
5th July 2025
ಬಳ್ಳಾರಿ. ಜುಲೈ 04 : ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗಳು ತಮ್ಮ ಹಣಕಾಸಿನ ನೆರವಿನ ಮೂಲಕ ಜನಸಾಮಾನ್ಯರ ಜೀವನಕ್ಕೆ ಸಹಕಾರಿ ಆಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ ಅಭಿಪ್ರಾಯಪಟ್ಟರು.
ಅವರು ಗಾಂಧಿನಗರದ ಮೂರನೇ ಕ್ರಾಸ್ ನಲ್ಲಿ ಶಶಿಕಿರಣ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಕುಮಾರಸ್ವಾಮಿ ನಾಗರಾಜ್ ಅವರು ಮಾತನಾಡಿ, ನಮ್ಮ ಸೊಸೈಟಿಯ ಅಧ್ಯಕ್ಷರಾದ ಶಿವರಾಜ್ ತಂಗಡಗಿ ಅವರು ಮತ್ತು ಉಪಾಧ್ಯಕ್ಷ ನಿರಂಜನ್ ಕುಮಾರ್ ಅವರುಗಳು ಮತ್ತು ಇಡೀ ಸಲಹಾ ಸಮಿತಿ ನನ್ನ ಮೇಲೆ ವಿಶ್ವಾಸವಿಟ್ಟು ಬ್ಯಾಂಕಿನ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಅವರ ನಂಬಿಕೆಗೆ ಸ್ಥಿತಿ ಬರದಂತೆ ಈ ಶಾಖೆಯನ್ನು ಸಾರ್ವಜನಿಕರ ಮತ್ತು ಗ್ರಾಹಕರ ಸಹಕಾರದೊಂದಿಗೆ ಎಲ್ಲಾ ರೀತಿಯ ವ್ಯವಾರಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಿ ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದರು.
ನಮ್ಮ ಈ ಸೊಸೈಟಿಯನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಆದಷ್ಟು ಶೀಘ್ರದಲ್ಲಿ ನಮ್ಮ ಸೊಸೈಟಿಯನ್ನು ಮಡಿಕೇರಿ ಹೊರತುಪಡಿಸಿ ಎಲ್ಲಾ ಜಿಲ್ಲೆ ತಾಲೂಕುಗಳಲ್ಲಿ ಆರಂಭಿಸಲಿದ್ದೇವೆ ಎಂದು ಬ್ಯಾಂಕಿನ ಉಪಾಧ್ಯಕ್ಷರಾದ ನಿರಂಜನ್ ಕುಮಾರ್ ತಿಳಿಸಿದರು.
ಪತ್ರಕರ್ತರ ಪ್ರಶ್ನೆ ಒಂದಕ್ಕೆ ಉತ್ತರಿಸಿದ ತಂಗಡಗಿ ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 60 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ ಗೊಂಡಿದೆ ಮತ್ತು ನೀರಿನ ಒಳಹರಿವು ಕೂಡ ಉತ್ತಮ ರೀತಿಯಲ್ಲಿದೆ ಹೀಗಿರುವ ನೀರನ್ನು ನವೆಂಬರ್ ಅಂತ್ಯದವರೆಗೆ ಕಾಲುವೆಗಳಿಗೆ ಹರಿಸಲಾಗುವುದು ಇದರಿಂದ ಎಚ್ ಎಲ್ ಸಿ ಮತ್ತು ಎಲ್ಎಲ್ಸಿ ಕಾಲುವೆಯ ಅಚ್ಚುಕಟ್ಟಿನ ರೈತರು ಒಂದು ಬೆಳೆಯನ್ನು ಬೆಳೆಸಿಕೊಳ್ಳಬಹುದು, ಜಲಾಶಯದ ಗೇಟ್ಗಳನ್ನು ಅಳವಡಿಸುವುದು ಈಗಾಗಲೇ ಟೆಂಡರನ್ನು ಕರೆಯಲಾಗಿದೆ ಜಲಾಶಯದ ನಿರ್ವಹಣೆ ಕೇಂದ್ರ ಸರ್ಕಾರದ ಆ ದಿನದಲ್ಲಿರುತ್ತದೆ ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಗೇಟ್ಗಳ ಬದಲಿಸುವ ಅಥವಾ ದುರಸ್ತಿಯನ್ನು ಮಾಡಬೇಕಾಗಿದೆ ಗೇಟ್ ಅಳವಡಿಸುವ ಕಾರ್ಯ ಇನ್ನೂ ಐದಾರು ತಿಂಗಳು ತಡವಾಗಬಹುದು ಎಂದರು.
ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ. ಪಾಲಿಕೆಯ ಸದಸ್ಯರಾದ ಶ್ರೀನಿವಾಸ ಮಿಂಚು, ವಿ.ಕುಬೇರ, ಮುಖಂಡರಾದ ದೇವಿನಗರ ಮೊಹ್ಮದ್, ರಾಜೇಶ್ವರಿ ಸುಬ್ಬರಾಯುಡು, ಬಿ.ಆರ್.ಎಲ್.ಸೀನಾ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆನರಾ ಬ್ಯಾಂಕಿನ 120 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮನ್ಸುರುದ್ದೀನ್