

9th July 2025

ಬಳ್ಳಾರಿ ಜುಲೈ 06. ಡಾ.ಬಾಬು ಜಗಜೀವನ್ ರಾಂ ರವರು 38ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನಗಳನ್ನು ಸಲ್ಲಿಸಿದರು.
ನಂತರ ವೆಂಕಟೇಶ್ ಹೆಗಡೆ ರವರು ಮಾತನಾಡಿ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ ಅಂದರೆ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ಅವರು ಎಂದು ಹೇಳಿದರು.
ಉಪ ಪ್ರಧಾನಿ ಆಗಿ ಹಸಿರು ಕ್ರಾಂತಿ ಮಾಡಿದ ಮಹನೀಯ. ಆಹಾರ ಸಮಸ್ಯೆ ಎದುರಾದಾಗ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ಸಚಿವ. ಹಿಂದುಳಿದವರು ಎಂಬ ಕಾರಣಕ್ಕೆ ಅವರ ಪರ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ. ನಮ್ಮ ಜನಾಂಗ ಎಂದು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಜಗತ್ತಿಗೆ ಹೇಳುವಲ್ಲಿ ನಾವು ವಿಫಲ ಅದೆವು.
ಅಂಬೇಡ್ಕರ್, ಜಗಜೀವನ್ ರಾಮ್ ಈ ದೇಶದ ದೊಡ್ಡ ಆಸ್ತಿ. ನಾವು ಯುವ ಜನಾಂಗಕ್ಕೆ ಇದನ್ನು ಹೇಳಬೇಕಿದೆ. ಸ್ವಾಭಿಮಾನ ಬೆಳೆಸಿಕೊಳ್ಳಲು ಇಂತಹ ನಾಯಕರ ಬಗ್ಗೆ ಹೆಚ್ಚು ಹೇಳಬೇಕು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ಟಿ.ಆನಂದ್,ರಾಜು, ಹುಲುಗಪ್ಪ, ಲೋಕೇಶ್, ಸೀನ, ರಮೇಶ್, ನಾಗ, ಮದನ್, ಮುಂತಾದವರು ಉಪಸ್ಥಿತರಿದ್ದರು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ