
29th July 2025
ಬಳ್ಳಾರಿ ಜುಲೈ 29. ಸಿರುಗುಪ್ಪ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಿಂದ ಕಾಲ್ನಡಿಗೆ ಮುಖಾಂತರ ಗಾಂಧಿ ವೃತ್ತದ ವರೆಗೆ ಬೃಹತ್ ಪ್ರತಿಭಟನೆಯನ್ನು ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕ ರೈತ ಮೋರ್ಚಾ ವತಿಯಿಂದ ರೈತರ ಭತ್ತದ ಗದ್ದೆಗಳಿಗೆ ಬೇಕಾಗಿರುವ ವಿರಿಯ ಹಾಗೂ ರಸಗೊಬ್ಬರ ರೈತರಿಗೆ ಬಹಳ ಅವಶ್ಯಕತೆ ಇದ್ದು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಒದಗಿಸದೆ ಇರುವ ಕಾರಣ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ತಾಲೂಕ ರೈತ ಮೋರ್ಚಾ ಅಧ್ಯಕ್ಷರಾದ ಶಿವರಾಮ ಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದಪ್ಪ, ನಗರಸಭೆಯ ಸದಸ್ಯರಾದ ಮೇಕೆಲಿ ವೀರೇಶ್, ಮೋಹನ್ ರೆಡ್ಡಿ, ಮಹಾದೇವ್ ,ನಟರಾಜ್ ,ವಿಕ್ರಂ, ಜೈ ಹಿರಿಯರಾದ ಉಡೆಗೋಳ ಖಾಜಾಸಾಬ್, ಇಬ್ರಾಂಪುರ ವೀರನಗೌಡ, ಎಚ್ ಶೇಕಪ್ಪ, ರುದ್ರಮನಿ ಗೌಡ, ಶಿವ ರೆಡ್ಡಿ ಗೌಡ,ಎಸ್ಟಿ ಮೋರ್ಚ ತಾಲೂಕ್ ಅಧ್ಯಕ್ಷರಾದ ಶಿವಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಶರಣಬಸವ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಕೋರಿ ಪಿಡ್ಡಯ್ಯ, ಶರಣಬಸು, ಸಾವಕಾರ್ ಲಕ್ಷ್ಮಿಪತಿ ಗೌಡ, ವೀರೇಂದ್ರ ಸಾಹುಕಾರ್ ,ಹಳೆಕೋಟೆ ಶಂಕ್ರಪ್ಪ, ಈರಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ, ಫಕೀರಯ್ಯ, ಗಾದಿಲಿಂಗ, ಹನುಮಂತಪ್ಪ, ಮುದುಕಪ್ಪ, ಹೊನ್ನೂರಪ್ಪ, ಶ್ರೀಧರ, ಹೊನ್ನಪ್ಪ, ಅಯ್ಯಪ್ಪ ,ರಾಜಶೇಖರ ಗೌಡ ಮತ್ತು ರೈತರು ಮುಖಂಡರು, ಕಾರ್ಯಕರ್ತರು ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬ ಆಚರಣೆ-ಬೋಯಪಾಟಿ ವಿಷ್ಣುವರ್ಧನ್
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮೆ ಕೊಡಲಿ-ಶ್ರೀರಾಮುಲು