಾ ಪಕ್ಷದ ನಾಯಕಿ ಲಕ್ಷ್ಮಿ ಅರುಣ ಮಾತನಾಡಿದರು.
ಮೂರು ದಿನಗಳ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ 2-3 ಲೆವೆನ್ ತಂಡ ಹಾಗೂ ರಾಜ ಲೆವೆನ್ ತಂಡ ಮುಖಾಮುಖಿಯಾಗಿ ಪಂದ್ಯ ಆಡಿದರು.
ಇದರಲ್ಲಿ 2 -3ಲೆವೆನ್ ತಂಡವು 10 ಓವರ್ ಮುಕ್ತಾಯಕ್ಕೆ 85ಗಳನ್ನು ರಾಜ ಲೆವೆನ್ ತಂಡಕ್ಕೆ ಗುರಿಯಾಗಿ ನೀಡಿದ್ದರು ಆದರೆ ರಾಜಾ ಲೆವೆನ್ ಗುರಿಯನ್ನು ತಲುಪಲಾಗದೆ ಸೋಲುಪ್ಪಿಕೊಂಡರು. ಛಾಯಾಗ್ರಾಹಕ ದೂದ್ ನೇತೃತ್ವದ ತಂಡ ಟು ತ್ರೀ ಲೆವೆನ್ ತಂಡವು ಜಯಶಾಲಿಯಾಗಿ ಬಹುಮಾನವನ್ನು ಪಡೆದಿರುತ್ತಾರೆ.
ಈ ಕಾರ್ಯಕ್ರಮಕ್ಕೆ ನಗರದ ಬಿಜೆಪಿ ಮುಖಂಡರಾದ ಗಾಲಿ ಲಕ್ಷ್ಮಿ ಅರುಣ ಅವರು ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಿದರು.
ನಂತರ ಮಾತನಾಡಿದ ಲಕ್ಷ್ಮಿ ಅರುಣ, ಪ್ರತಿಯೊಬ್ಬ ಛಾಯಾಗ್ರಾಕನು ಪ್ರತಿದಿನ ಯಾವುದಾದರೂ ಒಂದು ಆಟದ ಚಟುವಟಿಕೆಯಲ್ಲಿ ಭಾಗಿಯಾಗಲೇಬೇಕು ಅವರ ಆರೋಗ್ಯ ಬಗ್ಗೆ ಒಳ್ಳೆ ಕಾಳಜಿ ಇಟ್ಟುಕೊಳ್ಳಬೇಕು ಕ್ರೀಡೆಗಳು ದೇಹವನ್ನು ಸದೃಢಗೊಳಿಸಿ ಉತ್ತಮ ಆರೋಗ್ಯ ನೀಡುತ್ತವೆ ಎಂದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಚಂದ್ರಮೋಹನ್ ನಾಡಗೌಡ,ಮತ್ತು ಕೆ ಪಿ ಎ ನಿರ್ದೇಶಕರಾದ ವೀರೇಶ್, ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಬುಡಾ ಮಾಜಿ ಅಧ್ಯಕ್ಷರಾದ ದಮ್ಮೂರ್ ಶೇಖರ್, ಹಾಗೂ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರನಾಥ್ ರೆಡ್ಡಿ, ಜಿಲ್ಲಾ ಖಜಾಂಚಿಯಾದ ಸುಭಾನ್, ಜಿಲ್ಲಾ ಉಪಾಧ್ಯಕ್ಷ ವೀರೇಶ್ ನಾಗಳ್ಳಿ, ತಾಲೂಕು ಉಪಾಧ್ಯಕ್ಷರಾದ ಖಾದರ್, ತಾಲೂಕು ಗೌರವ ಅಧ್ಯಕ್ಷ ಶೇಕ್ ಭಾಷಾ, ಮತ್ತು ಲಕ್ಷ್ಮಿ ರೆಡ್ಡಿ , ಕಾರ್ಯದರ್ಶಿ ಚಂದ್ ಭಾಷಾ ಖಜಾಂಚಿ ಫಿರೋಜ್ , ಸದಸ್ಯರಾದ ದುರ್ಗಣ್ಣ, ತಾಯಣ್ಣ, ಮಲ್ಲಿ, ಸುಲ್ತಾನ್, ದುರ್ಗೇಶ್, ಈ ಕಾರ್ಯಕ್ರಮದ ಆಯೋಜಿಕರಾದ ಚಂದ್ ಭಾಷಾ ಅಬ್ಬೆ ಬಸವ ಮೂಕಾ ದಾದು ಹಾಗೂ ರಾಯಲ್ ಕಲರ್ ಲ್ಯಾಬ್ ಮಾಲೀಕರಾದ ದಾದು, ಪಿ ಆರ್ ಕೆ ಮೂವ್ಮೆಂಟ್ಸ್ ಮಾಲೀಕರು ಮತ್ತು ಲಲಿತ ಫ್ರೆಂಡ್ಸ್ ಮಾಲೀಕರು ಹಾಗೂ ವೃತ್ತಿನಿರತ ಛಾಯಾಗ್ರಾಹಕರು ಸ್ಥಳೀಯರು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
29th June 2025
ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ
ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ವೀ.ವಿ ಸಂಘದ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ಅಡಾಕ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಕ್ರೀಡಾ ಚಟುವಟಿಕೆಯಲ್ಲೂ ತೊಡಗುವುದು ಸ್ಪೂರ್ತಿದಾಯಕ ವಿಷಯ, ನೀವೆಲ್ಲರೂ ಪಂದ್ಯಾವಳಿ ಆಯೋಜಿಸಿದ್ದು ಸಂತೋಷದ ವಿಷಯ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಒಂದು ತಂಡ-ಮಾಧ್ಯಮ ಮಿತ್ರರ ಒಂದು ತಂಡ ರಚಿಸಿ ನಾವು ನೀವು ಕ್ರಿಕೆಟ್ ಆಡೋಣ ಎಂದರು.
ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 1 ಲಕ್ಷ ರೂ.ಗಳು, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ.ಗಳನ್ನು ವೈಯುಕ್ತಿಕವಾಗಿ ಬಹುಮಾನ ನೀಡುವುದಾಗಿ ಘೋಷಿಸಿದ ಶಾಸಕ ನಾರಾ ಭರತ್ ರೆಡ್ಡಿ, ಕಾನಿಪ ಪತ್ರಕರ್ತರ ಶ್ರಯೋಭಿವೃದ್ಧಿ ನಿಧಿಗೆ ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಕಾನಿಪ ಅಡಾಕ್ ಸಮಿತಿಯ ವೀರಭದ್ರಗೌಡ, ಮೋಕ ಮಲ್ಲಯ್ಯ, ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್ ಇದ್ದರು. ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.