
29th June 2025
ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ
ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ವೀ.ವಿ ಸಂಘದ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ಅಡಾಕ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಕ್ರೀಡಾ ಚಟುವಟಿಕೆಯಲ್ಲೂ ತೊಡಗುವುದು ಸ್ಪೂರ್ತಿದಾಯಕ ವಿಷಯ, ನೀವೆಲ್ಲರೂ ಪಂದ್ಯಾವಳಿ ಆಯೋಜಿಸಿದ್ದು ಸಂತೋಷದ ವಿಷಯ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಒಂದು ತಂಡ-ಮಾಧ್ಯಮ ಮಿತ್ರರ ಒಂದು ತಂಡ ರಚಿಸಿ ನಾವು ನೀವು ಕ್ರಿಕೆಟ್ ಆಡೋಣ ಎಂದರು.
ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 1 ಲಕ್ಷ ರೂ.ಗಳು, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ.ಗಳನ್ನು ವೈಯುಕ್ತಿಕವಾಗಿ ಬಹುಮಾನ ನೀಡುವುದಾಗಿ ಘೋಷಿಸಿದ ಶಾಸಕ ನಾರಾ ಭರತ್ ರೆಡ್ಡಿ, ಕಾನಿಪ ಪತ್ರಕರ್ತರ ಶ್ರಯೋಭಿವೃದ್ಧಿ ನಿಧಿಗೆ ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಕಾನಿಪ ಅಡಾಕ್ ಸಮಿತಿಯ ವೀರಭದ್ರಗೌಡ, ಮೋಕ ಮಲ್ಲಯ್ಯ, ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್ ಇದ್ದರು. ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.
ಊಹಾಪೋಹದ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ : ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್
ಹಾಕಿ ಫೈನಲ್ ಪಂದ್ಯದಲ್ಲಿ ಹಾಕಿ ಬೆಂಗಳೂರು 2-1 ಗೋಲುಗಳು ಸಾಧಿಸಿ ಫೈನಲ್ ಕಪ್ಪನ್ನು ವಶಪಡಿಸಿಕೊಂಡಿದೆ