
27th July 2025
ಯಲಬುರ್ಗಾ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೊಳಿಹಾಳ ಸೀಮಾದಲ್ಲಿ ಸರ್ವೆ ನ.109 ರಲ್ಲಿ 220 ಕೆವಿ ವಿದ್ಯುತ್ ಕಂಬಕ್ಕೆ ಲೈನ್ ಎಳೆಯುವ ಕಾಮಗಾರಿಗೆ ಅಡ್ಡಿ ಪಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನನ್ವಯ ಯಲಬುರ್ಗಾದ ಬಿಜೆಪಿ ಮುಖಂಡ ಶರಣಪ್ಪ ಗುಂಗಾಡಿ ವಿರುದ್ದ ಪ್ರಕರಣ ದಾಖಲಾಗಿದೆ.
ಈ ಕುರಿತು ಎಸ್ ಪಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಜು. 26 ರಂದು ಸಂಜೆ ಕೊಳಿಹಾಳ ಸೀಮಾದ ಸರ್ವೆ ನಂ: 109 ರಲ್ಲಿ ನಿರ್ಮಿಸಿದ್ದ 220 ಕೆ.ವಿ ವಿದ್ಯುತ್ ಕಂಬಕ್ಕೆ ಲೈನ್ ಎಳೆಯುವ ಕೆಲಸ ಮಾಡುತ್ತಿರುವಾಗ ಶರಣಪ್ಪ ಗುಂಗಾಡಿ ಹಾಗೂ ಇತರೆ 5-6 ಜನರು ಏಕಾಏಕೀಯಾಗಿ ಬಂದು ಗುಂಪು ಕಟ್ಟಿಕೊಂಡು ವಿದ್ಯುತ್ ಕಂಬದ ಹತ್ತಿರ ಬಂದು ನಮಗೆ ಪ್ರತಿ ಕಂಬಕ್ಕೆ 50 ಲಕ್ಷ ರೂಪಾಯಿಗಳನ್ನು ಕೊಟ್ಟು ಕಾಮಗಾರಿ ಮಾಡೀರಿ, ಇಲ್ಲಾ ಅಂದರೆ ಕೆಲಸ ಮಾಡಲು ಬೀಡುವುದಿಲ್ಲ, ಇಲ್ಲಿಯೇ ಮುಗಿಸಿ ಬಿಡ್ತೀವಿ ಎಂದು ಕಾಮಗಾರಿಗೆ ಅಡ್ಡಿಪಡಿಸಿರುವ ಕುರಿತು ಸೆರೆಂಟಿಕಾ ಕಂಪನಿಯಲ್ಲಿ ರೈಟ್ ಆಫ್ ವೇ ಆಫೀಸರ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಯಾದಿಗುಪ್ಪಾದ ಬುಡ್ಡಪ್ಪ ಹಿರೇಮನಿ ದೂರು ನೀಡಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಅಪಾದಿತ ಶರಣಪ್ಪ ತಂದೆ ತೋಟಪ್ಪ ಗುಂಗಾಡಿ ತನ್ನ ಫೇಸ್ಬುಕ್ ಖಾತೆಯಲ್ಲಿ ದ್ವೇಷ ಹರಡುವಂತೆ ಸುಳ್ಳು ಆಪಾದನೆ ಮಾಡಿ ಪೊಸ್ಟ್ ಮಾಡುತ್ತಿರುವುದರ ಕುರಿತು ಬೇವೂರ ಠಾಣೆಯಲ್ಲಿ ದಿನಾಂಕ-06.06.2025 ರಂದು ಗುನ್ನೆ ನಂ:82/2025 ಕಲಂ: 353(2), 352 ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು 29.06.2025 ರಂದು ವಿದ್ಯುತ್ ಲೈನ್ ಕಾಮಗಾರಿ ಸ್ಥಳದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇವೂರ ಠಾಣೆಯಲ್ಲಿ 89/2025 :189(2), 191(2), 126(2), 308(2), 352 & 190 -2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಹಲವಾರು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರಿಂದ ಆರೋಪಿತನ ವಿರುದ್ದ ಮುಂಜಾಗ್ರತ ಕ್ರಮವಾಗಿ ದಿನಾಂಕ-22.06.2025 ರಂದು ಪಿ.ಎ.ಆರ್ ನಂ: 18/2025 ಕಲಂ:126 ಬಿ.ಎನ್.ಎಸ್.ಎಸ್-2023 ಸೇರಿ ಗುಂಗಾಡಿ ವಿರುದ್ಧ 4 ಪ್ರಕರಣ ದಾಖಲಿಸಿ ಮುಂಜಾಗೃತ ಕ್ರಮವನ್ನು ಕೈಗೊಳ್ಳಾಗಿದೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬ ಆಚರಣೆ-ಬೋಯಪಾಟಿ ವಿಷ್ಣುವರ್ಧನ್
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮೆ ಕೊಡಲಿ-ಶ್ರೀರಾಮುಲು