
9th July 2025
ಬಳ್ಳಾರಿ ಜುಲೈ 06. ಸಿರುಗುಪ್ಪ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಮಂಡಲ ಅಧ್ಯಕ್ಷರಾದ ಕುಟ್ನಾಳ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಮಾನವೀಯತೆಯ ಆರಾಧಕ,ರಾಷ್ಟ್ರೀಯವಾದಿ ಚಿಂತಕ, ಶ್ರೇಷ್ಠ ಶಿಕ್ಷಣತಜ್ಞ, ಜನಸಂಘದ ಸಂಸ್ಥಾಪಕ ಅತ್ಯಂತ ಗೌರವಾನ್ವಿತ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ನಮನಗಳನ್ನು ಸಲ್ಲಿಸಲಾಯಿತು ಮತ್ತು ಮಾಜಿ ಉಪ ಪ್ರಧಾನಮಂತ್ರಿಗಳಾದ ಹಾಗೂ ಹಸಿರು ಕ್ರಾಂತಿಯ ಹರಿಕಾರರು ಬಾಬು ಜಗಜೀವನ್ ರಾವ್ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಎಂ ಎಸ್ ಸಿದ್ದಪ್ಪ. ತೆಕ್ಕಲಕೋಟೆ ಜಿಲ್ಲಾಧ್ಯಕ್ಷರು,ಬಿಜೆಪಿ ಯುವ ಮೋರ್ಚಾ,ಬಳ್ಳಾರಿ ಜಿಲ್ಲೆ, ನಗರಸಭೆಯ ಸದಸ್ಯರಾದ ಮೇಕೆಲ್ ವೀರೇಶ್ ಮಹದೇವ್ ರಾಮಕೃಷ್ಣ ಹಿರಿಯ ಮುಖಂಡರಾದ ಉಡೆಗೋಳ ಖಾಜಾಸಾಬ್ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಮಲ್ಲಿಕಾರ್ಜುನ ಫಕೀರಯ್ಯ ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ಮಂಜುನಾಥ ಮುಖಂಡರಾದ ಈರಣ್ಣ ಗಾದಿಲಿಂಗ ಚಿದಾನಂದ ಮಾಕಪ್ಪ ಮುದುಕಪ್ಪ ಕಾರ್ಯಕರ್ತರು ಭಾಗಿಯಾಗಿದ್ದರು.
ಗದಗ್ ಬೆಟಗೇರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗದಗ ಬೆಟಗೇರಿ