
29th July 2025
ಬಳ್ಳಾರಿ ಜುಲೈ 26: ನಗರದ ಹರಿಚಂದ್ರ ಘಾಟ್ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗದವರ ಮಾರಾಮಾರಿಯಿಂದಾಗಿ ವಾಲ್ಮೀಕಿ ಜನಾಂಗದ ಹೆಂಗಸರು ಮತ್ತು ಗಂಡಸರಿಗೆ ದೈಹಿಕ ಗಾಯಗಳಾಗಿ ಬಿಎಮ್ಆರ್ಸಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಎಂಎಲ್ಸಿ ಮಾಡಿಸಿದ್ದರು ಸಹ ಗ್ರಾಮೀಣ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸದೆ ಕಳೆದ ಮೂರು ದಿನಗಳಿಂದ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದರು.
ಮನೆ ಮುಂದಿನ ರಸ್ತೆಯಲ್ಲಿ
ದ್ವಿಚಕ್ರ ವಾಹನವನ್ನು ಓಡಿಸುವ ಘಟನೆ ಯಿಂದ ಆರಂಭವಾದ ಜಗಳ ಮಾರ ಮಾರಿಗೆ ತಿರುಗಿ ದ್ವಿಚಕ್ರ ವಾಹನ ಸವಾರರದ ರಾಮ್ ಬಾಬು ಮತ್ತು ಉಮೇಶ್ ಮತ್ತು ಇತರ 15 -20 ಜನರು ನಮ್ಮ ಮನೆಗೆ ಬಂದು ಹೆಂಗಸರು ಗಂಡಸರು ಎನ್ನದಂತೆ ಬಡಿಗೆ ರಾಡುಗಳಿಂದ ಹಲ್ಲೆ ಮಾಡಿ, ಅವಾಚ್ಚ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಘಟನೆಯಲ್ಲಿ ಗಾಯಗೊಂಡ ನಾವುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇವೆ ಮತ್ತು ನಮ್ಮ ಕುಟುಂಬದ ಇತರ ಸದಸ್ಯರು ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಘಟನೆ ಕುರಿತು ಈಗಾಗಲೇ ಎಂಎಲ್ಸಿ ಆಗಿರುತ್ತದೆ ಎಫ್ಐಆರ್ ದಾಖಲಿಸುವಂತೆ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಕೇಳಿಕೊಂಡಾಗ ಕಳೆದ ಮೂರು ನಾಲ್ಕು ದಿನಗಳಿಂದ ಅವರು ನಮ್ಮನ್ನು ಠಾಣೆಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದ ಅವರು ಸೂರಿ ಅಂಜಿ ವೆಂಕಟೇಶ್ ರಾಮ್ ಬಾಬು ಉಮೇಶ್ ಮತ್ತು ಇತರರ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ರವಿಕುಮಾರ್ ದೂರುದಾರರನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಎಂಎಲ್ಸಿ ಆಗಿದೆ ಮುಂದುವರೆದು ನಾವು ಎಫ್ ಐ ಆರ್ ಮಾಡೇ ಮಾಡುತ್ತೇವೆ ಗಾಯಾಳು ಯಾರಾದರೂ ಠಾಣೆಗೆ ಬಂದು ದೂರು ನೀಡಿ ತಕ್ಷಣವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದ ರಾಶಿ, ಪ್ರಧಾನ ಕಾರ್ಯದರ್ಶಿ ಎನ್ ಸತ್ಯನಾರಾಯಣ, ವಾಲ್ಮೀಕಿ ಜನಾಂಗದ ಮುಖಂಡರುಗಳಾದ ವಿಕೆ ಬಸಪ್ಪ, ವಕೀಲರಾದ ಬಿ ಜಯಾರಾಮ್, ಬಿ ರುದ್ರಪ್ಪ, ಎರಗುಡಿ ಮುದಿಮಲ್ಲಯ್ಯ, ಹಗರಿ ಜನಾರ್ದನ, ಮಿಂಚೇರಿ ರಾಮಾಂಜನಿ, ಕಾಯಿ ಗಡ್ಡೆ ಬಸವರಾಜ, ದುರ್ಗಪ್ಪ, ಬೆಣಕಲ್ ಸುರೇಶ್ ಸೇರಿದಂತೆ ಹಲವಾರು ವಾಲ್ಮೀಕಿ ಮುಖಂಡರಿದ್ದರು.
29th July 2025
ಹೈದ್ರಾಬಾದ,ಜು.28-ಹೈದ್ರಾಬಾದದ ಪ್ರಗತಿನಗರ ಹಿರಿಯ ನಾಗರಿಕರ ಸಂಘದ ಚುನಾವಣೆಯು ಆಗಸ್ಟ್ 5ರಂದು ಮಂಗಳವಾರ ಬೆಳಗಿನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಅಂದು ಸಂಜೆ 5 ಗಂಟೆಯವರೆಗೆ ಫಲಿತಾಂಶ ಪ್ರಕಟಿಸಲಾಗುವುದು.
ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಜನರಲ್ ಸೆಕ್ರೆಟರಿ, ಜಾಯಿಂಟ್ ಸೆಕ್ರೆಟರಿ, ಟ್ರೆಜರರ್, ಮತ್ತು ನಾಲ್ಕು ಸದಸ್ಯರ ಆಯ್ಕೆಗಾಗಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜುಲೈ 30 ರಿಂದ ಆಗಸ್ಟ್ 2 ರವರೆಗೆ ಬೆಳಗಿನ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ದೊಂದಿಗೆ ಓಟರ್ ಮತ್ತು ಆಧಾರ ಕಾರ್ಡ್ ಪ್ರತಿ ಸಲ್ಲಿಸುವುದು ಕಡ್ಡಾಯವಾಗಿದೆ.
ಆಗಸ್ಟ್ 3 ರಂದು ಸಂಜೆ 4 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ಕೈಗೊಂಡು, ಅಂದು ಸಂಜೆ 5 ಗಂಟೆಗೇ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು.ಸಂಘದ ಈಗಿನ ಕಾರ್ಯಕಾರಿ ಸಮಿತಿಯ ಅವಧಿಯು ಜುಲೈ 27 ರಂದು ಕೊನೆಗೊಂಡ ಪ್ರಯುಕ್ತ ಈ ಚುನಾವಣೆ ಘೋಷಿಸಲಾಗಿದೆ ಎಂದು ಚುನಾವಣಾ ಸಮಿತಿ ಸದಸ್ಯರಾದ ಜಿ.ಕಾಮೇಶ್ವರರಾವ, ಪಿ.ವೆಂಕಟೇಶ್ವರಲುಗಾರು,ಪಿ.ವಿ.ಸೀತಾರಾಮರಾವಗಾರು ಮತ್ತು ಕೆ.ಹರನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
29th July 2025
ಬಳ್ಳಾರಿ ಜುಲೈ 29. ವಿಶ್ವ ಹಿಂದೂ ಪರಿಷದ್ ಲಿಂಗರಾಜಪ್ಪ ಅಪ್ಪಜಿ. ಉತ್ತರ ಪ್ರಾಂತ ಅಧ್ಯಕ್ಷರು, ಶ್ರೀಮತಿ ವಿಜಯಲಕ್ಷ್ಮಿ ಹಿರೇಮರ್.ಪ್ರಾಂತ ಉಪಾಧ್ಯಕ್ಷರು, ವಿನಾಯಕ ತಲೆಗೇರಿಜಿ, ಉತ್ತರ ಪ್ರಾಂತ ಸಹಕಾರ್ಯದರ್ಶಿ, ಕೆ.ಅಶೋಕ್ ಜಿ, ಬಳ್ಳಾರಿ ವಿಭಾಗ ಕಾರ್ಯದರ್ಶಿಗಳು ಈ ನಾಲ್ವರ ಉಪಸ್ಥಿತಿಯಲ್ಲಿ, ಪ್ರಾಂತದ ಟೋಳಿಯ ಅನುಮತಿಯ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾ ಅಧ್ಯಕ್ಷರನ್ನು ಪೋಲಪ್ಯಾರಡೈಸ್ ಹೋಟೆಲ್ ನ ಡೈಮಂಡ್ ಹಾಲ್ ನಲ್ಲಿ ದಿನಾಂಕ 21.07.2025 ರಂದು ಸೋಮವಾರ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರಾದ ಲಿಂಗರಾಜಪ್ಪಾಜಿರವರು ವಿಶ್ವ ಹಿಂದೂ ಪರಿಷತ್‌ನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ ಜಿ ರವರನ್ನು ಘೋಷಣೆ ಮಾಡಿರುತ್ತಾರೆ.
21st July 2025
ಬಳ್ಳಾರಿ ಜುಲೈ 20. ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಕೆ ಆರ್ ಎಸ್ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮರಾಜು ಫೌಂಡೇಶನ್ ಮತ್ತು ಗೋಪಿ ಬ್ಲಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ ಎಂದು ಶ್ರೀ ರಾಮರಾಜು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀರಾಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಮಾತನಾಡಿದ ಶ್ರೀ ರಾಮರಾಜು, ನಮ್ಮ ಫೌಂಡೇಶನ್ ವತಿಯಿಂದ ಸತತ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತೇವೆ, ಕಳೆದ ವರ್ಷ ಸುಮಾರು 250ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದರು, ಈ ಬಾರಿ 500 ಜನಕ್ಕೂ ಹೆಚ್ಚು ಜನರು ರಕ್ತ ನೀಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಶಿಬಿರದಲ್ಲಿ ರಕ್ತದಾನ ಮಾಡಿದವರೆಲ್ಲರಿಗೂ ಪ್ರಮಾಣ ಪತ್ರದ ಜೊತೆ ತಮ್ಮ ಮತ್ತು ತಮ್ಮ ಕುಟುಂಬದ ರಕ್ಷಣೆಗಾಗಿ ಒಂದು ಹೆಲ್ಮೆಟ್ ಅನ್ನು ನೀಡಿ ಸಮಾಜಕ್ಕೆ ನನ್ನ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಎಂದರು.
ಈ ರಕ್ತದಾನ ಶಿಬಿರಕ್ಕೆ ಮಾಜಿ ಸಚಿವರಾದ ಬಿ ನಾಗೇಂದ್ರ ಭೇಟಿ ನೀಡಿ ರಕ್ತ ದಾನಿಗಳನ್ನು ವಿಚಾರಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟು ನಾವು ಮತ್ತೊಂದು ಜೀವವನ್ನು ಉಳಿಸುವುದಕ್ಕಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ಪ್ರೇರೇಪಿಸಿದರು. ಇದರಲ್ಲಿ ಕಾಂಗ್ರೆಸ್ ಮುಖಂಡರರಾದ ಬೋಯಪಾಟಿ ವಿಷ್ಣುವರ್ಧನ್ ಅವರು ಕೂಡಾ ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು, ವಕೀಲರು, ರಾಜಕಾರಣಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ವೈದ್ಯರು ಮತ್ತು ನರ್ಸ್ ಗಳು ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿ ಯಾವುದೇ ಸಮಸ್ಯೆ ಮತ್ತು ತೊಂದರೆ ಇಲ್ಲದಂತೆ ಶಿಬಿರವನ್ನು ನಡೆಸಲಾಯಿತು.
18th July 2025
ಬಳ್ಳಾರಿ ಜು. 18. ಬಳ್ಳಾರಿಯ ಲೇಖಕ ಸಿದ್ದರಾಮ ಕಲ್ಮಠ ರಚಿಸಿದ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮವು ಜುಲೈ 22 ರಂದು ಸಂಜೆ 5:30ಕ್ಕೆ ಹೊಸ ಬಸ್ ನಿಲ್ದಾಣ ಎದುರಿಗೆ ಹೀರದ ಸೂಗಮ್ಮ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಕಾರ್ಯಕ್ರಮ ಉದ್ಘಾಟಿಸುವರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಲಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ನಾಟಕ ಕೃತಿ ಬಿಡುಗಡೆ ಮಾಡುವರು. ಡಾ. ಪಿ. ದಿವಾಕರ ನಾರಾಯಣ ಕೃತಿ ಕುರಿತು ಮಾತಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಿಸ್ವಾಮಿ ಮಠದ ವಾಗೀಶ ಶರ್ಮ ಹೀರದ ಸೂಗಮ್ಮ ಶಾಲೆಯ ಅಧ್ಯಕ್ಷ ಮೇಟಿ ಪಂಪನಗೌಡ, ಕುಡಿತಿನಿ ಸತ್ಸಂಗ ಆಶ್ರಮದ ಪಲ್ಲೇದ ಪಂಪಾಪತೆಪ್ಪ,ರಂಗ ತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮತ್ತು ನಿವೃತ್ತ ಅಭಿಯಂತರ ಕೇಣಿ ಬಸಪ್ಪ, ಶರಣ ಸಕ್ಕರೆ ಕರಡೀಶ ಸೌಹಾರ್ದ ಪ.ಸೌ. ಸಹಕಾರ ಸಂಘದ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಸಮಾಜಸೇವಕ ಜಿ. ಮಹಾಲಿಂಗಯ್ಯ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ,
ಭಾಗವಹಿಸಲಿದ್ದಾರೆ. ಜಾನಪದ ಗಾರುಡಿಗ ಯಲ್ಲನಗೌಡ ಶಂಕರ ಬಂಡೆ ಮತ್ತು ಜಡೇಶ್ ಎಮ್ಮಿಗನೂರು ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18th July 2025
ಬಳ್ಳಾರಿ ಜುಲೈ17. ಬಳ್ಳಾರಿ ನಗರದ ಆದಿ ದೇವತೆಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ 13 ಹುಂಡಿಗಳನ್ನು ಇಂದು ತೆರೆಯಲಾಯಿತು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಹನುಮಂತಪ್ಪ ತಿಳಿಸಿದ್ದಾರೆ.
ಇಂದು ಮುಂಜಾನೆ ಬಳ್ಳಾರಿ ಸಹಾಯಕ ಆಯುಕ್ತರು ಹಾಗೂ ದೇವಸ್ಥಾನದ ಆಡಳಿತ ಅಧಿಕಾರಿ ಪ್ರಮೋದ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಎಚ್ ಸವಿತಾ ಮತ್ತು ಗ್ರೇಡ್ ಟು ತಹಸಿಲ್ದಾರ್ ಅವರುಗಳ ಸಮ್ಮುಖದಲ್ಲಿ ಹುಂಡಿಯ ಬೀಗವನ್ನು ತೆರೆಯಲಾಯಿತು. ನಂತರ ಹುಂಡಿಯಲ್ಲಿ ಜಮೆಯಾಗಿದ್ದ ಹಣವನ್ನು ಎಣಿಸಲಾಗಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 67,86,179 ರೂಪಾಯಿಗಳಷ್ಟು ಹಣ ಸಂಗ್ರಹ ಗೊಂಡಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಹಣ ಎಣಿಕೆಯ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗಳು ಹೋಮ್ ಗಾರ್ಡ್ಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಹುಂಡಿಯ ಹಣವನ್ನು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
18th July 2025
ಬಳ್ಳಾರಿ ಜುಲೈ16. 9.ದಿನ ದಲ್ಲಿ 2,94,72,201/- ಕೋಟಿ ಗಳ ಕಾಮಗಾರಿಗಳಿಗೆ ಬಳ್ಳಾರಿ ಗ್ರಾಮೀಣ ಜೆಸ್ಕಾಂ ಇ. ಇ ರಂಗನಾಥ್ ಬಾಬು ಮಂಜೂರು ಮಾಡಿದ್ದು, 24.6.2025.ರಿಂದ 2.7.2025.ವರೆಗೆ 176 ಕಾಮಗಾರಿಗಳಿಗೆ ಲೈನ್ ಕ್ಲಿಯರ್ ಮಾಡಿದ್ದಾರೆ.
ಇದರಲ್ಲಿ ಗಂಗಾ ಕಲ್ಯಾಣಿ ಕಾಮಗಾರಿಗಳು ಹೊರತು ಪಡಸಿ ಇನ್ನು ಉಳಿದ ಕಾಮಗಾರಿಗಳಿಗೆ ಯಾವದೇ ಅನುಮತಿ ಕೊಡ ಬಾರದು ಎಂದು ಕಲಬುರ್ಗಿ ಜೆಸ್ಕಾಂ ನಿರ್ದೇಶಕರು ಆದೇಶ ಮಾಡಿದ್ದಾರೆ.
ತಕ್ಷಣವೇ ಟೆಕ್ನಿಕಲ್ ಅಧಿಕಾರಿಗಳು, ಬಳ್ಳಾರಿ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಹಲವಾರು ವರ್ಷ ಗಳು ದಿಂದ ಗ್ರಾಮೀಣ ಜೆಸ್ಕಾಂ ಇ.ಇ ಯಾಗಿ ಕೆಲಸ ಮಾಡಿ ಈಗಾಗಲೇ ಡಿಎಂಎಫ್ ಅನುದಾನದಲ್ಲಿ ಕೂಡ ಲೋಪ ದೋಷ ಆಗಿದ್ದು, ಕೂಡ ತಾಪಸಣೆ ಮಾಡಲು ಇಲಾಖೆ ಆದೇಶ ಮಾಡಲಾಗಿದೆ.
ಕೆಲ ದಿನಗಳ ಇಂದೇ ಬೇರೆ ಶಾಖೆ ಗೆ ಅಲ್ಲಿಯೇ ಪಕ್ಕದಲ್ಲಿ ವರ್ಗಾವಣೆ ಆಗಿದ್ದಾರೆ.
ಅದೇ ಸಮಯದಲ್ಲಿ 2.94.72.201/-ಕಾಮಗಾರಿ ಗಳು ರಂಗನಾಥ್ ಬಾಬು,ಹಣದ ಅಸೆ ದಿಂದ ಸೀಮಿತ ಗುತ್ತೆಗೆದಾರರಿಗೆ ಕಾಮಗಾರಿ ನೀಡಿದ್ದಾರೆ, ಇನ್ನು ಕೆಲ ಕಡೆ ಕಾಮಗಾರಿ ಆರಂಭ ಆಗದೇ ಲೇಬರ್ ಅವಾರ್ಡ್ ಹಾಕಿ ಸಾಮಗ್ರಿ ಡ್ರಾ ಮಾಡಿ ಇಲಾಖೆ ಗೆ ದ್ರೋಹ ಮಾಡುವ ನೀಚ ಕೆಲಸ ಮಾಡಿದ್ದಾರೆ ಎಂದು, ರಂಗನಾಥ್ ಬಾಬು ಅವರ ಮೇಲೆ ಇಲಾಖೆ ಗೆ ಮಾಹಿತಿ ಸಿಕ್ಕ ಹಿನ್ನಲೆ ಕಾಮಗಾರಿ ಗಳು ಗೆ ಅನುಮತಿ ರದ್ದು ಮಾಡಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು, ಯಲ್ಲಾ ಪರಿಶೀಲನೆ ಆಗಬೇಕು ಎಂದು ಅಷ್ಟು ವರೆಗೆ, ಯಾವದೇ ಬಿಲ್ ಮಾಡುವಂತೆ ಇಲ್ಲ ಎಂದು ಆದೇಶ ಮಾಡಿದ್ದಾರೆ.
ಈ ರೀತಿ ಕಾನೂನು ಉಲ್ಲಂಘನೆ ಮಾಡಿ ಕಾಮಗಾರಿ ಆದೇಶ ಮಾಡಿದ್ದ ಅಧಿಕಾರಿಗಳು ವಿರುದ್ಧ ಯಾವ ಕ್ರಮ ಆಗಲಿದೆ ಎಂದು ಕಾದು ನೋಡಬೇಕು ಆಗಿದೆ.
18th July 2025
ಬಳ್ಳಾರಿ, ಜು.16. ಬಳ್ಳಾರಿ ನಗರದ ಡಿಎಆರ್ ಆವರಣದಲ್ಲಿ ಬುಧವಾರ ಅಂದಾಜು 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಪೊಲೀಸರು ಹಗಲು ರಾತ್ರಿ ಎನ್ನದಂತೆ ಕರ್ತವ್ಯ ನಿರ್ವಹಿಸುತ್ತಾ ಸಾರ್ವಜನಿಕರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುತ್ತಾರೆ
ಅಂತಹ ಅಧಿಕಾರಿಗಳಿಗೆ ಅವರ ಕುಟುಂಬದ ನೆಮ್ಮದಿಗಾಗಿ ಮನೆಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಅಂದಾಜು 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ 36 ಪೊಲೀಸ್ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಪ್ರಯುಕ್ತ ಇಂದು ಭೂಮಿ ಪೂಜೆ ನೆರವೇರಿಸಿ ಪೋಲಿಸ್ ವಸತಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿಯ ಐಜಿಪಿ ವರ್ತಿಕಾ ಕಟಿಯಾರ್, ಎಸ್ಪಿ ಡಾ. ಶೋಭಾ ರಾಣಿ, ಎಎಸ್ಪಿ ರವಿಕುಮಾರ್, ಡಿಎಸ್ಪಿ ನಂದಾರೆಡ್ಡಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ಹಗರಿ ಗೋವಿಂದ ಸೇರಿದಂತೆ ಮತ್ತಿತರರು ಇದ್ದರು.
18th July 2025
ಬಳ್ಳಾರಿ ಜುಲೈ 15. ನೂತನ ಡಿಐಜಿಪಿಯಾಗಿ ವರ್ತಿಕಾ ಕಟಿಯಾರ್ ಇವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
30ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ರಾಜ್ಯ ಸರ್ಕಾರ 2010ನೇ ಬ್ಯಾಚಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಬಳ್ಳಾರಿ ಐಜಿಪಿಯಾಗಿ ವರ್ಗಾಯಿಸಿದೆ. ಈ ಹಿಂದೆ ಡಿ ಐ ಜಿ ಅಡಿಷನಲ್ ಕಮಾಂಡೆಂಟ್ ಆಫ್ ಹೋಮ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಮುಂದಿನ ಆದೇಶದವರೆಗೆ ಬಳ್ಳಾರಿ ವಲಯದ ಡಿಐಜಿಪಿಯಾಗಿ ವರ್ಗಾಯಿಸಲಾಗಿದೆ.
15th July 2025
ಬಳ್ಳಾರಿ ಜುಲೈ15.ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಸುಬ್ಬರಾವ್ ಕ್ಯಾಂಪ್ ನಲ್ಲಿ ನೆಲೆಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 4ನೇಯ ವರ್ಷದ ಜಾತ್ರ ಮಹೋತ್ಸವ ಇದೇ ತಿಂಗಳು ಜುಲೈ 22 ನೇಯ ಆಷಾಢ 4ನೇ ಮಂಗಳವಾರ ನಡೆಯಲಿದೆ.
ಭಕ್ತರು ಈ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡು ಯಲ್ಲಮ್ಮ ದೇವಿಯ ಕೃಪಗೆ ಪಾತ್ರರಾಗಬೇಕೆಂದು ದೇವಸ್ಥಾನದ ದೇವಿಯ ಆರಾಧಕರು ಶ್ರೀ ಸದ್ಗುರು ಜುಮಾರಿ ತಾತನವರು ತಿಳಿಸಿದ್ದಾರೆ.
ಜುಲೈ 21ರಂದು ಬೆಳಗ್ಗೆ ವಿಶೇಷ ಪೂಜೆ ಆನಂತರ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ 5:00ಗೆ ವಾದ್ಯ ವೈಭಗಳೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಜುಲೈ 22 ಆಷಾಢ ನಾಲ್ಕನೆಯ ಮಂಗಳವಾರ ಸಾಯಂಕಾಲ ಮಹಾ ರಥೋತ್ಸವ, ಕಳಸ, ಕುಂಭ ಮೆರವಣಿಗೆ ನಡೆಯಲಿದೆ .ನಂತರ ಲಂಕಾ ದಹನ, ಪಟಾಕಿ ಉತ್ಸವ ನಂತರ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ಪ್ರತಿ ಪೂಜೆಗಳು ಶ್ರೀ ಸದ್ಗುರು ಜುಮಾರಿ ತಾತನವರ ನೇತೃತ್ವದಲ್ಲಿ ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಈ ವರ್ಷ ವಿಶೇಷವಾಗಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ದೇವಿಯ ಜಾತ್ರಾ ಮಹೋತ್ಸವ ಸಂದರ್ಭವಾಗಿ ವಿವಿಧ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.