

15th July 2025

ಬಳ್ಳಾರಿ ಜುಲೈ 15. ಐತಿಹಾಸಿಕ ಬಳ್ಳಾರಿ ಜಿಲ್ಲೆಯು ಕಾಂಗ್ರೆಸ್ನ ಭದ್ರಕೋಟೆಯಾಗಿ ಮುಂದುವರಿಯಲಿದೆ ಮತ್ತು ಅದನ್ನು ಬಿಜೆಪಿ ಭೇದಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಹೇಳಿದರು.
ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಸಾಕ್ಷಿಯಾದ ನೆಲದ ಐತಿಹಾಸಿಕ ಶ್ರೀಮಂತಿಕೆಯನ್ನು ಸ್ಮರಿಸಿದರು. "ಇಲ್ಲಿ ಮುತ್ತು ರತ್ನಗಳು ರಸ್ತೆ ಬದಿಯಲ್ಲಿ ಮಾರಲಾಗುತ್ತಿತ್ತು" ಎಂದು ಹೇಳುವ ಮೂಲಕ ಬಳ್ಳಾರಿಯ ಪರಂಪರೆಯನ್ನು ಎತ್ತಿ ಹಿಡಿದರು.
ಕಾಂಗ್ರೆಸ್ನ ಐತಿಹಾಸಿಕ ಹಿಡಿತ ಮತ್ತು ಇತ್ತೀಚಿನ ಗೆಲುವುಗಳು ಸ್ವಾತಂತ್ರ್ಯದ ನಂತರದಿಂದಲೂ ಬಳ್ಳಾರಿ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿದೆ ಎಂದು ಮಂಜುನಾಥ್ ಗೌಡ ಪ್ರತಿಪಾದಿಸಿದರು.
ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಕ್ರಮ ಗಣಿಗಾರಿಕೆಯು ಬಿಜೆಪಿಗೆ ಇಲ್ಲಿ ಕೆಲವು ಅವಕಾಶಗಳನ್ನು ನೀಡಿದರೂ, 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯ ಮತದಾರರು ಕಾಂಗ್ರೆಸ್ಗೆ ಭರ್ಜರಿ ಗೆಲುವು ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಅಭೂತಪೂರ್ವ ಗೆಲುವು ಸಾಧಿಸಿದ್ದು, ಇದು ಬಳ್ಳಾರಿಯಲ್ಲಿ ಕಾಂಗ್ರೆಸ್ನ ಬಲಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಪಕ್ಷ ಸಂಘಟನೆ ಕಾಂಗ್ರೆಸ್ನ ಇತ್ತೀಚಿನ ಈ ಗೆಲುವುಗಳಿಗೆ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಮಂಜುನಾಥ್ ಗೌಡ ಶ್ಲಾಘಿಸಿದರು. "ನೀವು ಪಕ್ಷವನ್ನು ಸಂಘಟಿಸಿದ್ದೀರಿ, ಪ್ರಚಾರ ಮಾಡಿದ್ದೀರಿ, ಪಕ್ಷದ ಪರ ಹೋರಾಡಿ ಕೇಸುಗಳನ್ನು ಹಾಕಿಸಿಕೊಂಡಿದ್ದೀರಿ" ಎಂದು ಅವರು ತಿಳಿಸಿದರು. ಕಾರ್ಯಕರ್ತರು ಹಗಲಿರುಳು ಶ್ರಮಿಸಿ, ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆಗೆ ತಲುಪಿಸಿದ್ದರಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಮತದಾರರಿಗೆ ನೀಡಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ ಎಂದು ಮಂಜುನಾಥ್ ಗೌಡ ಒತ್ತಿ ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ₹82,687 ಕೋಟಿ ಖರ್ಚು ಮಾಡಿದ್ದು, ನೇರವಾಗಿ ಜನರಿಗೆ ಲಾಭ ತಲುಪಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇ. 97.05ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ ತಲುಪಿದ್ದು, ಈ ಯೋಜನೆಗಳಿಂದ ಜನರ ಆರ್ಥಿಕ ಜೀವನಮಟ್ಟ ಸುಧಾರಿಸಿದೆ ಎಂದು ಅಧ್ಯಯನ ವರದಿಗಳಿಂದಲೂ ಸಾಬೀತಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಉದಾಹರಣೆಯಾಗಿ, ಜೂನ್ 2023 ರಿಂದ ಪ್ರಾರಂಭವಾದ ಮಹಿಳೆಯರಿಗಾಗಿನ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಏಪ್ರಿಲ್ 2025ರ ವರೆಗೆ ₹11,213 ಕೋಟಿ ವೆಚ್ಚ ಮಾಡಿದೆ. ಅಲ್ಲದೆ, ಆಗಸ್ಟ್ 2023ಕ್ಕೆ ಆರಂಭವಾದ ಗೃಹ ಲಕ್ಷ್ಮಿ ಯೋಜನೆಯಡಿ ಏಪ್ರಿಲ್ 2025ರ ವರೆಗೆ ₹44,376 ಕೋಟಿ ಹಣವನ್ನು ಮನೆಯ ಯಜಮಾನಿಯರ ಖಾತೆಗೆ ಜಮೆ ಮಾಡಲಾಗಿದೆ. ಈವರೆಗೆ ಒಟ್ಟು 1.24 ಕೋಟಿ ಮನೆ ಒಡತಿಯರ ಖಾತೆಗೆ ಹಣ ಸಂದಾಯವಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿಯ ವಿರುದ್ಧ ದ್ವೇಷ ರಾಜಕಾರಣದ ಆರೋಪ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಗಣಿ ಲೂಟಿ ಮತ್ತು 40% ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡಿಲ್ಲ ಎಂದು ಮಂಜುನಾಥ್ ಗೌಡ ಟೀಕಿಸಿದರು. ಕಾಂಗ್ರೆಸ್ನ ಜನಪರ ಕೆಲಸಗಳನ್ನು ನೋಡಿ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಜನ ಇ. ತುಕಾರಾಂ ಅವರನ್ನು ಗೆಲ್ಲಿಸಿದ್ದಾರೆ. ಈ ಜನಾದೇಶವನ್ನು ಸಹಿಸಲಾಗದೆ ಬಿಜೆಪಿ ವಾಲ್ಮೀಕಿ ನಿಗಮ ಹಗರಣದ ಆರೋಪ ಮಾಡಿತು. ಆದರೆ, ವಾಲ್ಮೀಕಿ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದೆ. ಇಡಿ ದಾಳಿ ಮಾಡಿದರೂ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪಪಟ್ಟಿ ಹಾಕಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಕಾಂಗ್ರೆಸ್ ಬಳ್ಳಾರಿ ಶಾಸಕರಾದ ನಾ. ರಾ. ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್ ಮತ್ತು ಎನ್.ಟಿ. ಶ್ರೀನಿವಾಸ್ ಅವರ ಮೇಲೆ ಐಟಿ-ಇಡಿ ದಾಳಿ ನಡೆಸಿ ಕೇಂದ್ರ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಂಜುನಾಥ್ ಗೌಡ ಆಕ್ರೋಶ ವ್ಯಕ್ತಪಡಿಸಿದರು. ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿ ಅವರ ಮೇಲೆ ಶಿಕ್ಷೆ ಪ್ರಕಟವಾಗಿದ್ದರೂ ಬಿಜೆಪಿಯವರು ಅವರನ್ನು ಹೊತ್ತು ಮೆರೆಸುತ್ತಿದ್ದಾರೆ ಎಂದು ಆರೋಪಿಸಿದರು.
ಐಟಿ-ಇಡಿ ದಾಳಿಗಳು ರಾಜಕೀಯ ಅಸ್ತ್ರಗಳಾಗಿ ಮಾರ್ಪಟ್ಟಿದ್ದು, ಶೇ. 98ರಷ್ಟು ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ನಡೆದಿದೆ. ಆದರೆ, ಅವರು ಬಿಜೆಪಿಗೆ ಸೇರಿದರೆ ಎಲ್ಲಾ ಪ್ರಕರಣಗಳು ರದ್ದಾಗುತ್ತವೆ ಎಂದು ಗಂಭೀರ ಆರೋಪ ಮಾಡಿದರು. "ಹಾಗಾದರೆ ಬ್ಲಾಕ್ ಮೇಲರ್ ಬಿಜೆಪಿಯೇನು ವಾಕಿಂಗ್ ಮೆಷಿನ್ ಇದ್ದಂತೆಯೇ? ಇಂತಹ ಅಪಾಯಕಾರಿ ಧೋರಣೆ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಬೇಕು. ಬಿಜೆಪಿ ಈ ರೀತಿಯ ನೀಚ ಕೃತ್ಯಗಳಿಗೆ ಕೈಹಾಕಿದಾಗಲೆಲ್ಲಾ ನಾವು ಬೀದಿಗೆ ಇಳಿದು ನ್ಯಾಯಕ್ಕಾಗಿ ಹೋರಾಡಬೇಕು" ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ