

27th July 2025

ಗಂಗಾವತಿ.
ನಗರದಲ್ಲಿ ಏಪ್ರಿಲ್ 1-2025 ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಸಹ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಿದ ನಗರಸಭೆ ಪರಿಸರ ಅಭಿಯಂತರರು ಮತ್ತು ಅಧಿಕಾರಿಗಳು ಆಕಾಶ ಎಂಟ್ರಪ್ರೈಸಸ್ ಮತ್ತು ಭವಾಜಿ ರೆಸ್ಟೋರೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜು.26 ರಂದು ಪರಿಶೀಲಿಸಿ ನಿಷೇಧಿತ ಪ್ಲಾಸ್ಟಿಕ್ ಗಳು ಕಂಡು ಬಂದಿದ್ದು, ಸದರಿ ಅಂಗಡಿಗಳ ಮಾಲೀಕರ ವಿರುದ್ಧ ಕಲಂ ಕಲಂ 15 ಪರಿಸರ ಸಂರಕ್ಷಣಾ ಕಾಯಿದೆ, 1986, ಕಲಂ 280 ಮತ್ತು 286 ಭಾರತೀಯ ನ್ಯಾಯ ಸಂಹಿತ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಲಂ 15 ಪರಿಸರ ಸಂರಕ್ಷಣಾ ಕಾಯಿದೆ, 1986 ಅಡಿಯಲ್ಲಿ ಒಂದು ವೇಳೆ ಆರೋಪ ಸಾಭೀತಾದಲ್ಲಿ, ಅಪರಾಧಿಗೆ 5 ವರ್ಷದವರೆಗೆ ಕಾರಾಗ್ರಹ ಶಿಕ್ಷೆ ಮತ್ತು ಒಂದು ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ.
ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಗಳನ್ನು ಬಳಸದಂತೆ ಮತ್ತು ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೂರು ತಿಂಗಳ ಹಿಂದೆ ನ್ಯಾಯಾಧೀಶರು, ನಗರಸಭೆ ಪೌರಾಯುಕ್ತರು, ತಾಲೂಕ ಆಡಳ೮ತದ ಅಧಿಕಾರಿಗಳು, ವಕೀಲರು, ವಿವುಧ ಸಂಘಟನೆಗಳ ಪದಾಧಿಕಾರಿಗಳು ಜಾಗೃತ ಜಾತ ನಡೆಸಿದ್ದರು. ಆದರೆ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾತ್ರ ಎಗ್ಗಿಲ್ಲದೇ ನಡೆಯುತ್ತಿತ್ತು. ಈ ಕುರಿತು ನ್ಯಾಯಾಧೀಶರು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಹೀಗಾಗಿ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ