

29th July 2025

ಬಳ್ಳಾರಿ, ಜು.29: ಮಂಗಳವಾರ ಬೆಳಿಗ್ಗೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ವಿಕ್ಕಿ (03) ಪೋಷಕರನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಮಧ್ಯಾಹ್ನ ಬಿಎಂಆರ್'ಸಿಯ ಶವಾಗಾರದ ಬಳಿ ಭೇಟಿಯಾಗಿ ಸಾಂತ್ವನ ಹೇಳಿದರು.
ಮೃತ ಬಾಲಕನ ಕುಟುಂಬಕ್ಕೆ ಶಾಸಕ ನಾರಾ ಭರತ್ ರೆಡ್ಡಿ 50 ಸಾವಿರ ರೂ.ಗಳ ವೈಯಕ್ತಿಕ ಪರಿಹಾರ ನೀಡಿದರು, ಇನ್ನೂ ಹೆಚ್ಚಿನ ಪರಿಹಾರವನ್ನು ಸಿಎಂ ಅವರ ನಿಧಿಯಿಂದ ಕೊಡಿಸುವುದಾಗಿ ಭರವಸೆ ನೀಡಿದರು.
ಮೃತ ಬಾಲಕನ ಕುಟುಂಬದ ಸದಸ್ಯರೊಬ್ಬರಿಗೆ ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪಘಾತಕ್ಕೆ ಕಾರಣನಾದ ಪಾಲಿಕೆಯ ಕಸ ವಿಲೇವಾರಿ ವಾಹನದ ಚಾಲಕನನ್ನು ಅಮಾನತು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ಜಬ್ಬಾರ್, ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಶಿವರಾಜ್, ಸುಬ್ಬರಾಯುಡು ಮೊದಲಾದವರು ಹಾಜರಿದ್ದರು.

ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ- ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ ಗೆಲುವು- ಉಪಾಧ್ಯಕ್ಷರಾಗಿ ಅಂದಾನಗೌಡ, ಜಂಟಿ ಕಾರ್ಯದರ್ಶಿಯಾಗಿ ಮೇಲುಸಕ್ಕರಿ, ಖಜಾಂಚಿಯಾಗಿ ಪುಷ್ಷಾ ಬೇವೂರಗೆ ಆಯ್ಕೆ

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..