
29th July 2025
ಕೊಪ್ಪಳ.
ಮುಂಗಾರು ಒಂದು ತಿಂಗಳ ಮುಂಚೆಯೇ ಪ್ರಾರಂಭವಾಗಿರುವುದರಿಂದ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವವಾಗಿದೆ. ತಕ್ಷಣ ಗೊಬ್ಬರ ಪೂರೈಸಲು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಬಿಜೆಪಿ ನಾಯಕರು ರೈತರ ಮೇಲೆ ರಾಜಕಾರಣ ಮಾಡುವ ಛಾಳಿ ಬಿಟ್ಟಿಲ್ಲ. ಗೊಬ್ಬರ ಅಭಾವದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ದೆಹಲಿಗೆ ಹೋಗಿ ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಬೇಕಾಗಿರುವ ಗೊಬ್ಬರ ಕೇಂದ್ರ ಸರಕಾರ ಪೂರೈಕೆ ಮಾಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಯೂರಿಯಾಬ ಗೊಬ್ಬರ ದಾಸ್ತಾನು ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಬಿಜೆಪಿ ಹೋರಾಟದ ಕುರಿತು ಪ್ರತಿಕ್ರೀಯೆ ನೀಡಿದರು. ರೈತರ ಬಗ್ಗೆ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಅಪಾರ ಕಾಳಜಿ ಇದೆ. ಬಿಜೆಪಿಗರಿಗೆ ಮಾಡಲು ಯಾವುದೇ ಕೆಲಸವಿಲ್ಲದ ಕಾರಣ ಈಗ ಗೊಬ್ಬರದ ವಿಷಯ ಎತ್ತಿಕೊಂಡು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಮುಂಗಾರು ಒಂದು ತಿಂಗಳ ಮುಂಚೆ ಬಂದು ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಹೀಗಾಗಿ ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಬಳಕೆಯಾಗಿದೆ. ಆದರೂ ಕೊಪ್ಪಳ ಜಿಲ್ಲೆಯಲ್ಲಿ ಅಧಿಕಾರಿಗಳು ಯೂರಿಯಾ ಗೊಬ್ಬರ ಕೊರತೆಯಾಗದಂತೆ ಜಾಗೃತಿವಹಿಸಿದ್ದಾರೆ. ಕೆಲವು ಹಳ್ಳಿಗಳಲ್ಲಿ ಸೋಸೈಟಿ ಮೂಲಕ ವಿತರಣೆಯಾಗುವಲ್ಲಿ ವಿಳಂಬವಾಗಿದೆ. ರೈತರು ಗೊಬ್ಬರಕ್ಕಾಗಿ ಸಹಜವಾಗಿ ಧ್ವನಿ ಎತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ರೈತರ ಬಳಿ ಹೋಗಿ ಕಣ್ಣೊರಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಗೊಬ್ಬರ ಪೂರೈಕೆ ಮತ್ತು ದಾಸ್ತಾನು ಬಗ್ಗೆ ಮಾಹಿತಿಯೇ ಇಲ್ಲ. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಮೌನವಹಿಸಿರುವ ಬಿಜೆಪಿಗರು ವಿನಾಕಾರಣ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರ ಹಾರಾಟ ಚಿರಾಟದ ಬಗ್ಗೆ ಜನರಿಗೆ ಅರ್ಥ ಆಗಿದೆ. ನಾವು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಿದಂತೆ ಗೊಬ್ಬರ ಪೂರೈಕೆ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲಾ ಮಾಹಿತಿ ಪಡೆದುಕೊಂಡು ಗೊಬ್ಬರ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಲು ಸೂಚಿಸಿದ್ದೇನೆ. ಎಲ್ಲವು ಸರಿಯಾಗುತ್ತದೆ ಎಂದು ತಂಗಡಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮತ್ತಿತರು ಇದ್ದರು.
ಬಾಕ್ಸ್;
ಶರಣೇಗೌಡ ಕೆಸರಹಟ್ಟಿ ವಿರುದ್ಧ ಕಿಡಿ
ಗೊಬ್ಬರ ವಿಷಯ ಕುರಿತು ಸಭೆ ನಡೆಸಿದ ಸಚಿವ ಶಿವರಾಜ ತಂಗಡಗಿ ಮಾಧ್ಯಮ ಗೋಷ್ಟಿ ನಡೆಸಲು ಮುಂದಾಗುತ್ತಿದ್ದಂತೆ ರೈತ ಮುಖಂಡ ಶರಣೇಗೌಡ ಕೆಸರಹಟ್ಟಿ ಆಗಮಿಸಿ ಮೊದಲು ರೈತರ ಸಮಸ್ಯೆ ಆಲಿಸಿ. ಮಾಧ್ಯಮದವರು ಸಚಿವರ ಮಾತು ಕೇಳಿ ಹೋಗುತ್ತಾರೆ. ರೈತರ ಸಮಸ್ಯೆ ತೊರಿವುದಿಲ್ಲ ಎಂದು ಧ್ವನಿ ಎತ್ತುತ್ತಿದ್ದಂತೆ ಎಚ್ಚತ್ತ ಸಚಿವ ಶಿವರಾಜ ತಂಗಡಗಿ ಗೊಬ್ಬರ ದಾಸ್ತಾನು ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತಿದೆ. ರೈತರೊಂದಿಗೆ ಚರ್ಚಿಸುತ್ತೇನೆ. ಸ್ವಲ್ಪ ಹೊತ್ತು ತಾಳ್ಮೆಯಿಂದ ಇರಿ ಎಂದು ಸಮಾಧಾನಪಡಿಸಿದರು. ಈ ಮಧ್ಯ ಜಿಲ್ಲಾಧಿಕಾರಿಗಳು ಶರಣೇಗೌಡ ಮುಂಚಿತವಾಗಿಯೇ ಗೊಬ್ಬರ ಪಡೆದುಕೊಂಡು ಹಂಚಿಕೆ ಮಾಡಿದ್ದಾನೆ ಎಂದು ಮಾಹಿತಿ ನೀಡುತ್ತಿದ್ದಂತೆ ಗರ್ಂ ಆದ ಸಚಿವ ತಂಗಡಗಿ ಅವರ ಟ್ರೇಡರ್ಸ್ ರದ್ದುಪಡಿಸಿ. ಈ ರೀತಿ ಮಾಡುವವರಿಗೆ ಅವಕಾಶ ಕೊಡಬೇಡಿ ಎಂದು ಸೂಚನೆ ನೀಡಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬ ಆಚರಣೆ-ಬೋಯಪಾಟಿ ವಿಷ್ಣುವರ್ಧನ್
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮೆ ಕೊಡಲಿ-ಶ್ರೀರಾಮುಲು