
9th July 2025
ಬಳ್ಳಾರಿ ಜುಲೈ 07. ಹಾಕಿ ಬಳ್ಳಾರಿ ಅಸೋಸಿಯೇಷನ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಪುರುಷರ ಯು 16 ಟೂರ್ನಮೆಂಟ್ 02.07.2025 ರಂದು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭ ಮಾಡಲಾಯಿತು. ದಿನಾಂಕ: 06.07.2025 ಭಾನುವಾರ ಸಂಜೆ 4:00ಗೆ ಹಾಕಿ ಬೆಂಗಳೂರು ಹಾಗೂ ಹಾಕಿ ಬಳ್ಳಾರಿ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಾಕಿ ಬೆಂಗಳೂರು 2-1 ಗೋಲುಗಲು ಸಾಧಿಸಿ ಫೈನಲ್ ಕಪ್ಅನ್ನು ಗೆದ್ದಿದೆ.
ಹಾಕಿ ಬೆಂಗಳೂರು ತಂಡದಿಂದ ಲೆನ್ನನ್ 1 ಗೋಲು ಹಾಗೂ ಮೋಹನ್ ಬಿ.ಪಿ. 1 ಗೋಲು ಸಾಧಿಸಿದ್ದಾರೆ. ಹಾಕಿ ಬಳ್ಳಾರಿ ತಂಡದಿಂದ ಬಾಲ ಗಣೇಶ್ 1 ಗೋಲ್ ಮಾಡಿದ್ದಾರೆ. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ, ಹಾಕಿ ಧಾರವಾಡ ತಂಡ 5-3 ಗೋಲುಗಳ ಅಂತರದಿಂದ ಹಾಕಿ ಕೊಡಗು ತಂಡವನ್ನು ಸೋಲಿಸಿದೆ.
ಈ ಟೂರ್ನಮೆಂಟ್ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ಎಲ್ಲಾ ತಂಡದ ಕ್ರೀಡಾಪಟುಗಳು ಹಾಕಿ ಬಳ್ಳಾರಿ ಅಸೋಸಿಯೇಷನ್ ನೀಡಿರುವ ಕ್ರೀಡಾಂಗಣ ವ್ಯವಸ್ಥೆ, ಊಟದ ವ್ಯವಸ್ಥೆ, ಹಾಗೂ ವಸತಿ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಹಾಕಿ ಬಳ್ಳಾರಿ ಅಸೋಸಿಯೇಷನ್ ಅಧ್ಯಕ್ಷರಾದ ಸಯ್ಯದ್ ಸೈಫುಲ್ಲಾ ಅವರು ಹಾಗೂ ಪಂದ್ಯದ ಕೋಚ್ ಶ್ರೀಧರ್ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಟೂರ್ನಮೆಂಟ್ ಗಳನ್ನು ನಡೆಸಿ ಹಾಕಿ ಬಳ್ಳಾರಿ ತಂಡದಿಂದ ಉತ್ತಮ ಆಟಗಾರರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳಾಗಿ ಮಾಡುವುದಾಗಿ ಭರವಸೆ ನೀಡಿದರು.
ಊಹಾಪೋಹದ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ : ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್