

3rd July 2025

ಬಳ್ಳಾರಿ ಜುಲೈ 03. ಕವಿ ಶ್ರೀನಿಧಿಯವರು ಮನೋನ್ಮನೀ ಕಾದಂಬರಿಯ ಮೂಲಕ ಪಟ್ಟ ಭದ್ರ ಹಿತಾಸಕ್ತಿಗಳ ದರ್ಪದ ವಿರುದ್ಧ ಅಮಾಯಕ ಮಹಿಳೆಯರು ನಡೆಸುವ ಛಲ ಬಿಡದ ಹೋರಾಟವನ್ನು ಗ್ರಾಮೀಣ ಸೊಗಡಿನ ಪ್ರೇಮ ಸಲ್ಲಾಪ ವನ್ನು ಆಸಕ್ತಿಕರವಾಗಿ ಹಿಡಿದಿಟ್ಟಿದ್ದಾರೆ.
ತನ್ನ ಇಚ್ಛೆಗಳ ವಿರುದ್ಧ ಕಟ್ಟಿದ ಸಂಕೋಲೆಗಳನ್ನು ಅಸಹಾಯಕವಾಗಿ ಎದುರಿಸಿದ ಮನೋನ್ಮನಿಯ ಕಥೆ ಎಂತವರಿಗೂ ಮನಕುಲುಕುವ ಶಕ್ತಿಹೊಂದಿದೆ ಎಂದು ಟಿ ಜಿ ವಿಠ್ಠಲ್ ಅಭಿಪ್ರಾಯ ಪಟ್ಟರು.
ನಗರದ ಗಾಂಧಿ ಭವನ ದಲ್ಲಿ ಮನೋನ್ಮನೀ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಸಾಹಿತ್ಯ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸಿವ ಕಾರ್ಯ ಮಾಡಬೇಕು, ಬದುಕಿಗೆ ದಾರಿ ದೀಪಾವಗಬೇಕು ಅದನ್ನು ಈ ಕಾದಂಬರಿ ಸಾಕಾರ ಗೊಳಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ದ ಅತಿಥಿಗಳಾಗಿ ಮಾತನಾಡಿದ ಸಾಹಿತಿ, ಬೆಂಗಳೂರಿನ ನಾ.ರಾ. ಜ್ಯೋತಿ ತರಂಗ ದಲ್ಲಿ ಬಂದ ಶ್ರೀನಿಧಿಯವರ ಈ ಧಾರಾವಾಹಿಯನ್ನು ಬಹಳಷ್ಟು ಮೆಚ್ಚಿ ಇದಕ್ಕೆ ನಾಟಕ ರೂಪ ಕೊಟ್ಟು, ತಮ್ಮ ಮನೆಗೆ ಇದೇ ಹೆಸರನ್ನು ಇಟ್ಟುಕೊಂಡಿದ್ದನ್ನು ಹೆಮ್ಮೆಯಿಂದ ಹಂಚಿಕೊಂಡರು. ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸ ಮಾತನಾಡಿದ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ಶ್ರೀ ಪಿ. ಚಿದಾನಂದ್ ರವರು
ಅಂಚೆ ಇಲಾಖೆಯ ದಕ್ಷ ಅಧಿಕಾರಿ ಯಾಗಿದ್ದುಕೊಂಡು ಸೃಜನಶೀಲ ಬರವಣಿಗೆ ಯ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸಹಾಯಕ ಅಂಚೆ ಅಧೀಕ್ಷಕ ಶ್ರೀನಿಧಿಯವರ ಆಸಕ್ತಿಯನ್ನು ಮೆಚ್ಚಿ, ಆಧುನಿಕ ಒತ್ತಡದ ಮತ್ತು ದೃಶ್ಯ ಮಧ್ಯಮಗಳ ಮಧ್ಯೆ ಪುಸ್ತಕ ಓದುವ ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮ ದಲ್ಲಿ ಕೇಂದ್ರ ಸಾಹಿತ್ಯ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳ್ ರವರನ್ನು, ಮನೋನ್ಮನೀ ಕಾದಂಬರಿಯ ಮುಖಪುಟದ ವಿನ್ಯಾಸಗೊಳಿಸಿದ ತಾಳಿಕೋಟೆಯ ಶಿವರಾಜ್ ತಳವಾರ್, ಪುಸ್ತಕ ವಿನ್ಯಾಸ ಗೊಳಿಸಿದ ಬಳ್ಳಾರಿಯ ಎಸ್ ಎಸ್ ಗ್ರಾಫಿಕ್ಸ್ ನ ಶಶಿಕುಮಾರ್ ಮತ್ತು ಕಾದಂಬರಿಕಾರ ಶ್ರೀನಿಧಿಯವರನ್ನು ಅಭಿಮಾನದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಾಗಂಭೃಣೀ ಪ್ರಕಾಶನದ ಲಾಂಛನವನ್ನು ಗಣ್ಯರು ಅನಾವರಣ ಗೊಳಿಸಿದರು.
ಕಾರ್ಯಕ್ರಮ ದಲ್ಲಿ ಕರ್ಚೇಡು ನಾಗಭೂಷಣ್ ಕೃತಿ ಬಗ್ಗೆ ಮಾತನಾಡಿದರು, ಶ್ರೀನಿಧಿ ಲಲಿತ ಕಲಸಂಸ್ಥೆ ಯ ಮಕ್ಕಳು ತರಂಗಂ ನೃತ್ಯ ಪ್ರದರ್ಶಿಸಿದರು, ರವಿಕುಮಾರ್ ಸ್ವಾಗತಿಸಿದರು, ಅಲ್ಲಾಸಾಬ್ ನಿರೂಪಿಸಿದರು ದೀಪಶ್ರೀ ಕರಣಂ ಪ್ರಸ್ತಾವಿಕ ವಾಗಿ ಮಾತನಾಡಿದರು ಮತ್ತು ವೀರೇಶ ವಂದಿಸಿದರು. ನಗರದ ಅಂಚೆ ಸಿಬ್ಬಂದಿ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಇನ್ನೂರಕ್ಕೂ ಅಧಿಕ ಸಾಹಿತ್ಯಾಸಕ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಮನೋನ್ಮನೀ ಕಾದಂಬರಿ ಪ್ರತಿಗಾಗಿ: ಸಂಖ್ಯೆಯನ್ನು ಸಂಪರ್ಕಿಸಬಹುದು.
9902049859
ಕಾದಂಬರಿ ಬಗ್ಗೆ..
ಮನೋನ್ಮನೀ ಸಂಪೂರ್ಣ ಕಾಲ್ಪನಿಕ ಕಥೆಯಾದರೂ, ಈ ಇತಿವೃತ್ತದಲ್ಲಿ ವರ್ಣಿತವಾದ ಘಟನಾವಳಿಗಳು ನಮ್ಮ ದೇಶದ ಯಾವುದೋ ಮೂಲೆಯಲ್ಲಿ ಯಾವುದೋ ಕಾಲಘಟ್ಟದಲ್ಲಿ ನಡೆದಿರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯಲು ಆಗುವುದಿಲ್ಲ. ನಗರವಧು ಒಬ್ಬಳು ಮೋಡಿಲಿಪಿಯಲ್ಲಿ ಬರೆಯಿಸಿಟ್ಟ ಓಲೆಗರಿಗಳಲ್ಲಿ ಅಡಗಿ ಕುಳಿತ ಈ ಕಥೆಯಲ್ಲಿ ಉಗ್ರ ಶೈವಪಂಥವಾದ ವೀರಮಾಹೇಶ್ವರರು ತಮ್ಮ ತಲೆಯನ್ನು ತರಿದು ತಮ್ಮ ಉಪಾಸ್ಯ ದೇವತೆಯ ಚರಣಗಳಲ್ಲಿ ಸಮರ್ಪಿಸುತ್ತಿದ್ದ ಗಂಡುಗತ್ತರಿ ಮೊನಚಾದ ಅಂಚು, ಬುಡದಲ್ಲಿ ಹಾವುಗಳು ವಾಸವಿರುವ, ಗಿಡದಗುಂಟ ಮುಳ್ಳು ಇರುವ ಕೇದಿಗೆಯ ಒಡಲಲ್ಲಿ ತುಂಬಿದ ಪರಿಮಳದ ಕಂಪು, ಮಹಾಸತಿಕಲ್ಲಿನ ಹಿಂದೆ ಮಾರಣಹೋಮಕ್ಕೆ ಈಡಾದ ಹೆಂಗಳ ನಿಟ್ಟುಸಿರು ಎಲ್ಲವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಥೆಯ ಮೊದಲಿನಲ್ಲಿ ನಿರೂಪಕ ಪಾತ್ರ ಹೇಳುವಂತೆ ನಾವು ಓದುವುದು history, his-story not her-story ಎಂಬಂತೆ ಇತಿಹಾಸದ ಪುಟದಲ್ಲಿ ಅಡಗಿಹೋದ ನೈಜ ಘಟನೆಗಳು ಹುಡುಕುತ್ತಾ, ಇತಿಹಾಸ ಪುಟವನ್ನು ಸೇರಿದ ಪ್ರಕ್ಷಿಪ್ತಗಳು ಎಲ್ಲವನ್ನೂ ಕಳಚುತ್ತಾ ನಿಜವಾಗಿ ನಡೆದಿರಬಹುದಾದ ಕಥೆಯನ್ನರಸುತ್ತಾ ಈ ಕಥಾನಕ ಸಾಗುತ್ತದೆ. ಸ್ವಪ್ರತಿಷ್ಠೆ, ಸ್ವಗರಿಮೆಯ ಗೀಳು, ವಾಡೆ ಊಳಿಗಮಾನ್ಯ ಸಂಸ್ಕೃತಿ, ನಗರವಧುವಿನ ಮನೆಯ ಗೆಜ್ಜೆ ಸದ್ದಿನ ಝೇಂಕಾರ, ವಾಡೇದ ಒಡೆಯರ ಹಣದ ಥೈಲಿಯ ನಾಣ್ಯಗಳ ಠೇಂಕಾರ, ತ್ಯಾಗ-ಬಲಿದಾನ, ಈರ್ಷ್ಯೆ, ಅಕ್ಕಸಗಳು, ರಕ್ಕಸತನಗಳು, ಹಲವು ವಿಷಯಾಂತರಗಳು, ಒಲ್ಲದ ಸಂಕರಗಳ ಮಧ್ಯೆ ತಣ್ಣಗಿನ ದನಿಯಲ್ಲಿ ಹಾಡುವ ಪ್ರೇಮಗೀತೆಯೇ ಮನೋನ್ಮನೀ ಕಾದಂಬರಿಯ ಆತ್ಮ.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ