

3rd July 2025

ಬಳ್ಳಾರಿ:ಜು,02; ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಜಮೀನು ವಿಷಯಕ್ಕೆ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿ ನಿಂದಿಸಿದ್ದಾನೆ. ಘಟನೆ ಸಂಬಂಧ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಣ್ಣ ಎಂಬುವವರ ವಿರುದ್ಧ ಪೊಲೀಸರು ಎಫ್ಐಆರ್ ಮಾಡಿದ್ದಾರೆ. ದೇವಣ್ಣ ದಾಂಧಲೆ ಮಾಡುತ್ತಿರುವ ವಿಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ದೂರುದಾರರಾದ ರಾಮಾಂಜಿನೇಯಲು ಮತ್ತು ಜಾನಕಿರಾಮಯ್ಯ ಎಂಬುವರು ಭಾನುವಾರ ಬೆಳಿಗ್ಗೆ ತಮ್ಮ ಹೊಲಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ದೇವಣ್ಣನ ಕಡೆಯವರು ಜಾನಕಿರಾಮಯ್ಯ ಅವರ ಹೊಲಕ್ಕೆ ಹೋಗುವ ರಸ್ತೆಯನ್ನು ಟಿಲ್ಲರ್ನಿಂದ ನಾಶ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ದೇವಣ್ಣನು ರಾಮಾಂಜಿನೇಯಲುರವರ ಮನೆಗೆ ಕೊಡಲಿ ಹಿಡಿದು ನುಗ್ಗಿ ಗಲಾಟೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಈ ರೀತಿ ಮಚ್ಚು ಹಿಡಿದು ಗೂಂಡಾ ರೀತಿ ವರ್ತಿಸುವ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ