
29th July 2025
ಬಳ್ಳಾರಿ ಜುಲೈ 26: ನಗರದ ಹರಿಚಂದ್ರ ಘಾಟ್ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗದವರ ಮಾರಾಮಾರಿಯಿಂದಾಗಿ ವಾಲ್ಮೀಕಿ ಜನಾಂಗದ ಹೆಂಗಸರು ಮತ್ತು ಗಂಡಸರಿಗೆ ದೈಹಿಕ ಗಾಯಗಳಾಗಿ ಬಿಎಮ್ಆರ್ಸಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಎಂಎಲ್ಸಿ ಮಾಡಿಸಿದ್ದರು ಸಹ ಗ್ರಾಮೀಣ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸದೆ ಕಳೆದ ಮೂರು ದಿನಗಳಿಂದ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದರು.
ಮನೆ ಮುಂದಿನ ರಸ್ತೆಯಲ್ಲಿ
ದ್ವಿಚಕ್ರ ವಾಹನವನ್ನು ಓಡಿಸುವ ಘಟನೆ ಯಿಂದ ಆರಂಭವಾದ ಜಗಳ ಮಾರ ಮಾರಿಗೆ ತಿರುಗಿ ದ್ವಿಚಕ್ರ ವಾಹನ ಸವಾರರದ ರಾಮ್ ಬಾಬು ಮತ್ತು ಉಮೇಶ್ ಮತ್ತು ಇತರ 15 -20 ಜನರು ನಮ್ಮ ಮನೆಗೆ ಬಂದು ಹೆಂಗಸರು ಗಂಡಸರು ಎನ್ನದಂತೆ ಬಡಿಗೆ ರಾಡುಗಳಿಂದ ಹಲ್ಲೆ ಮಾಡಿ, ಅವಾಚ್ಚ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಘಟನೆಯಲ್ಲಿ ಗಾಯಗೊಂಡ ನಾವುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇವೆ ಮತ್ತು ನಮ್ಮ ಕುಟುಂಬದ ಇತರ ಸದಸ್ಯರು ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಘಟನೆ ಕುರಿತು ಈಗಾಗಲೇ ಎಂಎಲ್ಸಿ ಆಗಿರುತ್ತದೆ ಎಫ್ಐಆರ್ ದಾಖಲಿಸುವಂತೆ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಕೇಳಿಕೊಂಡಾಗ ಕಳೆದ ಮೂರು ನಾಲ್ಕು ದಿನಗಳಿಂದ ಅವರು ನಮ್ಮನ್ನು ಠಾಣೆಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದ ಅವರು ಸೂರಿ ಅಂಜಿ ವೆಂಕಟೇಶ್ ರಾಮ್ ಬಾಬು ಉಮೇಶ್ ಮತ್ತು ಇತರರ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ರವಿಕುಮಾರ್ ದೂರುದಾರರನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಎಂಎಲ್ಸಿ ಆಗಿದೆ ಮುಂದುವರೆದು ನಾವು ಎಫ್ ಐ ಆರ್ ಮಾಡೇ ಮಾಡುತ್ತೇವೆ ಗಾಯಾಳು ಯಾರಾದರೂ ಠಾಣೆಗೆ ಬಂದು ದೂರು ನೀಡಿ ತಕ್ಷಣವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದ ರಾಶಿ, ಪ್ರಧಾನ ಕಾರ್ಯದರ್ಶಿ ಎನ್ ಸತ್ಯನಾರಾಯಣ, ವಾಲ್ಮೀಕಿ ಜನಾಂಗದ ಮುಖಂಡರುಗಳಾದ ವಿಕೆ ಬಸಪ್ಪ, ವಕೀಲರಾದ ಬಿ ಜಯಾರಾಮ್, ಬಿ ರುದ್ರಪ್ಪ, ಎರಗುಡಿ ಮುದಿಮಲ್ಲಯ್ಯ, ಹಗರಿ ಜನಾರ್ದನ, ಮಿಂಚೇರಿ ರಾಮಾಂಜನಿ, ಕಾಯಿ ಗಡ್ಡೆ ಬಸವರಾಜ, ದುರ್ಗಪ್ಪ, ಬೆಣಕಲ್ ಸುರೇಶ್ ಸೇರಿದಂತೆ ಹಲವಾರು ವಾಲ್ಮೀಕಿ ಮುಖಂಡರಿದ್ದರು.
ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ
ಶ್ರೀ ರಾಮರಾಜು ಫೌಂಡೇಶನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ- 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಯಶಸ್ವಿ-ರಾಮರಾಜು
ಕನಕ ದುರ್ಗಮ್ಮ ದೇವಸ್ಥಾನದ ಹುಂಡಿ ಹಣ ಎಣಿಕೆ, 67 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ -ಹನುಮಂತಪ್ಪ