
28th July 2025
ಕಾರಟಗಿ.
ಪಟ್ಟದ ಚಳ್ಳೂರು ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿರುವ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ರಾತ್ರಿ 10.00 ಗಂಟೆಗೆ ಕಾರಟಗಿ- ಚಳ್ಳೂರು ಮಾರ್ಗವಾಗಿ ಗಂಗಾವತಿ ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ಆಟೋ ವಾಹನ ಸಂಖ್ಯೆ KA 26 6315 ಹಾಗೂ ಅಂದಾಜು 8 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಅಗತ್ಯ ವಸ್ತುಗಳ ಕಾಯ್ದೆಯಡಿ, ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ವಾಹನ ಚಾಲಕ ಮತ್ತು ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಗಳು ಪರಾರಿಯಾಗಿದ್ದು, ಅಕ್ಕಿ ಸಾಗಾಣೆ ವಾಹನ ವಶ ಪಡಿಸಿಕೊಂಡಿರುವುದಾಗಿ ಕಾರಟಗಿ ಆಹಾರ ನಿರೀಕ್ಷ ನವೀನ ಮಠದ ಮಾಹಿತಿ ನೀಡಿದ್ದಾರೆ.
----------------
undefined
ಒಳ ಮೀಸಲಾತಿ ಜಾರಿಗೊಳಿಸಲು ಅರೆ ಬೆತ್ತಲೆ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಮಾದಿಗರಿಂದ ಭಾರಿ ಪ್ರತಿಭಟನೆ