
9th July 2025
ಬಳ್ಳಾರಿ ಜುಲೈ 08: ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವರು ಹಿಂದುಳಿದ ಸಮಾಜದ ನಾಯಕರು ಆದ ಎಚ್. ಆಂಜನೇಯ ಅವರು ಅಲೆಮಾರಿಗಳ ಸ್ಥಾನಮನಕ್ಕಾಗಿ ಹೋರಾಟ ಮಾಡಿಕೊಂಡೆ ಬಂದಿದ್ದಾರೆ. ಬೆಂಗಳೂರು ನಗರದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ 49 ಜಾತಿಗಳ ಅಲೆಮಾರಿಗಳ ಮುಖಂಡರ ಸಭೆ ನಡೆಸುವಾಗ, ಕೊರಚ, ಕೊರವ ಸಮಾಜದ ಮುಖಂಡರಾದ ಜಿ.ಪಲ್ಲವಿ ಸಭೆಗೆ ಬಂದು ಗೊಂದಲ ಸೃಷ್ಟಿಸಿ ಗಲಾಟೆ ಮಾಡಿ ಕೆಲವು ಅಲೆಮಾರಿ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ನಿಜಕ್ಕೂ ಜಿ ಪಲ್ಲವಿ ಅವರು ಮಾಡಿದ ಅವಮಾನವೇ ಸರಿ ಇದರಿಂದ ಅಲೆಮಾರಿಗಳ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಅವರ ಆತ್ಮಸ್ಥೈರ್ಯಕ್ಕೆ ಕುಂದುಂಟಾಗಿದೆ.
ಒಂದು ವೇಳೆ ಅವರಿಗೆ ತಮ್ಮದೇ ಸಮಾಜದ ಕಾಳಜಿ ಇದ್ದರೆ ಅವರು ಪ್ರತ್ಯೇಕ ನಿಗಮ ಮಾಡಲು ಹೋರಾಟ ಮಾಡಲಿ. ಅದನ್ನು ಬಿಟ್ಟು ಅಲೆಮಾರಿಗಳ ನಾಯಕರ ಮೇಲೆ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಅಲೇಮಾರಿ ಸಂಘದ ಅಧ್ಯಕ್ಷ ಶಿವಕುಮಾರ್ ಹಾಗೂ 6 ಮಂದಿ ಮೇಲೆ ಪ್ರಕರಣ ದಾಖಲು ಮಾಡಿದ್ದು ನ್ಯಾಯಸಮ್ಮತ ಅಲ್ಲ. ಮೊದಲೇ ಅಲೆಮಾರಿಗಳು ಸಣ್ಣ ಸಮುದಾಯದವರು. ಸಂಘಟನಾತ್ಮಕವಾಗಿ ಭಾರೀ ಹಿಂದುಳಿದವರು. ಅಂತಹ ಸಮಾಜದ ಹೋರಾಟ ಬೆಂಬಲಿಸುವ ಮತ್ತು ಸಂವಿಧಾನಬದ್ಧ ಹಕ್ಕು ಕೊಡಿಸುವ ಮಹತ್ತರ ಕಾರ್ಯವನ್ನು ಎಚ್.ಆಂಜನೇಯ ಅವರು ಮಾಡಿದ್ದಾರೆ. ಅವರ ಕಾರ್ಯವನ್ನು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬೆಂಬಲಿಸಬೇಕು. ಅದು ಬಿಟ್ಟು ಸಭೆಯಲ್ಲಿದ್ದ ಸಮುದಾಯದ ಮುಖಂಡರಾದ ಶಿವಕುಮಾರ್ ಮತ್ತು ಇತರ ಆರು ಜನರ ವಿರುದ್ಧ ಸುಳ್ಳು ದೂರನ್ನು ದಾಖಲಿಸುತ್ತಾರೆ. ಈ ದೂರನ್ನು ಹಿಂಪಡೆಯಬೇಕು ಮತ್ತು ಏಳು ಜನರ ಕ್ಷಮೆಯನ್ನು ಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಇಡೀ ಸಮುದಾಯ ರಾಜ್ಯದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಸಮುದಾಯದ ಮುಖಂಡರಾದ ಮಹೇಶ್ ಮತ್ತು ಇತರರು ಆಗ್ರಹಿಸಿದರು.
ಜಿ ಪಲ್ಲವಿ ಅವರನ್ನು ಸಭೆಗೆ ಆಹ್ವಾನಿಸಿಲ್ಲ ಎಂಬ ಒಂದೇ ಕಾರಣಕ್ಕೆ ಏಕಾಏಕಿ ಸಭೆಗೆ ಬಂದು ಗಲಾಟೆ ಮಾಡಿ, ವಿರೋಧ ಮಾಡುವುದು ಸರಿ ಅಲ್ಲ. ಆಂಜನೇಯ ಅವರು ಹಿಂದುಳಿದ ಸಮಾಜದ ಮುಖಂಡರು ಎಲ್ಲರ ಶ್ರೇಯ ಬಯಸುವ ನಾಯಕರು, ಮೇಲಾಗಿ ಅವರು ಮಾಜಿ ಸಚಿವರು ಅವರಿದ್ದ ಸಭೆಯಲ್ಲಿ ಈ ರೀತಿ ಗೊಂದಲ ಸೃಷ್ಟಿ ಮಾಡುವ ಕಾರ್ಯ ಮಾಡಿದ್ದು ಸರಿ ಅಲ್ಲ ಇದು ಅವರಿಗೆ ಮಾಡಿದ ಅಪಮಾನ.
ಹಾಗಾಗಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಜಿ.ಪಲ್ಲವಿ ಅವರನ್ನು ಪರಿಶಿಷ್ಟ ಜಾತಿ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಬಳ್ಳಾರಿ ಜಿಲ್ಲಾ ಪರಿಶಿಷ್ಟ ಜಾತಿ ಅಲೆಮಾರಿ ಅರೆ ಅಲೆಮಾರಿ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಮುಖಂಡರಾದ ನಾಗರಾಜ್ ದುರ್ಗೇಶ್ ನಾಗಲಿಂಗ ಸತ್ಯಪ್ಪ ಲಿಂಗಪ್ಪ ಎಲ್ಲಪ್ಪ ಕೊಡ್ತೀನಿ ರಮೇಶ್ ಮಂಜುನಾಥ್ ಭರತ್ ಹುಚ್ಚಪ್ಪ ರಾಜೇಶ್ ಸೇರಿದಂತೆ ಹಲವರಿದ್ದರು.
ಲೋಕ ಕಲ್ಯಾಣಾರ್ಥಕ್ಕಾಗಿ 365 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ-ಕಲ್ಲೂರು ವೆಂಕಟೇಶುಲು ಶೆಟ್ಟಿ
ಕೇಂದ್ರ ಸರ್ಕಾರದಿಂದ ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಜಾರಿಗೆ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಿ: ಕೆ.ವಿ.ಪ್ರವೀಣ್
ಪೊಲೀಸ್ ರಮೇಶ್ 5300 ಕಿಲೋ ಮೀಟರ್ ಬೈಕ್ ರೈಡಿಂಗ್, ಹೆಲ್ಮೆಟ್ ಜಾಗ್ರತಿ ಅಭಿಯಾನ ಶ್ಲಾಘನೀಯ : ಎಸ್ಪಿ ಶೋಭರಾಣಿ
ಇತಿಹಾಸದಲ್ಲೇ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ರವರದ್ದು-ವೆಂಕಟೇಶ್ ಹೆಗಡೆ
ಶಿಕ್ಷಕರ ಆನ್ ಲೈನ್ ಹಾಜರಾತಿ "ಪ್ರತ್ಯಕ್ಷ" ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಚಾಲನೆ