

18th July 2025

ಬಳ್ಳಾರಿ ಜುಲೈ 16 : ನಗರದ ಹೃದಯ ಭಾಗದಲ್ಲಿರುವ ಗಡಿಗಿ ಚೆನ್ನಪ್ಪ ವೃತ್ತವನ್ನು ಅತ್ಯಂತ ಉತ್ತಮವಾದ ಗುಣಮಟ್ಟದಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ನಗರದ ಜನರು ಸ್ವಲ್ಪ ತಾಳ್ಮೆಯಿಂದ ಇರಬೇಕು, ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು ಅದೇ ರೀತಿ ಗುಣಮಟ್ಟದ ಕಾಮಗಾರಿ ಬೇಕಾದಲ್ಲಿ ಸಂಚಾರದಲ್ಲಿ ಸಮಸ್ಯೆ ಕಾಣುವುದು ಸಹಜ ಸಾರ್ವಜನಿಕರು ಸಹಕರಿಸಬೇಕು ಯಾರೇ ಏನೇ ಒತ್ತಡ ಹಾಕಿದರೂ ಗಡಿಗಿ ಚನ್ನಪ್ಪ ವೃತ್ತವನ್ನು ಉತ್ತಮ ಗುಣಮಟ್ಟದಿಂದ ಸಂಪೂರ್ಣ ಕಾಮಗಾರಿ ಮುಗಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಗಡಿಗಿ ಚೆನ್ನಪ್ಪ ವೃತ್ತದ ಉದ್ಘಾಟನೆ ಉದ್ದೇಶವಾಗಿ ಮುಂದೂಡುತ್ತಿಲ್ಲ, ಕಾಮಗಾರಿ ನಡೆಸಲು ಸ್ವಲ್ಪ ವಿಳಂಬವಾಗುತ್ತಿದೆ ಮತ್ತು ಕಾಮಗಾರಿ ತಡವಾಗಿ ನಡೆಯಲು ಹಲವು ಕಾರಣಗಳಿವೆ, ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ, ಕೆಲ ಕಾಮಗಾರಿಗೆ ಸರ್ಕಾರದ ಅನಮೋದನೆ ವಿಳಂಬ ಆಗಿದೆ, ಆದ್ದರಿಂದ ಗಡಿಗಿ ಚನ್ನಪ್ಪ ವೃತ್ತ ಉದ್ಘಾಟನೆ ತಡವಾಗಿದೆ, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು, ಶಾಶ್ವತ ಕಾಮಗಾರಿ ಆಗಿರುವ ಕಾರಣ ಉತ್ತಮ ರೀತಿಯಲ್ಲೇ ಮಾಡಬೇಕಾಗಿದೆ, ಆದಷ್ಟು ಶೀಘ್ರದಲ್ಲೇ ವೃತ್ತವನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ- ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ ಗೆಲುವು- ಉಪಾಧ್ಯಕ್ಷರಾಗಿ ಅಂದಾನಗೌಡ, ಜಂಟಿ ಕಾರ್ಯದರ್ಶಿಯಾಗಿ ಮೇಲುಸಕ್ಕರಿ, ಖಜಾಂಚಿಯಾಗಿ ಪುಷ್ಷಾ ಬೇವೂರಗೆ ಆಯ್ಕೆ

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..