
9th July 2025
ಬಳ್ಳಾರಿ ಜುಲೈ 08. ಬಳ್ಳಾರಿ ನಗರದ ವಿವಿ ಎಸ್ ಎಸ್ ಟ್ರಸ್ಟ್ ಕಚೇರಿಯಲ್ಲಿ ಫೆಬ್ರವರಿ 16 2025 ರಿಂದ ಲೋಕಕಲ್ಯಾಣಾರ್ಥಕ್ಕಾಗಿ 25-30 ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ನಿರಂತರವಾಗಿ ಒಂದು ವರ್ಷ ಕಾಲ ನಡೆಯುತ್ತಿದೆ ಎಂದು ವಿವಿಎಸ್ಎ ಸ್ ಟ್ರಸ್ಟ್ ಅಧ್ಯಕ್ಷರಾದ ಕಲ್ಲೂರು ವೆಂಕಟೇಶುಲು ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮ ವಿವಿಎಸ್ ಎಸ್ ಟ್ರಸ್ಟಿನ ಅಧ್ಯಕ್ಷರಾದ ವೆಂಕಟೇಶುಲು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಪ್ರತಿದಿನ ಸಾಯಂಕಾಲ 6:00 ಗಂಟೆಯಿಂದ 7:30 ವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ಇದರ ಜೊತೆಗೆ ಓಂಕಾರ ನಾದ, ಕನಕಧಾರ ಮಹಾಲಕ್ಷ್ಮಿ ಸ್ತೋತ್ರ , ಅಷ್ಠ ಲಕ್ಷ್ಮಿ ಸ್ತೋತ್ರ , ಇದರ ಜೊತೆಗೆ ಪ್ರತಿ ಮಂಗಳವಾರ ಮಣಿದೀಪ ವರ್ಣನೆ ಇನ್ನೂ ಇತರ ಕಾರ್ಯಕ್ರಮಗಳು ನಡೆಯುತ್ತವೆ ಎಂದು , ಹಾಗೂ ಪ್ರತಿದಿನ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿದೆ ಎಂದು ವೆಂಕಟೇಶುಲು ಶೆಟ್ಟಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಜಾರಿಗೆ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಿ: ಕೆ.ವಿ.ಪ್ರವೀಣ್
ಜಿ ಪಲ್ಲವಿ ಅವರನ್ನು ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಿ : ಎಸ್ ಎಮ್ ಮಹೇಶ್ ಆಗ್ರಹ
ಪೊಲೀಸ್ ರಮೇಶ್ 5300 ಕಿಲೋ ಮೀಟರ್ ಬೈಕ್ ರೈಡಿಂಗ್, ಹೆಲ್ಮೆಟ್ ಜಾಗ್ರತಿ ಅಭಿಯಾನ ಶ್ಲಾಘನೀಯ : ಎಸ್ಪಿ ಶೋಭರಾಣಿ
ಇತಿಹಾಸದಲ್ಲೇ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ರವರದ್ದು-ವೆಂಕಟೇಶ್ ಹೆಗಡೆ
ಶಿಕ್ಷಕರ ಆನ್ ಲೈನ್ ಹಾಜರಾತಿ "ಪ್ರತ್ಯಕ್ಷ" ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಚಾಲನೆ