
3rd July 2025
ಬಳ್ಳಾರಿ ಜುಲೈ 03. ಬಿಜೆಪಿಗರ ಬಣ್ಣ ಬಯಲಾಗಿದೆ, ಹೆಣ್ಣುಮಕ್ಕಳ ವಿಷಯದಲ್ಲಿ ಬಿಜೆಪಿ ನಿಲುವು ಏನು ಎಂಬುದು ಬಿಜೆಪಿ ಎಂ ಎಲ್ ಸಿ ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ಅತ್ಯಂತ ಹೇಯ ಭಾಷೆ ಬಳಸಿರುವುದು ಬಿಜೆಪಿಗರು ಹೆಣ್ಣುಮಕ್ಕಳ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ ನೀಡುತ್ತದೆ.
ಈ ರೀತಿ ಹೇಳಿಕೆ ನೀಡುವ ಮುನ್ನ ಆ ಅಧಿಕಾರಿ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಇವರಿಗೆ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಈ ಹಿಂದೆ ಕಲಬುರ್ಗಿ ಜಿಲ್ಲಾಧಿಕಾರಿ ಬಗ್ಗೆ ಸಹ ಇಂತಹುದ್ದೆ ಹೇಳಿಕೆ ನೀಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ರವಿಕುಮಾರ್ ಈ ಬಾರಿ ಶಾಲಿನಿ ರಜನೀಶ್ ಅವರ ಬಗ್ಗೆ ಹೇಳಿಕೆ ನೀಡಿ, ಅವರ ಘನತೆಗೆ ಧಕ್ಕೆ ತಂದಿದ್ದಾರೆ. ತಮ್ಮನ್ನು ತಾವೇ ಅತ್ಯಂತ ಸದ್ಗುಣಿ, ಸಂಭಾವಿತರು, ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳವ ಬಿಜೆಪಿಯ ಅಸಲು ಬಣ್ಣ ಏನೆಂಬುದನ್ನು ರವಿಕುಮಾರ್ ತೋರಿಸಿದ್ದಾರೆ.
ನಾರಿಯನ್ನು ಪೂಜಿಸಬೇಕು ಎಂದು ಹೊರ ಜಗತ್ತಿಗೆ ಸಾರುವ ಇವರು ಇಂದು ಒಬ್ಬ ಮಹಿಳಾ ಉನ್ನತ ಅಧಿಕಾರಿಗೆ ಕೀಳುಮಟ್ಟದ ಭಾಷೆ ಬಳಕೆ ಮಾಡಿದ್ದಾರೆ.
ರಾಜಕಾರಣದಲ್ಲಿ ಇರುವ ಇಂತಹ ನಾಯಕರು ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸರ್ಕಾರ ಸಹಿಸಬಾರದು. ಶಿಕ್ಷಣದಲ್ಲಿ ದೇಶಕ್ಕೇ ನಂ.1 ಎನ್ನಿಸಿಕೊಂಡಿರುವ ನಮ್ಮ ರಾಜ್ಯದ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ ರವಿಕುಮಾರ್ ಗೆ ತಕ್ಕ ಶಿಕ್ಷೆ ನೀಡಬೇಕು. ಬಿಜೆಪಿ ತಾವು ಅಂದುಕೊಂಡಂತೆ ಶಿಸ್ತಿನ ಪಕ್ಷ ಆಗಿದ್ದರೆ ತಕ್ಷಣ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು
ವೆಂಕಟೇಶ್ ಹೆಗಡೆ, ವಕೀಲರು
ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ,
ಬಳ್ಳಾರಿ ಇವರು ಆಗ್ರಹಿಸಿದ್ದಾರೆ.
*‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ನಾರಾ ಭರತ್ ರೆಡ್ಡಿ* *ಸಾಮಾನ್ಯ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಸಹಕಾರಿ*
ಕೆಎಂಎಫ್ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧ ಆಯ್ಕೆ