
5th July 2025
ಹೈದ್ರಾಬಾದ,ಜುಲೈ 04-ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ 2047ಕ್ಕೆ ಆಚರಿಸಲಿರುವ ಹಿನ್ನೆಲೆಯಲ್ಲಿ "ತೆಲಂಗಾಣ ರೈಸಿಂಗ್ " ಬ್ಯಾನರಿನಡಿ ಹೈದ್ರಾಬಾದದ ಪ್ರಗತಿನಗರ ಹಿರಿಯ ನಾಗರಿಕರ ಅಸೋಶಿಯೇಶನ್ ಆವರಣದಲ್ಲಿ ಗುರುವಾರ ವನ ಮಹೋತ್ಸವ ಆಚರಿಸಲಾಯಿತು.
ಹೈದ್ರಾಬಾದದ ನಿಜಾಂಪೇಟ ನಗರಸಭೆ ಮತ್ತು ಪ್ರಗತಿನಗರ ಹಿರಿಯ ನಾಗರಿಕರ ಅಸೋಶಿಯೇಶನ್ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಕಮಿಷನರ್ ಶ್ಯಾಮಸುಂದರ್,ನಿಜಾಂಪೇಟ ನಗರಸಭೆಯ ವ್ಯವಸ್ಥಾಪಕ ಜೈರಾಜ್, ಅಧೀಕ್ಷಕಿ ಸುಜಾತಾ, 4ನೇ ವಾರ್ಡ್ ಕಾರ್ಪೊರೇಟರ್ ಶ್ರೀರಾಮುಲು, ಹಿರಿಯ ನಾಗರಿಕರ ಅಸೋಸಿಯೇಷನ್ ಅಧ್ಯಕ್ಷ ಸಿ.ಹೆಚ್.ಕಾಮಯ್ಯ, ಕಾರ್ಯದರ್ಶಿ ಪಿ.ವಿರಾಮಾರಾವ, ಖಜಾಂಚಿ ಪುಲ್ಲಯ್ಯ ಮತ್ತಿತರ ಸದಸ್ಯರು, ನಗರಪಾಲಿಕೆ ಸಿಬ್ಬಂದಿಗಳು ಹಾಜರಿದ್ದು, ವನಮಹೋತ್ಸವ ಅಂಗವಾಗಿ ವಿವಿಧ ಸಸಿಗಳನ್ನು ನೆಟ್ಟು ನೀರೆರೆದರು.
ಕೆನರಾ ಬ್ಯಾಂಕಿನ 120 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮನ್ಸುರುದ್ದೀನ್